ಸಮಾನತೆಯ ಸಂದೇಶ ಸಾರಿದ ಮಹಾನ್ ಸಂತ ಬಸವಣ್ಣ :ಡಾ. ಮೋಹನ್ ರಾಜಣ್ಣ….
1 min read
ಮೂಡಿಗೆರೆ :ಅವಿನ್ ಟಿವಿ ಸುದ್ದಿಜಾಲ ✍️:
ಸಮಾನತೆಯ ಸಂದೇಶ ಸಾರಿದ ಮಹಾನ್ ಸಂತ ಬಸವಣ್ಣ :ಡಾ. ಮೋಹನ್ ರಾಜಣ್ಣ.

ಮೂಡಿಗೆರೆ :ತಮ್ಮ ವಚನಗಳ ಮೂಲಕವೇ 12ನೇ ಶತಮಾನದಲ್ಲಿ ಸಮಾಜದಲ್ಲಿ ಆಚರಣೆ ಯಲ್ಲಿದ್ದಸಾಮಾಜಿಕ ಅಸಮಾನತೆ. ಜಾತಿ ವ್ಯವಸ್ಥೆ ಇತ್ಯಾದಿ ಅನಿಷ್ಟ ಪದ್ಧತಿ ಗಳನ್ನು ನಿರ್ಮೂಲನೆ ಮಾಡಿ ಜ್ಞಾನದ ಬೆಳೆಕು ಚೆಲ್ಲಿ ಕ್ರಾಂತಿಯ ಬೀಜ ಬಿತ್ತಿದವರು ಬಸವಣ್ಣ ನವರು ಎಂದು ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಥಾಪಕಡಾ. ಮೋಹನ್ ರಾಜಣ್ಣ ಹೇಳಿದರು.
ಅವರು ಇಂದು ಗೋಣಿಬೀಡು ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ )ಸಂಸ್ಥೆ ಯಿಂದ ಪುಷ್ಪಗಿರಿ ಸದನ ದಲ್ಲಿ ಜಗಜ್ಯೋತಿ ಶ್ರೀ ಬಸವೇಶ್ವರ ಜಯಂತಿ ಕಾರ್ಯಕ್ರಮ ದಲ್ಲಿ ಭಾವಚಿತ್ರ ಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಪ್ರಸಿದ್ದ ಸಂತರಾಗಿದ್ದ ಇವರು ರಾಜನೀತಿಜ್ಞರಾಗಿ. ಸಮಾಜ ಸುಧಾರಕ ರಾಗಿ ತಮ್ಮ ಕಾವ್ಯ ಮತ್ತು ಬರವಣಿಗೆ ಮೂಲಕ ಸಮಾಜದಲ್ಲಿ ಹಲವಾರು ಸುಧಾರಣೆ ಗಳನ್ನು ತಂದರು.
ಕಾಯಕವೇ ಕೈಲಾಸ ಎಂದು ಮನು ಕುಲಕ್ಕೆ ಪಾಠ ಕಳಿಸಿ ಕೊಟ್ಟ ವಿಶ್ವ ಗುರು ಬಸವಣ್ಣ ನವರ ತತ್ವ. ಆದರ್ಶ. ಚಿಂತನೆ ಇಂದಿಗೂ ನಮಗೆಲ್ಲರಿಗೂ ಪಾಠ. ಬದುಕಿಗೆ ದಾರಿ. ಈ ಮಹಾನ್ ಚೇತನರ ಜನ್ಮ ಜಯಂತಿ ಯನ್ನು ಪ್ರತಿವರ್ಷ ವೈ ಶಾಖ ಮಾಸದ ತೃತೀಯ ದಿನ ಅಂದರೆ ಅಕ್ಷಯ ತೃತೀಯದ ದಿನ ಆಚರಿಸಲಾಗುತ್ತದೆ.ಎಂದರು.
ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ತಿ ಶ್ರೀಮತಿ ಉಮಾ ಮೋಹನ್ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಮೂಡ ನಂಬಿಕೆ. ಮಾಡಿ ಮೈಲಿಗೆ. ಮೇಲು ಕೀಳು. ಲಿಂಗ ಅಸಮಾನತೆ ಜಾತಿ ವ್ಯವಸ್ಥೆ ಸೇರಿದಂತೆ ಸಮಾಜದಲ್ಲಿನ ಅನಿಷ್ಟ ಪದ್ಧತಿ ಗಳನ್ನು ಹೋಗಲಾಡಿಸಿ ಹಲವಾರು ಸಾಮಾಜಿಕ ಸುಧಾರಣೆ ಗಳನ್ನು ತಂದವರು ಬಸವಣ್ಣ ನವರು. ದಯಯೇ ಧರ್ಮದ ಮೂಲವಯ್ಯ ಎನ್ನುತ್ತಾ ಮನುಕುಲಕ್ಕೆ ಮಾನವೀಯತೆಯ ಸಂದೇಶ ಸಾರಿದರು. ಉತ್ತಮ ಸಮಾಜ ನಿರ್ಮಾಣಕ್ಕಾಗಿ ಅನುಭವ ಮಂಟಪ ವನ್ನು ಹುಟ್ಟುಹಾಕಿದರು ಎಂದರು..
ಗೌರವ ಟ್ರಸ್ತಿ ಸಿ ಸಿ ರಾಜಣ್ಣ. ಡಿಂಪಲ್. ಗಂಗಾಧರ್. ಬಾಂಧವ್ಯ. ಪ್ರಸನ್ನ. ಅಶ್ವಿನಿ. ಮಾನ್ಯ. ಮಿಥುನ್. ಹಾಗೂ ಮುಂತಾದವರು ಉಪಸ್ಥಿತರಿದ್ದರು..
ವರದಿ.
ಮಗ.

