ಸಂವಿಧಾನ ದೇಶದ ಪ್ರತಿಯೊಬ್ಬ ಪ್ರಜೆಗೂ ಅವಕಾಶವನ್ನು ಕಲ್ಪಿಸಿದೆ ….
1 min read
ಸಂವಿಧಾನ ದೇಶದ ಪ್ರತಿಯೊಬ್ಬ ಪ್ರಜೆಗೂ ಅವಕಾಶವನ್ನು ಕಲ್ಪಿಸಿದೆ
ಎಲ್.ಟಿ.ಎಂ. ಪದವಿ ಪೂರ್ವ ಕಾಲೇಜಿನಲ್ಲಿ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ
ಅಕ್ಷರತೋರಣ, ಚಿಕ್ಕಮಗಳೂರು: ಸಂವಿಧಾನ ದೇಶದ ಪ್ರತಿಯೊಬ್ಬ ಪ್ರಜೆಗೂ ಸಮಾನ ಅವಕಾಶವನ್ನು ಕಲ್ಪಿ ಸಿದ್ದು, ಆರ್ಥಿಕ ದುರ್ಬಲ ಮತ್ತು ಅಂಗವೈಕಲ್ಯ ಕಾರಣದಿಂದ ಕೂಡಾ ನ್ಯಾಯ ಪಡೆಯುವ ಅವಕಾಶಗಳಿ ಂದ ವಂಚಿತರಾಗದಂತೆ ಗಮನಹರಿಸಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿ.ಹನುಮಂತಪ್ಪ ಹೇಳಿದರು.
ತಾಲ್ಲೂಕಿನ ಮೈಲಿಮನೆ ಗ್ರಾಮದ ಎಲ್.ಟಿ.ಎಂ. ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಆಶ್ರಯ ಫೌಂಡೇಷನ್ ಮತ್ತು ಆಶಾಕಿರಣ ಚಾರಿಟೇಬಲ್ ಟ್ರಸ್ಟ್ ಬುಧವಾರ ಆಯೋಜಿಸಿದ್ದ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳಾ ಭ್ರೂಣ ಹತ್ಯೆ, ಲಿಂಗ ಸಮಾನತೆ. ಮಹಿಳೆಯರ ಮೇಲಿನ ಹಿಂಸೆ ತಡೆ ಕಾಯ್ದೆಗಳು, ಹಿರಿಯ ನಾಗರಿಕರ ರಕ್ಷಣಾ ಹಕ್ಕುಗಳು, ಆಸ್ತಿ ಹಕ್ಕುಗಳು, ಹಿಂದುಳಿದ ವರ್ಗಗಳ ಹಕ್ಕುಗಳು ಹಾಗೊ ಪೋಕೋ ಕಾಯ್ದೆ ಸೇರಿದಂತೆ ಹಲವು ಮಹತ್ವದ ವಿಷಯಗಳ ಬಗ್ಗೆ ಸಾರ್ವಜನಿಕರು ಅರಿವು ಹೊಂದುವುದು ಅತಿ ಮುಖ್ಯ ಎಂದು ತಿಳಿಸಿದರು.
ಗ್ರಾಮಾಂತರ ಪ್ರದೇಶದಲ್ಲಿ ಕಾನೂನಿನ ಅರಿವು ಇಲ್ಲದೆ ಹತ್ತು ಹಲವು ಸಾಮಾಜಿಕ ಸಮಸ್ಯೆಗಳನ್ನು ಜನಸಾಮಾನ್ಯರು ಎದುರಿಸುವಂತಾಗಿದೆ. ಕಾನೂನುಗಳು ನಮಗೇಕೆ ಎಂಬ ಅಸಡ್ಡೆ ಬೇಡ. ಹಾಗಾಗಿ ಗ್ರಾಮ ದ ಪ್ರತಿಯೊಬ್ಬರು ಕಾನೂನು
ಉಚಿತ ಕಾನೂ ನೆರವು ಅರಿವು ಹೊಂದಿದ್ದಲ್ಲಿ ಜಟಿಲ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಿಕೊಳ್ಳ ಬಹದು ಎಂದರು.
ಜೆ.ಪಿ.ಕೃಷ್ಣೆಗೌಡ ಮಾತನಾಡಿ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಚುನಾಯಿತ ಪ್ರತಿನಿಧಿಗಳಿಗೆ ಮತ್ತು ಸಾಮಾನ್ಯ ನಾಗರಿಕರಿಗೆ ಇರುವ ಸಂವಿಧಾನಾತ್ಮಕ ಹಕ್ಕುಗಳನ್ನು ಸಮರ್ಥವಾಗಿ ಚಲಾಯಿಸಬೇಕಾದರೆ ಕಾನೂನು ತಿಳಿವಳಿಕೆ ಹೊಂದುವುದು ಅತಿಮುಖ್ಯ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಆಶ್ರಯ ಫೌಂಡೇಷನ್ ಸಂಸ್ಥಾಪಕಿ ಡಾ॥ ವರ್ಷಗೌಡ ಕಾನೂನು ಕಾಯ್ದೆಗಳು ಮನುಷ್ಯನ ರಕ್ಷಣೆಯ ಆಯುಧಗಳಿದ್ದಂತೆ. ಇವುಗಳ ಸದ್ಬಳೆಕೆಯಾಗಬೇಕೇ ಹೊರತು ದುರ್ಬಳಕೆಯಾಗಬಾರದು ಎಂದು
ಇದೇ ವೇಳೆ ಗ್ರಾಮಸ್ಥರು ಅಪಾರ ಆಸಕ್ತಿಯಿಂದ ಕಾರ್ಯಕ್ರಮವನ್ನು ಆಲಿಸಿದರು. ವಯೋಮಾ ನದವರು ಕಾರ್ಯಕ್ರಮದಿಂದ ಉಪಯುಕ್ತ ಮಾಹಿತಿಯನ್ನು ಪಡೆದುಕೊಂಡರು. ಕಾರ್ಯಕ್ರಮಕ್ಕೆ ಆಗಮಿಸ ಲು ಸಾಧ್ಯವಾಗದಿದ್ದರೂ ಮಾಜಿ ಸಚಿವ ಡಾ. ಸಿ.ಟಿ.ರವಿ ಹೃದಯಸ್ಪರ್ಶಿ ವಿಡಿಯೋ ಸಂದೇಶ ನೀಡಿದರು.
ಕಾರ್ಯಕ್ರಮದಲ್ಲಿ ವೈದ್ಯರಾದ ಡಾ| ಜ್ಯೋತಿ ಕೃಷ್ಣ, ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ.ವಕೀಲರಾದ ನಟರಾಜ್, ದುಗ್ಗೇಗೌಡ, ಕಾಲೇಜು ಪ್ರಾಂಶುಪಾಲೆ ಮಾಲತಿ, ಸ್ಥಳೀಯರಾದ ಪ್ರಜ್ವಲ್, ಸಾಯಿ ಪ್ರಶಾಂತ್, ವಾಸುನಾಯ್ತು, ಮಂಜುನಾಥ್ ಉಪಸ್ಥಿತರಿದ್ದರು.

