लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎ಕಟ್ಟೆಗದ್ದೆ ಮಹಜಿದ್ ಗ್ರಾಮದಲ್ಲಿ ವಾರ್ಷಿಕ ಉರುಸ್ ಸಂಭ್ರಮ….

1 min read

‎ಕಟ್ಟೆಗದ್ದೆ ಮಹಜಿದ್ ಗ್ರಾಮದಲ್ಲಿ ವಾರ್ಷಿಕ
ಉರುಸ್ ಸಂಭ್ರಮ

‎ಆಲ್ದೂರು: ಸಮೀಪದ ಕೂದುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಟ್ಟೆಗದ್ದೆ ಮಹಜಿದ್ ಗ್ರಾಮದಲ್ಲಿ ಹಿಂದೂ ಮುಸ್ಲಿಂ ಭಾವೈಕ್ಯ ಕೇಂದ್ರವಾಗಿರುವ ದರ್ಗಾದಲ್ಲಿ ಮಂಗಳವಾರ ಉರುಸ್ ವಿಜ್ರಂಬಣೆಯಿಂದ ನಡೆಯಿತು.
‎
‎ಪ್ರಾರ್ಥನಾ ಸಾಂಗ್ಯಾ ಗಳು ಮುಂಜಾನೆಯಿಂದಲೇ ಪ್ರಾರಂಭವಾಗಿದ್ದು, ಸಂತರ ಸ್ತುತಿ ಗೀತೆ ಮತ್ತು ಭಜನೆಗಳೊಂದಿಗೆ ದರ್ಗಾದ ಮುಖ್ಯಸ್ಥರಾದ ಸಿರಾಜ್ ರವರ ಮನೆಗೆ ಸಂದಲ್ ಮೆರವಣಿಗೆ ಮೂಲಕ ತೆರಳಿ ಗಂಧದ ದ್ರವ್ಯಗಳ ಆಶೀರ್ವಚನ ಪ್ರಾರ್ಥನೆ ನಡೆಯಿತು.
‎ಬಳಿಕ ದರ್ಗಾದ ಅವಳಿ ಸಂತರಾದ ಹಜರತ್ ಸೈಯದ್ ಬೂದ್ ಅಲಿಷಾ ಖಾದ್ರಿ ಮತ್ತು ಹಜರತ್ ಸೈಯದ್ ಕರಂ ಅಲಿಷಾ ಖಾದ್ರಿ ರವರ ಸಮಾಧಿಗಳನ್ನು ಸುಗಂಧ ದ್ರವ್ಯ ಮಲ್ಲಿಗೆ ಹೂವಿನ ಮೂಲಕ ಅಲಂಕರಿಸಿದ್ದು ಸಮಾಧಿಗಳಿಗೆ ಭಕ್ತಾದಿಗಳು ಹರಕೆ ಸಲ್ಲಿಸಿದ ಹಸಿರು ಬಟ್ಟೆಯ ಮೂಲಕ ಹೊದಿಸಲಾಗಿತ್ತು. ದರ್ಗಾದ ಕಟ್ಟಡವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದು ಉರುಸ್ ನಲ್ಲಿ ವಿವಿಧ ಬಗೆಯ ಮಕ್ಕಳ ಆಟಿಕೆಗಳು ಮಲ್ಲಿಗೆ ಹೂವು ಸಿಹಿ ತಿಂಡಿಗಳು ತಂಪು ಪಾನೀಯಗಳ ಅಂಗಡಿಗಳನ್ನು ಹಾಕಲಾಗಿತ್ತು.
‎ಆಲ್ದೂರು ಮತ್ತು ಸುತ್ತಮುತ್ತಲಿನ ಹೋಬಳಿಗಳಿಂದ ತಾಲ್ಲೂಕು ಜಿಲ್ಲೆ ಗಳಿಂದಲೂ ಭಕ್ತಾದಿಗಳು ಸಾವಿರರೂ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದು, 5000ಕ್ಕೂ ಹೆಚ್ಚು ಮಂದಿ ಭಕ್ತಾದಿಗಳಿಗೆ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು.
‎ದರ್ಗಾ ಸಮಿತಿಯ ಕಾರ್ಯದರ್ಶಿ ಗುಲ್ರೀಜ್ ಅಹಮದ್ ಮಾತನಾಡಿ ದರ್ಗಾ ವೂ ಹಲವು ದಶಕಗಳ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ದರ್ಗಾ ಇದಾಗಿದ್ದು, ವಾರ್ಷಿಕ ಉರುಸ್ ಮಹೋತ್ಸವ ದಿನವನ್ನು ಹೊರತುಪಡಿಸಿ ಬಾಕಿ ದಿನಗಳಲ್ಲೂ ಹಿಂದೂ ಸಹೋದರ ಬಾಂಧವರು ಇನ್ನಿತರ ಧರ್ಮದ ಬಂಧುಗಳು ಭಕ್ತಿಯುತವಾಗಿ ಇಲ್ಲಿಗೆ ಆಗಮಿಸಿ ಹರಕೆಗಳನ್ನು ಸಲ್ಲಿಸುತ್ತಾರೆ ಎಂದು ಮಾಹಿತಿ ನೀಡಿದರು.
ದರ್ಗಾ ಸಮಿತಿಯ ಅಧ್ಯಕ್ಷ ಮುಜೀಬ್ ಶರೀಫ್, ಉಪಾಧ್ಯಕ್ಷ ಆಸಿಫ್ ಅಲಿ, ಪದಾಧಿಕಾರಿಗಳು ಸದಸ್ಯರು ಉರುಸ್ ಆಚರಣೆ ನೇತೃತ್ವವನ್ನು ವಹಿಸಿದ್ದರು.

About Author

Leave a Reply

Your email address will not be published. Required fields are marked *

You may have missed