लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎ಅಕ್ರಮವಾಗಿ ಮಣ್ಣು ಮುಕ್ಕ ಹಾವು, (RED SAND BOA) ನ್ನು ಮಾರಾಟ ಮಾಡುವಾಗ ಐದು ಜನರ ಬಂಧನ. ‎…

1 min read

‎ಅಕ್ರಮವಾಗಿ ಮಣ್ಣು ಮುಕ್ಕ ಹಾವು, (RED SAND BOA) ನ್ನು ಮಾರಾಟ ಮಾಡುವಾಗ ಐದು ಜನರ ಬಂಧನ.
‎
‎ದಿನಾಂಕ : 11-05-2026 ರಂದು ಚಿಕ್ಕಮಗಳೂರು ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಪೊಲೀಸರಿಗೆ ದೊರೆತ ಮಾಹಿತಿಯಂತೆ ಚಿಕ್ಕಮಗಳೂರು ವಾಜಪೇಯಿ ಬಡಾವಣೆಯ ಜೋಡು ರಸ್ತೆಯ ಬಳಿ ಮಣ್ಣು ಮುಕ್ಕ ಹಾವನ್ನು ಮಾರಾಟಕ್ಕೆ ಯತ್ನಿಸುತ್ತಿದ್ದಾರೆ ಎಂಬುದಾಗಿ ದೊರೆತ ಮಾಹಿತಿಯಂತೆ ಸಮಯ ಮದ್ಯಾಹ್ನ 14-15 ಗಂಟೆಗೆ ವಾಜಪೇಯಿ ಬಡಾವಣೆಯ ಬಳಿಯಲ್ಲಿ ಹೋಗಿ ದೃಡಪಡಿಸಿಕೊಂಡು AP01 AG 4829 Swift ಕಾರು ಮತ್ತು KA 43 A 5788 Wagonr ಕಾರುಗಳಲ್ಲಿ ಐದು ಜನ ಅಸಾಮಿಗಳು ಇದ್ದು ಮಣ್ಣುಮುಕ್ಕ ಹಾವು (RED SAND BOA) ನ್ನು ಮಾರಾಟಕ್ಕೆ ಯತ್ನಿಸುತ್ತಿದ್ದವರನ್ನು ಖಚಿತಪಡಿಸಿಕೊಂಡು ತಕ್ಷಣ ದಾಳಿ ಮಾಡಿ ಐದು ಜನ ಆರೋಪಿಗಳನ್ನು ಮತ್ತು ಸೋತ್ತನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಸದರಿ ಆರೋಪಿಗಳಿಂದ ಒಂದು ಮಣ್ಣು ಮುಕ್ಕ ಹಾವು (RED SAND BOA) ನ್ನು ಹಾಗೂ ಅಂದಾಜು 5,00,000/- ಲಕ್ಷ ಮೌಲ್ಯದ AP 01 AG 4829 ನೀಲಿ ಬಣ್ಣದ Swift ಕಾರು ಹಾಗೂ 3,50,000/- ಲಕ್ಷ ಮೌಲ್ಯದ KA 43 A 5788 ಬಿಳಿ ಬಣ್ಣದ Wagonr ಕಾರನ್ನು ಮುಂದಿನ ಕ್ರಮದ ಬಗ್ಗೆ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳಾದ 1) ಯತೀಶ ಬಿನ್ ಬುದ್ದು, 32 ವರ್ಷ, ಕೂಲಿ ಕೆಲಸ, ಹಕ್ಕಿಪಿಕ್ಕಿ ಜನಾಂಗ, ಹಕ್ಕಿಪಿಕ್ಕಿ ಕ್ಯಾಂಪ್, ನಿಧಿಗೆ ಗ್ರಾಮ ಮತ್ತು ಅಂಚೆ, ಶಿವಮೊಗ್ಗ ಜಿಲ್ಲೆ, ಹಾಲಿ ವಾಸ ಹಸ್ತಪ್ಪನ ಹಳ್ಳಿ, ನಲ್ಲೂರು ಅಂಚೆ, ಚನ್ನಗಿರಿ ತಾಲ್ಲೂಕು, ದಾವಣಗೆರೆ ಜಿಲ್ಲೆ. ಮೊ.ನಂ 8971776082, 2) ಎಂ. ವಂಶಿ ಕೃಷ್ಣ ಬಿನ್ ನಾಗಪ್ಪ, 42 ವರ್ಷ, ನಾಯ್ಡು ಜನಾಂಗ, ರಿಯಲ್ ಎಸ್ಟೇಟ್ ಕೆಲಸ, ವಾಸ ಗೋಲ್ಕದೊಡಿ ಗ್ರಾಮ, ಗುಂತ್ಕಲ್ ತಾಲ್ಲೂಕು, ಅನಂತಪುರ ಜಿಲ್ಲೆ. ಆಂದ್ರ ಪ್ರದೇಶ ರಾಜ್ಯ, ಮೊ.ನಂ 8123706631. 3) ಎಸ್.ಎ. ಆರಿಫ್ ಬಾಷಾ ಬಿನ್ ಶೇಕ್ ಅಬ್ದುಲ್ ನಯೀಮ್, ಆಜಾದ್ ನಗರ, ಅನಂತಪುರ ತಾಲ್ಲೂಕು, ಆಂದ್ರ ಪ್ರದೇಶ ರಾಜ್ಯ, 9381717550 4) ಷಫಿ ಬಿನ್ ಲೇ/ ಉಬೇದ್ ಉಲ್ಲಾ, 32 ವರ್ಷ, ಮೆಕ್ಯಾನಿಕ್ ಕೆಲಸ, ವಾಸ 1 ನೇ ಕ್ರಾಸ್, ಲೇಬರ್ ಕಾಲೋನಿ, ತುಮಕೂರು. ಮೊ.ನಂ 9880139974, 5) ನವಾಜ್ ಪಾಷ ಬಿನ್ ಲೇ/ ಮಹಮ್ಮದ್ ದಸ್ತಗೀರ್ ಸಾಬ್, 38 ವರ್ಷ, ಕಾರ್ ಡ್ರೈವರ್, ವಾಸ 18 ನೇ ಕ್ರಾಸ್, ಪಿ.ಹೆಚ್. ಕಾಲೋನಿ, ತುಮಕೂರು, ಮೊ.ನಂ 9611065953. ರವರುಗಳನ್ನು ನ್ಯಾಯಾಂಗ ಬಂದನಕ್ಕೆ ಒಳಪಡಿಸಲಾಗಿದೆ.
‎
‎ಈ ಕಾರ್ಯಾಚರಣೆಯಲ್ಲಿ ಮಾನ್ಯ ಪೊಲೀಸ್ ಉಪ ಮಹಾನಿರೀಕ್ಷಕರಾದ ಶ್ರೀಮತಿ. ಸಂಗೀತಾ, ಜಿ. ಸಿ.ಐ.ಡಿ. ಅರಣ್ಯ ಘಟಕ, ಬೆಂಗಳೂರು, ಮತ್ತು ಮಡಿಕೇರಿ ಸಿಐಡಿ ಅರಣ್ಯ ಘಟಕದ ಪೊಲೀಸ್ ಅಧೀಕ್ಷಕರಾದ ಶ್ರೀ ಪವನ್ ನೆಟ್ಟೂರು ಐಪಿಎಸ್ ರವರ ಮಾರ್ಗದರ್ಶನದಲ್ಲಿ ಚಿಕ್ಕಮಗಳೂರು ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಪೊಲೀಸ್ ಉಪನಿರೀಕ್ಷಕರಾದ ಶ್ರೀ ಬಾಬುದ್ದೀನ್ ಹಾಗೂ ಸಿಬ್ಬಂದಿಗಳಾದ ದೇವರಾಜ, ಕೃಷ್ಣರಾಜ್ ಅರಸ್, ದಿಲೀಪ್, ನಟರಾಜ್, ಹಾಲೇಶ್ ಚಾಲಕರಾದ ತಿಮ್ಮಶೆಟ್ಟಿ ಪಾಲ್ಗೊಂಡಿರುತ್ತಾರೆ.
‎
‎ಅರಣ್ಯ ಕಾಯ್ದೆ ಮತ್ತು ವನ್ಯಜೀವಿಗಳ ಸಂರಕ್ಷಣಾ ಕಾಯ್ದೆ ಸಂಬಂಧಪಟ್ಟ ಅಕ್ರಮ ಚಟುವಟಿಕೆಗಳು ಕಂಡು ಬಂದಲ್ಲಿ ಈ ಕೆಳಗಿನ ದೂರವಾಣಿ ಸಂಖ್ಯೆಗಳಿಗೆ ಮಾಹಿತಿಯನ್ನು ನೀಡಬೇಕಾಗಿ ಕೋರಿಕೆ.
‎
‎1. ಮಡಿಕೇರಿ ಸಿಐಡಿ ಅರಣ್ಯ ಘಟಕ ಪೊಲೀಸ್ ಅಧೀಕ್ಷಕರ ಕಛೇರಿ ಫೋನ್ ನಂ: 9480800220
‎
‎2. ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳ ಚಿಕ್ಕಮಗಳೂರು ಕಛೇರಿ ಫೋನ್ ನಂ; 8277949809

About Author

Leave a Reply

Your email address will not be published. Required fields are marked *

You may have missed