लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ರೆಡ್ಡಿಯವರೇ, ರಾಜ್ಯವನ್ನು ಈ ಭ್ರಷ್ಟರಿಂದ ಉಳಿಸಲು ಈಗ ಒಳ್ಳೆಯವರೆಲ್ಲ ಜೊತೆಗೂಡಬೇಕು….

1 min read

“ರೆಡ್ಡಿಯವರೇ, ರಾಜ್ಯವನ್ನು ಈ ಭ್ರಷ್ಟರಿಂದ ಉಳಿಸಲು ಈಗ ಒಳ್ಳೆಯವರೆಲ್ಲ ಜೊತೆಗೂಡಬೇಕು. ಅದಕ್ಕಾಗಿ ಅವರು Magnanimity ತೋರಿಸಬೇಕು. Ten people coming together is a beginning; keeping together is progress; working together is success. ಈ ನಿಟ್ಟಿನಲ್ಲಿ ನೀವು ಒಂದಷ್ಟು initiative ತೆಗೆದುಕೊಂಡು ಎಲ್ಲರನ್ನೂ ಸೇರಿಸಲು ಪ್ರಯತ್ನಿಸಿ. ಈಗಾಗಲೇ ನೀವು ರಾಜ್ಯದಲ್ಲಿ ಸಾಕಷ್ಟು ಪರಿಚಿತರಾಗಿದ್ದೀರಿ. ನಿಮ್ಮ ಮೇಲೆ ಜನರಿಗೆ ವಿಶ್ವಾಸವಿದೆ. ಮತ್ತು ನೀವು ಕರೆದರೆ ಇವರೆಲ್ಲ ಬರಬಹುದು.”

ನನ್ನೊಡನೆ ಹೀಗೆಂದವರು ಮಾಜಿ ಮಂತ್ರಿ ಬಿ. ಸೋಮಶೇಖರ್’ರವರು. ಶಿಕ್ಷಣ ಮಂತ್ರಿಯಾಗಿ ಮತ್ತು ಕಂದಾಯ ಸಚಿವರಾಗಿ ಇವರು ಅನೇಕ ಆಡಳಿತಾತ್ಮಕ ಮತ್ತು ಚಾರಿತ್ರಿಕ ಸುಧಾರಣೆಗಳನ್ನು ತಂದವರು. ರಾಜ್ಯ ಕಂಡ ದಕ್ಷ ಮತ್ತು ಪ್ರಾಮಾಣಿಕ ಮಂತ್ರಿಗಳಲ್ಲಿ ಒಬ್ಬರು. ಇವರ ದಕ್ಷತೆ ಮತ್ತು ಪ್ರಾಮಾಣಿಕತೆಯಲ್ಲಿ ಹಾಲಿ ಕಂದಾಯ ಸಚಿವ ಕೃಷ್ಣ ಭೈರೇಗೌಡರು 10% ಇದ್ದರೂ ಸಾಕು, ಇಂದಿನ ಭ್ರಷ್ಟ ಕಂದಾಯ ಇಲಾಖೆಯನ್ನೇ ಆಮೂಲಾಗ್ರವಾಗಿ ಬದಲಾಯಿಸಬಹುದು. ಆಡಳಿತದಲ್ಲಿ, ಆಲೋಚನೆಯಲ್ಲಿ, ಅನುಷ್ಠಾನದಲ್ಲಿ ಅಂತಹ ಬೆಂಕಿಕೆಂಡ ಬಿ. ಸೋಮಶೇಖರ್.

ತಮಿಳುನಾಡಿನ ಚುನಾವಣೆಯ ಹಿನ್ನೆಲೆಯಲ್ಲಿ ಮೂರು ದಿನದ ಹಿಂದಷ್ಟೇ ನಾವು ಭೇಟಿಯಾಗಿದ್ದಾಗ ಅವರು ನನ್ನೊಡನೆ ಹೀಗೆ ಅಂದಿದ್ದಕ್ಕೆ ಅವರ ಮಾತಿಗೆ ಪೂರಕವಾಗಿ ಮತ್ತು ಸಕಾರಾತ್ಮಕವಾಗಿ ನಾನೂ ಸ್ಪಂದಿಸಬೇಕು ಎಂದು ತೀರ್ಮಾನಿಸಿ ಅಂದೇ ನಾನು ಮಹಿಮಾ ಪಟೇಲರೊಂದಿಗೆ, ಮುಖ್ಯಮಂತ್ರಿ ಚಂದ್ರು, ಎಂ.ಪಿ. ನಾಡಗೌಡ, AT ರಾಮಸ್ವಾಮಿಯವರೊಂದಿಗೆ ಫೋನಿನಲ್ಲಿ ಮಾತನಾಡಿ ಸೋಮಶೇಖರ್’ರವರು ಹೇಳಿದ ವಿಚಾರವನ್ನು ಪ್ರಸ್ತಾಪಿಸಿ, ಅವರ ಅಭಿಪ್ರಾಯ ಕೇಳಿದೆ. ಎಲ್ಲರೂ ಬಹಳ ಗೌರವ ಮತ್ತು ದೊಡ್ಡತನದಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಇವರ ತರಹದ ಇನ್ನೂ ಅನೇಕರನ್ನು ಭೇಟಿ ಮಾಡುವ ಮತ್ತು ಮಾತನಾಡಿಸುವ ಪ್ರಯತ್ನ ಮುಂದಿನ ದಿನಗಳಲ್ಲಿ ಮಾಡುತ್ತೇನೆ. ಇಷ್ಟರಲ್ಲಿಯೇ ಬೆಂಗಳೂರಿನಲ್ಲಿ ನಡೆಯಲಿರುವ ಸಭೆಗೆ ಕಾರಣಾಂತರಗಳಿಂದ ಬರಲಾಗದೆ ಹೋದವರನ್ನು ಅವರಿರುವ ಊರಿಗೇ ಹೋಗಿ ಭೇಟಿ ಮಾಡಲು ವೇಳಾಪಟ್ಟಿ ಸಿದ್ಧ ಮಾಡುತ್ತಿದ್ದೇನೆ.

ಅದೇ ರೀತಿಯಾಗಿ, ಉಪೇಂದ್ರರ ಪ್ರಜಾಕೀಯ ಮತ್ತು ನಮ್ಮ KRS ಜೊತೆಗೂಡಬೇಕು ಎಂದೂ ಸಾಕಷ್ಟು ಜನ ಸಾಮಾಜಿಕ ಮಾಧ್ಯಮಗಳಲ್ಲಿ ಒತ್ತಾಯಿಸುತ್ತಿದ್ದಾರೆ. ಈ ವಿಚಾರವಾಗಿ ಇಷ್ಟರಲ್ಲಿಯೇ ಅವರನ್ನೂ ಭೇಟಿ ಮಾಡಿ ಚರ್ಚಿಸುವ ಸಾಧ್ಯತೆಗಳಿವೆ. ಒಂದೆರಡು ತಿಂಗಳ ಹಿಂದೆಯೇ ಮಹಿಮಾ ಪಟೇಲರೊಂದಿಗೆ ಉಪೇಂದ್ರರನ್ನು ಭೇಟಿ ಮಾಡಬೇಕಿತ್ತು. ಕಾರಣಾಂತರಗಳಿಂದ ಆಗಿರಲಿಲ್ಲ.

ಅಂದಹಾಗೆ, ಚುನಾವಣಾ ಮತ್ತು ಅಧಿಕಾರ ರಾಜಕಾರಣದಲ್ಲಿದ್ದೂ ಅಷ್ಟೇನೂ ಹೆಸರು ಕೆಡಿಸಿಕೊಂಡಿಲ್ಲದ ಮತ್ತು ಜನಪರ ಕಾಳಜಿಯಿರುವ ಯಾವೆಲ್ಲಾ ಪ್ರಾಮಾಣಿಕ ರಾಜಕಾರಣಿಗಳನ್ನು ನಾನು ಭೇಟಿಯಾಗಬೇಕು, ಮಾತನಾಡಿಸಬೇಕು ಎಂದು ನಿಮಗನಿಸುತ್ತದೆ? ಅಂತಹ ಯಾವುದಾದರೂ ಹೆಸರುಗಳು ನಿಮಗೆ ತೋಚಿದಲ್ಲಿ ದಯವಿಟ್ಟು ಕಾಮೆಂಟ್ ಮಾಡಿ ತಿಳಿಸಿ.

ನಮ್ಮಲ್ಲಿಯ ಇಂದಿನ ಕಡುಭ್ರಷ್ಟ ರಾಜಕಾರಣವನ್ನು ತೊಲಗಿಸಿ, ಪ್ರಜಾಸತ್ತೆ-ವಿರೋಧಿಯಾದ ಕುಟುಂಬ ರಾಜಕಾರಣವನ್ನು ಅಂತ್ಯಗೊಳಿಸಿ, ಭ್ರಷ್ಟಾಚಾರ-ರಹಿತ ಆಡಳಿತ ಮತ್ತು ಸಾಮಾಜಿಕ ನ್ಯಾಯದ ಸಾಕಾರಕ್ಕಾಗಿ ಒಳ್ಳೆಯ ಜನರು ಇಂದು ಖಂಡಿತವಾಗಿ ಮತ್ತು ಅನಿವಾರ್ಯವಾಗಿ ಒಂದಾಗಬೇಕಿದೆ. ಜನಪರ ಕಾಳಜಿಯ ಪ್ರಾಮಾಣಿಕ ರಾಜಕಾರಣಿಗಳು, ಹೋರಾಟಗಾರರು, ಸಮಾಜಮುಖಿ ಚಿಂತಕರು, ತಮ್ಮ ಭವಿಷ್ಯದ ಬಗ್ಗೆ ಕಾಳಜಿಯಿರುವ ಯುವಜನರು ಇಂದು ಜೊತೆಗೂಡದೆ ಹೋದಲ್ಲಿ ನಮ್ಮ ರಾಜ್ಯ inevitable ಆದ ಪ್ರಳಯಾಂತಕ ಅಪಾಯದಿಂದ ಪಾರಾಗದು. ಆ ನಿಟ್ಟಿನಲ್ಲಿ ನಾನು ಯಾವುದೇ ಬಿಗುಮಾನ, ಮೇಲರಿಮೆ, ಕೀಳರಿಮೆ ಇಟ್ಟುಕೊಳ್ಳದೆ ಎಲ್ಲರನ್ನೂ ಮಾತನಾಡಿಸುವ ಮತ್ತು ಜೊತೆಗೂಡಿಸುವ ಪ್ರಯತ್ನವನ್ನು ಮಾಡುತ್ತೇನೆ. ಮಹಿಮಾ ಪಟೇಲರಂತೂ ಹೀಗೆ ಜೋಡಿಸುವ ವಿಷಯದಲ್ಲಿ ಮೊದಲಿನಿಂದಲೂ ಆಸಕ್ತರು ಮತ್ತು ಕ್ರಿಯಾಶೀಲರು. ಈಗ ಇನ್ನಷ್ಟು ಜನ ಇದಕ್ಕೆ ಮುಂದಾಗಿದ್ದಾರೆ. ಮುಂದಿನದು ರಾಜ್ಯದ ಜನರಿಚ್ಚೆ.

ಏನೇ ಆಗಲಿ, ಒಳ್ಳೆಯದನ್ನೇ ಮಾಡಿ; ಮಾಡುತ್ತಲೇ ಇರಿ.

– ರವಿ ಕೃಷ್ಣಾರೆಡ್ಡಿ
ಗೌರವಾಧ್ಯಕ್ಷ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ – KRS Party

08-05-2026.

About Author

Leave a Reply

Your email address will not be published. Required fields are marked *

You may have missed