ಸಾಣೇಹಳ್ಳಿಯಲ್ಲಿ 20 ದಿನಗಳ ಕಾಲ ಯುವಜನ ಶೈಕ್ಷಣಿಕ ರಂಗ ಶಿಬಿರ: ಅರ್ಜಿ ಆಹ್ವಾನ…
1 min read
ಅವಿನ್ ಟಿವಿ ಸುದ್ದಿಜಾಲ ✍️: ಸಾಣೇಹಳ್ಳಿಯಲ್ಲಿ 20 ದಿನಗಳ ಕಾಲ ಯುವಜನ ಶೈಕ್ಷಣಿಕ ರಂಗ ಶಿಬಿರ: ಅರ್ಜಿ ಆಹ್ವಾನ.
ಸಾಣೇಹಳ್ಳಿ ಮೇ ೦೭; ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕು ಸಾಣೇಹಳ್ಳಿ ಶ್ರೀ ಶಿವಕುಮಾರ ರಂಗ ಪ್ರಯೋಗ ಶಾಲೆ, ಶ್ರೀ ಶಿವಕುಮಾರ ಕಲಾ ಸಂಘ (ರಿ) ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಇವರ ಸಹಯೋಗದೊಂದಿಗೆ *2026ರ ಮೇ 17 ರಿಂದ ಜೂನ್ 5 ರವರೆಗೆ “ಯುವಜನ ಶೈಕ್ಷಣಿಕ ರಂಗ ಶಿಬಿರ” ವನ್ನು, ಹೊಸ ತಲೆಮಾರಿನ ಯುವ ಸಮುದಾಯಕ್ಕೆ 20 ದಿನಗಳ ಕಾಲ ವಸತಿ ಸಹಿತ ರಂಗ ಶಿಕ್ಷಣವನ್ನು ಆಯೋಜಿಸಲಾಗಿದೆ.*
ಸಾಣೇಹಳ್ಳಿ ಮಠದ ಪೂಜ್ಯರಾದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ಮಾರ್ಗದರ್ಶನದಲ್ಲಿ ಕಳೆದ 18 ವರ್ಷಗಳಿಂದ ರಂಗಶಿಕ್ಷಣ ನೀಡುತ್ತಾ, ನಾಟಕಗಳ ಮೂಲಕ ಸಾಮಾಜಿಕ ಜವಾಬ್ದಾರಿಯ ಬಗ್ಗೆ ಜಾಗೃತಿ ಮೂಡಿಸುತ್ತಾ ಬರುತ್ತಿರುವ ಈ ಸಂಸ್ಥೆಯು, ರಂಗಭೂಮಿಯ ಬಗ್ಗೆ ಆಸಕ್ತಿ ಬೆಳೆಸುವ ದೃಷ್ಟಿಯಿಂದ ಯುವಜನತೆಗಾಗಿ ಈ ವಿಶೇಷ ಶಿಬಿರವನ್ನು ಹಮ್ಮಿಕೊಂಡಿದೆ.
ತರಬೇತಿ ಶಿಬಿರದಲ್ಲಿ ನಟನೆ, ಸಂವಹನ ಕೌಶಲ್ಯ, ರಂಗ ವಿನ್ಯಾಸದ ಪ್ರಾಯೋಗಿಕ ಜ್ಞಾನ, ವ್ಯಕ್ತಿತ್ವ ವಿಕಸನ ಹಾಗೂ ಸಾಮಾಜಿಕ ತಿಳುವಳಿಕೆಯ ಬಗ್ಗೆ
ನುರಿತ ಅಧ್ಯಾಪಕರು ಮತ್ತು ಅತಿಥಿ ಉಪನ್ಯಾಸಕರಿಂದ ತರಬೇತಿ ನೀಡಿ ಹಾಗೂ ಖ್ಯಾತ ನಿರ್ದೇಶಕರಿಂದ ನಾಟಕಗಳ ಪ್ರಯೋಗವನ್ನು ಸಹ ಮಾಡಿಸಲಾಗುತ್ತದೆ.
ಶಿಬಿರಾರ್ಥಿಗಳಿಗೆ ಊಟ ಮತ್ತು ವಸತಿ ವ್ಯವಸ್ಥೆ ಇರುತ್ತದೆ.
18 ರಿಂದ 32 ವರ್ಷದೊಳಗಿನ ವಯೋಮಾನದವರು ಈ ರಂಗ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಬಹುದಾಗಿದೆ..
ವಿದ್ಯಾರ್ಹತೆಯು ಕನಿಷ್ಠ ಎಸ್ಎಸ್ಎಲ್ಸಿ ಅಥವಾ ಪಿಯುಸಿ ತೇರ್ಗಡೆಯಾಗಿರಬೇಕು.
ರಂಗಭೂಮಿ ಅನುಭವವಿರುವ ಕಲಾವಿದರು ಹಾಗೂ ಪದವಿ/ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.
ಪ್ರವೇಶ ಶುಲ್ಕವಾಗಿ ₹500 ಪಾವತಿಸಬೇಕಾಗುತ್ತದೆ.
ಆಸಕ್ತರು ಅರ್ಜಿಗಳನ್ನು ಆನ್ಲೈನ್ ಮೂಲಕ ಪಡೆಯಬಹುದು. ಭರ್ತಿ ಮಾಡಿದ ಅರ್ಜಿಗಳನ್ನು ಪೋಸ್ಟ್ ಅಥವಾ ವಾಟ್ಸಾಪ್ ಮೂಲಕ ಕಳುಹಿಸಲು ಮೇ 15, 2026 ಕೊನೆಯ ದಿನಾಂಕವಾಗಿರುತ್ತದೆ ಎಂದು ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯ ಸಂಚಾಲಕರಾದ ಡಾ.ಟಿ.ಎಚ್ .ಲವಕುಮಾರ ಅವರು ಅವಿನ್ ಟಿವಿ ಸುದ್ದಿಜಾಲದೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಹೆಚ್ಚಿನ ಸಂಪರ್ಕಕ್ಕಾಗಿ
ಪ್ರಾಂಶುಪಾಲರು,
ಶ್ರೀ ಶಿವಕುಮಾರ ರಂಗ ಪ್ರಯೋಗ ಶಾಲೆ ಸಾಣೇಹಳ್ಳಿ,
ಹೊಸದುರ್ಗ ತಾಲೂಕು, ಚಿತ್ರದುರ್ಗ ಜಿಲ್ಲೆ – 577515 .
ದೂರವಾಣಿ: 9880872740, 9448398144, 9480282791 , 9902100881
*ವೆಬ್ಸೈಟ್* : https://theatreschoolsanehalli.in ಸಂಪರ್ಕಿಸಬಹುದಾಗಿದೆ.
•••••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ …. ✍️
ಚಿಕ್ಕಮಗಳೂರು

