ತಲೆ ಕೆಳಗಾದ ಶೃಂಗೇರಿ ಕ್ಷೇತ್ರದ ಫಲಿತಾಂಶ: ನೂತನ ಶಾಸಕರಾಗಿ ಡಿ.ಎನ್ ಜೀವರಾಜ್ ಘೋಷಣೆ*…
1 min read
*ತಲೆ ಕೆಳಗಾದ ಶೃಂಗೇರಿ ಕ್ಷೇತ್ರದ ಫಲಿತಾಂಶ: ನೂತನ ಶಾಸಕರಾಗಿ ಡಿ.ಎನ್ ಜೀವರಾಜ್ ಘೋಷಣೆ*
ದಿನಾಂಕ 02.05.2026ರಂದು ಹೈಕೋರ್ಟ್ ಆದೇಶದ ಮೇರೆಗೆ ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಮರು ಮತ ಎಣಿಕೆ ಕಾರ್ಯ ಮುಕ್ತಾಯಗೊಂಡಿತ್ತು, ಆದರೆ ಫಲಿತಾಂಶ ಘೋಷಣೆ ಆಗಿರಲಿಲ್ಲ, ಇಂದು ಚುನಾವಣಾ ಆಯೋಗ ಅಧಿಕೃತ ಘೋಷಣೆ ಮಾಡಿದ್ದು ಹಾಲಿ ಶಾಸಕರಾದ ಟಿ.ಡಿ ರಾಜೇಗೌಡ ಅವರ ಎದುರು 2023ರ ಫಲಿತಾಂಶದಲ್ಲಿ ಪರಾಜಿತ ಅಭ್ಯರ್ಥಿಯಾಗಿದ್ದ ಆಗಿದ್ದ ಡಿ.ಎನ್ ಜೀವರಾಜ್ ಅವರು ಗೆದ್ದು ಬೀಗಿದ್ದಾರೆ.
ಮರು ಮತ ಎಣಿಕೆಯು ರೋಚಕ ಹಣಾಹಣಿಗೆ ಕಾರಣವಾಗಿತ್ತು ಕೊನೆಗೆ ಜೀವರಾಜ್ ಮುನ್ನಡೆ ಸಾಧಿಸಿದ್ದರು. ಸಧ್ಯ ಚುನಾವಣಾ ಆಯೋಗದಿಂದ ಅಧೀಕೃತ ಘೋಷಣೆಯಾಗಿದ್ದು ಜೀವರಾಜ್ ಗೆಲುವು ಸಾಧಿಸಿದ್ದು ಶೃಂಗೇರಿ ಕ್ಷೇತ್ರದ ನೂತನ ಶಾಸಕರಾಗಿ ಆಯ್ಕೆಯಾಗಿದ್ದಾರೆ.

