लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎ನಮ್ಮ ರಾಜ್ಯದಲ್ಲಿಯೇ ಇರುವ ವನ್ಯಜೀವಿಗಳ ಸಂರಕ್ಷಣೆಯ ಬಗೆಗೆ ಅರಣ್ಯ ಇಲಾಖೆಯ ನಿರ್ಲಕ್ಷ್ಯ ಎಲ್ಲೆಲ್ಲೂ ಕಣ್ಣಿಗೆ ರಾಚುತ್ತಿದೆ….

1 min read

‎ನಮ್ಮ ರಾಜ್ಯದಲ್ಲಿಯೇ ಇರುವ ವನ್ಯಜೀವಿಗಳ ಸಂರಕ್ಷಣೆಯ ಬಗೆಗೆ ಅರಣ್ಯ ಇಲಾಖೆಯ ನಿರ್ಲಕ್ಷ್ಯ ಎಲ್ಲೆಲ್ಲೂ ಕಣ್ಣಿಗೆ ರಾಚುತ್ತಿದೆ.
‎ಈ ಮಧ್ಯೆ ದಕ್ಷಿಣ ಆಫ್ರಿಕಾದಿಂದ ಬನ್ನೇರುಘಟ್ಟ ಮೃಗಾಲಯಕ್ಕೆ ನಾಲ್ಕು ಚೀತಾ ತರಲಾಗಿದೆ. ಇದಕ್ಕೆ ಕೋಟಿ ಕೋಟಿಗಳಲ್ಲಿ ಹಣ ವ್ಯರ್ಥ ಮಾಡಲಾಗಿದೆ.
‎
‎ರಾಜ್ಯದಲ್ಲಿ ಇರುವ ಮೃಗಾಲಯಗಳಲ್ಲಿ ಅವೈಜ್ಞಾನಿಕ ನಿರ್ವಹಣೆಯಿಂದ ಪ್ರಾಣಿಗಳ ಸಾವು ಮಾಮೂಲಿ. ಇಂತಹ ವಿಷಯಗಳು ಎಲ್ಲೂ ಹೊರಗೆ ಬರುವುದಿಲ್ಲ. ಇತ್ತೀಚೆಗೆ ಶಿವಮೊಗ್ಗ ಮೃಗಾಲಯದಲ್ಲಿ ನೀರಾನೆ ಹಂಸಿಣಿಯ ಸಾವು, ಅದು ವೈದ್ಯೆ ಸಮೀಕ್ಷಾ ರೆಡ್ಡಿಯವರ ಸಾವಿಗೆ ಕಾರಣವಾಗಿದ್ದರಿಂದ ಸುದ್ದಿ ಆಯಿತು ಅಷ್ಟೇ. ಮೃಗಾಲಯದಲ್ಲಿ ಪ್ರಾಣಿಗಳ ಸಾವುಗಳು ಕೆಲವೇ ಕೆಲವು ನಗರ ಪರಿಸರವಾದಿಗಳು, ಕಾರ್ಪೋರೇಟ್ ಸಂರಕ್ಷಣಾಧಿವಾದಿಗಳು, ಪತ್ರಕರ್ತರಿಗೆ ಮಾತ್ರ ಗೊತ್ತಿರುತ್ತದೆ. ಕೆಲವರು ಸಾವಿನಲ್ಲೂ ಒಂದಷ್ಟು ಕಾಸು ಮಾಡಿಕೊಳ್ಳುತ್ತಾರೆ ಅಷ್ಟೇ.
‎
‎ರಾಜ್ಯದಲ್ಲಿ ಇರುವ ಉರಗ ರಕ್ಷಕರಿಗೆ ಕನಿಷ್ಠ ಹಾವು ಹಿಡಿಯುವ ಸ್ಟಿಕ್ ಮತ್ತು ಬ್ಯಾಗ್ ಕೊಡುವ ಯೋಗ್ಯತೆ ಇಲ್ಲದ ಅರಣ್ಯ ಇಲಾಖೆ ಒಂದು ಕಡೆ. ಇನ್ನೊಂದು ಕಡೆ ಕೋಟಿಗಳಲ್ಲಿ ಹಣ ವ್ಯಯಿಸಿ ಆಫ್ರಿಕಾದಿಂದ ಚೀತಾ ತಂದಿರುವುದು. ವನ್ಯಜೀವಿಗಳಿಗೋಸ್ಕರ ಸರ್ಕಾರದಿಂದ ಸಿಗುವ ಹಣವೇ ಅಲ್ಪಸ್ವಲ್ಪ. ಹೀಗಿರುವಾಗ ನಮ್ಮ ಆದ್ಯತೆ ಏನಾಗಿರಬೇಕು?
‎
‎ಮೃಗಾಲಯಗಳು ಮನುಷ್ಯರ ಕ್ರೌರ್ಯದ ಪರಮಾವಧಿಗೆ ನಿದರ್ಶನ. ವನ್ಯಜೀವಿಗಳನ್ನು ಮನುಷ್ಯರ ಮನರಂಜನೆಗೆ ಹಾಗೂ NGOಗಳು ಮತ್ತು ಕಾರ್ಪೊರೇಟ್ ಸಂರಕ್ಷಣಾವಾದಿಗಳು ಹಣ ಮಾಡಲು ಮಾತ್ರ ಬಳಸಿಕೊಳ್ಳಲಾಗುತ್ತಿದೆ. 
‎
‎Karnataka Forest Department Eshwar Khandre Chief Minister of Karnataka Siddaramaiah  ವನ್ಯಜೀವಿ ಸಂರಕ್ಷಣೆಯ ವಿಷಯದಲ್ಲಿ ನಿಮಗೆ ಇಂದಿರಾಗಾಂಧಿಯವರು ಆದರ್ಶವಾಗಲಿ. ಒಂದು ಕಡೆ ದೇಶದ ಕಾಡುಗಳನ್ನು ಕಾರ್ಪೋರೇಟ್ ಗಳಿಗೆ ಕೊಡುತ್ತಾ, ಇನ್ನೊಂದು ಕಡೆ, ಆಫ್ರಿಕಾದಿಂದ ಚೀತಾ ತಂದು ಗಿಮಿಕ್ ಮಾಡಿದ ನರೇಂದ್ರ ಮೋದಿಯವರಲ್ಲ.
‎
‎ಈಶ್ವರ್ ಖಂಡ್ರೆಯವರು ಮೇಲೆ ನಮಗೆಲ್ಲಾ ಅಪಾರ ಭರವಸೆ ಇತ್ತು. ದಿನೇ ದಿನೇ ಅದು ಕುಸಿಯುತ್ತಿದೆ.
‎
‎- Nagaraj Koove /ನಾಗರಾಜ ಕೂವೆ

About Author

Leave a Reply

Your email address will not be published. Required fields are marked *

You may have missed