लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎ನೆನೆಗುದಿಗೆಯಲ್ಲಿದ್ದ ಭೂಸ್ವಾದೀನ ‎ಪ್ರಕರಣಕ್ಕೆ ಅರಣ್ಯ ಇಲಾಖೆ ತುರ್ತು ‎ಅನುಮೋದನೆ…..

1 min read

‎ಮೂಡಿಗೆರೆ-ಮೂಗ್ತಿಹಳ್ಳಿ ಹೆದ್ದಾರಿ
‎ಕಾಮಗಾರಿ ವಿಳಂಬ, ಅರಣ್ಯ
‎ಇಲಾಖಾ ಕೆಂದ್ರೀಯ ಕಚೇರಿಗೆ
‎ಖುದ್ದು ಭೇಟಿ ನೀಡಿದ ಸಂಸದ
‎ಕೋಟಾ ಶ್ರೀನಿವಾಸ ಪೂಜಾರಿ,
‎ನೆನೆಗುದಿಗೆಯಲ್ಲಿದ್ದ ಭೂಸ್ವಾದೀನ
‎ಪ್ರಕರಣಕ್ಕೆ ಅರಣ್ಯ ಇಲಾಖೆ ತುರ್ತು
‎ಅನುಮೋದನೆ
‎
‎
‎ಚಿಕ್ಕಮಗಳೂರು ಜಿಲ್ಲೆಯ ಮೂಗುತಿಹಳ್ಳಿಯಿಂದ ಮೂಡಿಗೆರೆ ರಾಷ್ಟ್ರೀಯ ಹೆದ್ದಾರಿ 173 -26 ಕಿಲೋಮೀಟ‌ರ್ ಭೂಸ್ವಾದಿನ ಪ್ರಕ್ರಿಯೆ, ವಿಳಂಬವಾದ ಹಿನ್ನೆಲೆಯಲ್ಲಿ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಬೆಂಗಳೂರಿನ ಪರಿಸರ ಅರಣ್ಯ ಮತ್ತು ಹವಾಮಾನ ಬಲಾವಣೆ ಸಚಿವಾಲಯ ಇಲಾಖೆಯ ಅರಣ್ಯ ಉಪ ಮಹಾನಿರ್ದೇಶಕರ ಕಚೇರಿಗೆ ಖುದ್ದು ಭೇಟಿ ನೀಡಿ ಹಿರಿಯ ಅಧಿಕಾರಿ ಐ.ಎಫ್.ಎಸ್ ಸೆಂಥಿಲ್ ಕುಮಾರ್ ಜೊತೆ ಚರ್ಚಿಸಿದರು.
‎
‎ಈ ಹಿನ್ನಲೆಯಲ್ಲಿ ಬಹಳ ದಿನಗಳಿಂದ ನೆನೆಗುದಿಗೆಯಲ್ಲಿದ್ದ ಭೂಸ್ವಾದೀನ ಪ್ರಕರಣಕ್ಕೆ ಅರಣ್ಯ ಇಲಾಖೆ ಮೂರೇ ದಿನಗಳಲ್ಲಿ ತುರ್ತು ಅನುಮೋದನೆ ನೀಡಿದೆ.
‎
‎ಅನುಮೋದಿತ ರಾಷ್ಟ್ರೀಯ ಹೆದ್ದಾರಿ ಅಂಚಿನ ಮರಗಳ ಮೌಲ್ಯ ನಿಗಧಿಕರಿಸಿ, ತೆರುವುಗೊಳಿಸಿ, ಎನ್‌ಎಚ್-173 ಮೂಡಿಗೆರೆ-ಮೂಗುತಿಹಳ್ಳಿ ಹೆದ್ದಾರಿ ಕಾಮಗಾರಿ ಶೀಘ್ರದಲ್ಲೇ ಕೈಗೆತ್ತಿಕೊಳ್ಳಲಾಗುವುದೆಂದು ಸಂಸದ ಕೋಟ ಕಚೇರಿಯ ಪ್ರಕಟಣೆ ತಿಳಿಸಿದೆ.
‎ಅರಣ್ಯಾಧಿಕಾರಿ ಕಚೇರಿ ಭೇಟಿ ಸಂದರ್ಭಸಂಸದರೊಂದಿಗೆ ಎನ್.ಹೆಚ್ ಪ್ರಾಧಿಕಾರದ ಹಾಸನ ವಿಭಾಗದ ಮುಖ್ಯ ಕಾರ್ಯನಿರ್ವಾಹಕ ಅಭಿಯಂತರ ವಿಶ್ಲೇಶ್, ಸಹಾಯಕ ಕಾರ್ಯ ಪಾಲಕ ಕಾಂಬ್ಳೆ, ಶಶಿಕುಮಾರ್, ಸಂಸದರ ಆಪ್ತ ಸಹಾಯಕ ಯತೀಶ್ ಬೆಟ್ಟಗೆರೆ ಇದ್ದರು.

About Author

Leave a Reply

Your email address will not be published. Required fields are marked *

You may have missed