लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಯೋಗದಿಂದ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ ಎಂದು ಮಲೆನಾಡು ಗಲ್ಫ್ ಎಜುಕೇಶನ್ ಟ್ರಸ್ಟ್ ರಾಷ್ಟ್ರೀಯ ಅಧ್ಯಕ್ಷ ಅಕ್ರಮ್ ಹಾಜಿ ಹೇಳಿದರು.

1 min read

‎ಯೋಗದಿಂದ ಆರೋಗ್ಯ ವೃದ್ಧಿ
ಮೂಡಿಗೆರೆ: ಕಲಬೆರಕೆ ಆಹಾರ ಸೇವನೆಯಿಂದ ಕಾಯಿಲೆಗಳು ಬರುತ್ತಿದ್ದು ವಾಯುವಿಹಾರ ಮತ್ತು ಯೋಗದಿಂದ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ ಎಂದು ಮಲೆನಾಡು ಗಲ್ಫ್ ಎಜುಕೇಶನ್ ಟ್ರಸ್ಟ್ ರಾಷ್ಟ್ರೀಯ ಅಧ್ಯಕ್ಷ ಅಕ್ರಮ್ ಹಾಜಿ ಹೇಳಿದರು. ಸುನ್ನಿ

ಯುವಜನ ಸಂಘದಿಂದ ಚಿಕ್ಕಮಗಳೂರು ಜಿಲ್ಲಾಸ್ಪತ್ರೆ.Sys.ಹ್ಯಾಂಡ್ ಪೊಸ್ಟ್.ಎಮರ್ಜನ್ಸಿ ಬ್ಲಡ್ ಹೆಲ್ಪ್ ಕರ್ನಾಟಕ. ಸಹಯೋಗದಲ್ಲಿ ಹ್ಯಾಂಡ್ ಪೋಸ್ಟ್‌ನಲ್ಲಿ ಭಾನುವಾರ ಏರ್ಪಡಿಸಿದ್ದ ಉಚಿತ ನೇತ್ರ ತಪಾಸಣೆ, ರಕ್ತದಾನ ಶಿಬಿರ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರತಿಯೊಬ್ಬರೂ ನಿಯಮಿತವಾಗಿ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳಬೇಕು. 40 ವರ್ಷ ದಾಟಿದ ಪ್ರತಿಯೊಬ್ಬರೂ ಆರೋಗ್ಯ ಕಾಳಜಿ ವಹಿಸಬೇಕು. ಯುವಜನರು ರಕ್ತದಾನ ಮಾಡುವುದರಿಂದ ಕಾಯಿಲೆಗಳು ಕಡಿಮೆಯಾಗುತ್ತವೆ ಎಂದು ತಿಳಿಸಿದರು. ಮೂಡಿಗೆರೆ ಪಿಎಸ್‌ಐ ಹರ್ಷವರ್ಧನ್ ಮಾತನಾಡಿ, ಬಡವರು ಕಾಯಿಲೆಗಳಿಗೆ ಚಿಕಿತ್ಸೆ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಂಥವರು ಆರೋಗ್ಯ ತಪಾಸಣೆ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು. ಚಿಕಿತ್ಸೆ ನೀಡಿದರೆ ಗುಣಮುಖರಾಗುತ್ತಾರೆ. ಸಂಘಟನೆಗಳಿಗೂ ಉತ್ತಮ ಹೆಸರು ಬರುತ್ತದೆ ಎಂದರು.

ಡಾ:ಮಹಮದ್ ಅಫ಼್ರೊಜ್ ಅಹಮದ್.

ಪತ್ರಕರ್ತ ಕಿರುಗುಂದ ಅಬ್ಬಾಸ್, ಸಮಾಜ ಸೇವಕರಾದ ಫಿಶ್ ಮೋಣು, ಅಬ್ದುಲ್ ರಹಿಮಾನ್, ಹಸೈನಾ‌ರ್ ಬಿಳಗೊಳ, ಆರಿಫ್‌ ಬಣಕಲ್. ನಿವೃತ್ತ ಶಿಕ್ಷಕಿ ಪುಷ್ಪಾ, ಮೆಸ್ಕಾಂ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಇತರ ಸಾಧಕರನ್ನು ಸನ್ಮಾನಿಸಲಾಯಿತು. ಶಿಬಿರದಲ್ಲಿ 17 ಮಂದಿ ರಕ್ತ ನೀಡಿದರು. 180 ಮಂದಿಯ ಕಣ್ಣು ತಪಾಸಣೆ ನಡೆಸಲಾಯಿತು. ಸಿದ್ದೀಕ್ ನಿಝಾಮಿ, ಮಹಮ್ಮದ್ ಹನೀಫ್‌ ಹೈದ್ರೋಸ್, ಸುಲೈಮಾನ್, ಖಾಲಿದ್, ಅಶ್ರಫ್ ಸಹದಿ, ಕೆ.ಎಂ.ಇಬ್ರಾಹಿಂ, ಸರಪುದ್ದೀನ್ ಅಹಸನಿ, ಹಸನ್ ಸಖಾಫಿ, ಹಮೀದ್ .ಅಲ್ತಾಫ಼್ ಬಂಟವಾಳ.ಜಲಾಲ್ ಉಲ್ಲಾಳ.ಬದ್ರು ಉಲ್ಲಾಳ.ಜುನೆದ್.ಆಶಿಕ್.ಇಬ್ರಾಹಿಂ ಮೊಹಿದ್ದಿಬ್ಬ.ನೀಸಾರ್ ಉಲ್ಲಾಳ.ಇತರರಿದ್ದರು..

About Author

Leave a Reply

Your email address will not be published. Required fields are marked *

You may have missed