लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಪ್ರಚಾರ ವಿಲ್ಲದ ಸಾಧಕ
H Bಭಾಸ್ಕರ್

ಇತ್ತೀಚಿಗೆ ಹಾನುಬಾಳು ಸುತ್ತಮುತ್ತಲಿನ ಹಲವು ಗ್ರಾಮಗಳ ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ ಮತ್ತು ರಸ್ತೆ ಕಾಮಗಾರಿ ಆಗುತ್ತಿದೆ. ಇದರ ಹಿನ್ನಲೆ ಯನ್ನು ನೋಡಿದಾಗ ಸುಮಾರು 10 ಕೋಟಿಗೂ ಅಧಿಕ ಮೊತ್ತ ವನ್ನು ರಸ್ತೆ ನಿರ್ಮಾಣ ಮಾಡಲು HB ಭಾಸ್ಕರ್ ಅವರು ಈಗಿನ ಸರ್ಕಾರದಲ್ಲಿ ತಮ್ಮ ಸಂಪರ್ಕದ ಮುಖಾಂತರ ಅನುದಾನ ತಂದಿದ್ದಾರೆ ಅನ್ನುವ ಮಾಹಿತಿ ತಿಳಿಯಿತು
ಒಬ್ಬ ಚುನಾಯಿತ ಶಾಸಕ, ಸಂಸದ ತನ್ನ ಕ್ಷೇತ್ರಕ್ಕೆ ಅನುಧಾನ ತರವುದು ದೊಡ್ಡ ವಿಷಯವಲ್ಲ, ಅವರಿಗೆ ಸಂವಿಧಾನ ದತ್ತ ಅಧಿಕಾರ ವಿರುತ್ತದೆ. ಇನ್ನು ಆಡಳಿತ ಪಕ್ಷದ ಪರಜಿತ ಅಭ್ಯರ್ಥಿಗೆ ತನ್ನ ಪ್ರಭಾವ ಬಳಸಿ, ಮುಂದೆ ತನ್ನ ಸಾಮರ್ಥ್ಯ ಹೆಚ್ಚಿಸಿಕೊಂಡು ಮುಂದೆ ಚುನಾಯುತನಾಗಬೇಕು ಅನ್ನುವ ಹಂಬಲ ಇರುತ್ತದೆ
ಆದರೆ ಸಾಮಾನ್ಯ ವ್ಯಕ್ತಿ ಯಾವುದೆ ಫಲಪೇಕ್ಷೆ ಇಲ್ಲದೆ ತನ್ನ ಸುತ್ತ ಮುತ್ತಲಿನ ಜನರ ಸಮಸ್ಯೆಗೆ ಯಾವುದೆ ಪ್ರಚಾರ ಇಲ್ಲದೆ ಸ್ಪಂದಿಸುವುದು, ಅದು ಗ್ರಾಮಗಳ ಅವಶ್ಯಕತೆ ಇರುವ ಕಡೆ ಕೋಟ್ಯಂತರ ಅನುಧಾನ ತಂದು ರಸ್ತೆ ಮಾಡಿಸುವುದು ಹುಡುಗಾಟದ ವಿಷಯವಲ್ಲ. ಈ ನಿಟ್ಟಿನಲ್ಲಿ ಮುಖಂಡ HB ಭಾಸ್ಕರ್ ಅವರ ಸದ್ದಿಲ್ಲದ ಕಾರ್ಯ ಶ್ಲಾಘನೀಯ

ಶೃಂಗೇರಿ ಯಲ್ಲಿ ತನ್ನ ಕಾಲೇಜು ವಿದ್ಯಾರ್ಥಿ ದಿಸೆಯಲ್ಲೇ ವಿದ್ಯಾರ್ಥಿ ಸಂಘದ ಕಾರ್ಯದರ್ಶಿಯಾಗಿ ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಗೆ ತನ್ನನ್ನು ತಾನು ತೆರೆದುಕೊಂಡರು

1986 87 ರಲ್ಲಿ ಹಾನುಬಾಳು ರೋಟರಿ ಕ್ಲಬ್ ನ ಸ್ಥಾಪಕ ಅಧ್ಯಕ್ಷರಾಗಿ, ಇವರ ತಂದೆ ದಿವಂಗತ ಬಿಳಿಗೌಡ ಅವರ ನೆನಪಲ್ಲಿ ಕಾಫಿ ಬೋರ್ಡ್ ಸಂಯೋಗ ದೊಂದಿಗೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಒಂದು ಕೊಠಡಿ ಕಟ್ಟಿಸಿಕೊಟ್ಟಿದ್ದಾರೆ

ಹಾನುಬಾಳು ಬೆಳೆಗಾರರ ಸಂಫದ ಅಧ್ಯಕ್ಷರಾಗಿ ಬೆಳೆಗಾರರ ಸಂಘಟನೆ ಯಲ್ಲಿ ತಮ್ಮ ಕೊಡುಗೆ ಕೊಟ್ಟಿದ್ದಾರೆ
ಆ ಸಂದರ್ಭದಲ್ಲಿ ನಾನು ಹಾನುಬಾಳು ಬೆಳೆಗಾರರ ಸಂಘದ ನಿರ್ದೇಶಕ ನಾಗಿ ಕರ್ನಾಟಕ ಬೆಳೆಗಾರರ ಸಂಫದ ನಿರ್ದೇಶಕ ನಾಗಿ ಸೇವೆ ಸಲ್ಲಿಸಲು ಭಾಸ್ಕರ್ ಅವರ ಜನಪರ ಕಾಳಜಿ ಕಾರಣ

ಸಕಲೇಶಪುರ ಕಾಂಗ್ರೆಸ್ ನ ಬ್ಲಾಕ್ ಅಧ್ಯಕ್ಷ ರಾಗಿ ರಾಜಕೀಯ ದಲ್ಲಿ ಸೇವೆ ಸಲ್ಲಿಸಿದ್ದಾರೆ

ಈಗ ಇವರದ್ದೆ ಸರ್ಕಾರ ಬಂದಾಗ ಹಾನುಬಾಳುವಿನ ಸುತ್ತ ಮುತ್ತಲಿನ ಗ್ರಾಮದ ರಸ್ತೆ ಅಭಿವೃದ್ಧಿ ಗೆ ಸರ್ಕಾರದಲ್ಲಿರುವ, ಹಲವು ಸಚಿವರಿಂದ ತನ್ನ ವಯಕ್ತಿಕ ಸಂಪರ್ಕದ ಮುಖಾಂತರ 9 ಕೋಟಿ 30 ಲಕ್ಷ ಅನುದಾನ ತಂದಿದ್ದಾರೆ

ದೇವಾಲದಕೆರೆ ರಸ್ತೆ ಇಂದ ಮರಗಿಡಿ ರಸ್ತೆ 60 ಲಕ್ಷ (ಟೆಂಡರ್ ಆಗಿದೆ )
ಅಗ್ನಿ ಜಂಕ್ಷನ್ ಇಂದ ದೋನಹಳ್ಳಿ 90 ಲಕ್ಷ (ಟೆಂಡರ್ ಆಗಿದೆ )
ಬಿಳಿಸಾರೆ ಇಂದ ಗುಡ್ಡದ ಮಠ ರಸ್ತೆ 90 ಲಕ್ಷ (re ಟೆಂಡರ್ )
ಮೂಡಿಗೆರೆ ಸಕಲೇಶಪುರ ರಸ್ತೆ ಯ ಹೆಬ್ಬಸಾಲೆ ಇಂದ ದೇವಿಹಳ್ಳಿ ರಸ್ತೆ 130 ಲಕ್ಷ,,(ಟೆಂಡರ್ ಆಗಿದೆ)
ಮದನಾಪುರ ಮುಖ್ಯ ರಸ್ತೆ ಇಂದ ಹುಲ್ಲೆಮನೆ ಸ್ಕೂಲ್ ರಸ್ತೆ 90 ಲಕ್ಷ ( ಪ್ರಕ್ರಿಯೆ ಜಾರಿಯಲ್ಲಿದೆ )
ಅಗ್ನಿ ಜಂಕ್ಷನ್ ಇಂದ ಗುಡ್ಡದ ಮಠ via ಮಲ್ಲೆ ದೀಣೆ 130 ಲಕ್ಷ, (ಕೆಲಸ ಪ್ರಗತಿಯಲ್ಲಿದೆ )
ಅಚ್ಚನಹಳ್ಳಿ ಇಂದ ಬಸವನಗುಡಿ ರಸ್ತೆ 120 ಲಕ್ಷ, (ಟೆಂಡರ್ ಆಗಿದೆ )
ಹೆತ್ತೂರು ಪ್ರಕೃತಿ ಬಡಾವಣೆ ಇಂದ ಹಿರಿಯೂರು via ಬಿಸ್ಲೇಮನೆ ಗದ್ದೆ 160 ಲಕ್ಷ( ಪ್ರಕ್ರಿಯೆ ಜಾರಿಯಲ್ಲಿದೆ)
ಹಾನುಬಾಳು ದೇವಾಲದಕೆರೆ ರಸ್ತೆ ಇಂದ ಗುಂಡು ಬ್ರಹ್ಮ ದೇವಸ್ಥಾನ ದ ರಸ್ತೆ 60 ಲಕ್ಷ (ಟೆಂಡರ್ ಆಗಿದೆ )

ಇವಿಷ್ಟು ಅವರ ಸಾಮರ್ಥ್ಯ ಕ್ಕೆ ಹಿಡಿದ ಕನ್ನಡಿ
ಈಗ ಮತ್ತೆ ಇನ್ನೊಂದು ಹಂತದಲ್ಲಿ ಸಕಲೇಶಪುರ ತಾಲೂಕಿನ ಎಲ್ಲಾ ಹೋಬಳಿಗಳಿಗೂ ರಸ್ತೆಗೆ ಅನುದಾನ ತರುವ ಪ್ರಯತ್ನ ದಲ್ಲಿದ್ದಾರೆ.
ಸಿದ್ಧಾಂತದಲ್ಲಿ ಅವರು ನಾವು ವಿರುದ್ಧ ದಿಕ್ಕಿನಲ್ಲಿದ್ದೇವೆ, ಆದರೆ ಅವರ ಕಾರ್ಯ ರಾಜಕೀಯೇತರ ವಾಗಿ ಮೆಚ್ಚುವಂತದ್ದೇ
ಪ್ರಚಾರ ವಿಲ್ಲದ ಅವರ ಕಾರ್ಯ ಶ್ಲಾಘನೀಯ
ಇಂತ ಸಮಾಜಮುಖಿ ದುರೀಣರನ್ನ ಅವರ ಸಮಾಜಮುಖಿ ಕಾರ್ಯವನ್ನ ಸಮಾಜಕ್ಕೆ ತಿಳಿಸುವುದು ಇವರ ಕಾರ್ಯವೈಖರಿ ಅರಿತವರ ಜವಾಬ್ದಾರಿ ಆಗುತ್ತದೆ, ಇವರ ಕಾರ್ಯವನ್ನು ಸಮಾಜ ಗುರುತಿಸಿ ಶ್ಲಾಘನಿಸಿದರೆ ಅವರಿಗೆ ಸಮಾಜದ ಕೆಲಸ ಮಾಡಲು ಮತ್ತಷ್ಟು ಉತ್ಸಾಹ ಬರುತ್ತದೆ ಇದರ ಲಾಭ ಸಮಾಜಕ್ಕೆ ಆಗುತ್ತದೆ
ಇಂದು ಸರ್ಕಾರದ ಹಣ ಅಂದ್ರೆ % ಗೆ ಗೆರೆ ಹಾಕಿ ವಸೂಲಿ ಮಾಡಿ ಗುದ್ದಲಿ ಪೂಜೆ ಮಾಡುವ (ಅ )ವ್ಯವಸ್ಥೆ ಮದ್ಯೆ ಯಾವುದೆ % ನಿರೀಕ್ಷೆ ಇಲ್ಲದೆ ಜನರಿಗೆ ಒಳ್ಳೇದು ಆಗಲಿ ಅನ್ನುವ ದೃಷ್ಟಿ ಇಂದ ಕಾರ್ಯ ಮಾಡುತ್ತಿದ್ದಾರೆ
ನಮ್ಮ ಮಲೆನಾಡು ಭಾಗದಲ್ಲಿ ರಾಜಕೀಯ ಚುನಾವಣೆಗೆ ಮಾತ್ರ ಸೀಮಿತ, ಅದನ್ನ ಎಲ್ಲಾ ಸಮಯ ಹಾಸಿಹೊದ್ದುಕೊಳ್ಳುವುದಿಲ್ಲ. ಎಲ್ಲರು ಅನ್ಯೋನ್ಯವಾಗಿರುತ್ತಾರೆ ಅವರವರ ಕಷ್ಠ ಸುಖದಲ್ಲಿ ಎಲ್ಲರು ಬಾಗಿ ಆಗುತ್ತಾರೆ. ಇದು ಮಲೆನಾಡ ಸಂಸ್ಕೃತಿ.( ಕೆಲವರನ್ನು ಹೊರತುಪಡಿಸಿ ) ಆದರೆ ತಾವು ನಂಬಿದ ಸಿದ್ಧಾಂತದಲ್ಲಿ ಯಾವುದೆ ರಾಜಿ ಇರುವುದಿಲ್ಲ
ಇಂದು ಒಬ್ಬ ಗ್ರಾಮಪಂಚಾಯ್ತಿ ಸದಸ್ಯ ಸಹ ಕೆಲವು ಹಿಂಬಾಲಕರ ಜೊತೆ ಓಡಾಡುತ್ತಾನೆ, ಅಂತದರಲ್ಲಿ ಸರ್ಕಾರದ ಕ್ಯಾಬಿನೆಟ್ ಸಚಿವರಿಂದ ಹಿಡಿದು ಸರ್ಕಾರದ ಮುಖ್ಯ ಕಾರ್ಯದರ್ಶಿ ವರೆಗಿನ ಅಧಿಕಾರಿಗಳ ನಿಕಟ ಸಂಪರ್ಕ ಇದ್ದರು ಎಲ್ಲೂ ಸಹ ತಾನು ಇಂತ ಪ್ರಭಾವಿ ಅಂತ ತೋರಿಸಿಕೊಳ್ಳದೆ. ಎಲ್ಲೂ ಸಹ ಹಿಂಬಾಲಕರ ದಂಡು ಕಟ್ಟದೆ ಸಾಮಾನ್ಯರಂತೆ ಇರುವ ಎಲೆ ಮರೆಯ ಕಾಯಿ HB ಭಾಸ್ಕರ್ ಅವರ ನಡೆ ಸಮಾಜಕ್ಕೆ ಅನುಕರಣೀಯ
ಶುಭವಾಗಲಿ HB ಭಾಸ್ಕರ್ ಅಣ್ಣ
ದೇವರು ನಿಮಗೂ ನಿಮ್ಮ ಕುಟುಂಬಕ್ಕೂಸದಾ ಒಳ್ಳೇದನ್ನು ಅನುಗ್ರಹಿಸಲಿ

✍️ ಅವರೇಕಾಡು ಪೃಥ್ವಿ

About Author

Leave a Reply

Your email address will not be published. Required fields are marked *

You may have missed