ಕಾನನದ ಮಧ್ಯೆ ಅದ್ದೂರಿಯಾಗಿ ನಡೆದ ಕರಾವಳಿ ಉತ್ಸವ ….
1 min read
ಕಾನನದ ಮಧ್ಯೆ ಅದ್ದೂರಿಯಾಗಿ ನಡೆದ ಕರಾವಳಿ ಉತ್ಸವ
ಕೊಟ್ಟಿಗೆಹಾರದ ತರಿಮಲೇ ಪ್ರದೇಶದ ಕಾಡಿನ ಮಧ್ಯೆ ನಡೆಯುವ ಇತಿಹಾಸ ಪ್ರಸಿದ್ದ ಶ್ರೀ ತರಿಮಲೇ ಚೌಡಿ ಮಂಜ ಉತ್ಸವ ಭಕ್ತಿಭಾವದಿಂದ ಹಾಗೂ ಸಂಪ್ರದಾಯಬದ್ದವಾಗಿ ನೆರವೇರಿತು. ಈ ಉತ್ಸವವು ದೇವರ ಆದಿ ಸ್ಥಾನವೆಂದು ಪರಿಗಣಿಸಲ್ಪಡುವ ತರಿಮಲೇಯ ವಿಶೇಷ ಆಚರಣೆಗಳಲ್ಲಿ ಒಂದಾಗಿದೆ.
ಉತ್ಸವದ ಅಂಗವಾಗಿ ಒಂದು ವಾರ ಮೊದಲು ಗೊನೆ ಕಡಿದು ದೇವಸ್ಥಾನದಲ್ಲಿ ಇಡಲಾಗುತ್ತದೆ. ಬುಧವಾರ ರಾತ್ರಿ ಬಂಡಾರ ತೆಗೆದು ದೇವಸ್ಥಾನದಲ್ಲಿ ಪೂಜಾ ವಿಧಿಗಳು ನೆರವೇರಿಸಲ್ಪಡುತ್ತವೆ. ಬೆಳಿಗ್ಗೆ 5 ಗಂಟೆಯೊಳಗೆ ಯಾರೂ ದೇವರ ಮುಖ ನೋಡುವಂತಿಲ್ಲ ಎಂಬ ಆಚರಣೆ ಪಾಲಿಸಲಾಗುತ್ತದೆ. ನಂತರ ಗುರುವಾರ ಬೆಳಿಗ್ಗೆ ದೇವರ ಬಂಡಾರವನ್ನು ತರಿಮಲೆಗೆ ಕೊಂಡೊಯ್ಯಲಾಗುತ್ತದೆ. ಅಲ್ಲಿ ಪುಣ್ಯ ಪೂಜೆ, ಪುನಸ್ಕಾರಗಳು ನೆರವೇರಿಸಿ ನಂದಿ ಕಟ್ಟುವ ಮೂಲಕ ಮಂಜ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ.
ನಂತರ ಮಂಜ ನಡೆಯುವ ಸ್ಥಳವಾದ ವಗಸಾಲಗಂಡಿಗೆ ತೆರಳಿ, ಹಿಂದಿನ ಕಾಲದಲ್ಲಿ ಕೋಲ ನಡೆಯುತ್ತಿದ್ದ ಈ ಸ್ಥಳದಲ್ಲಿ ಈಗ ಹರಕೆ ವಿಧಿಗಳು ನಡೆಯುತ್ತಿವೆ. ಭಕ್ತರು 12 ಪ್ರಮುಖ ದೇವತೆಗಳಿಗೆ ಎಡೆ ಇಟ್ಟು, 101 ದೈವಗಳಿಗೆ ಪಂಜಲ್ಲಿ ದೀಪ ಹಚ್ಚಿ ಪೂಜೆ ಸಲ್ಲಿಸುತ್ತಾರೆ. ಮರದ ತೊಗಟೆಯಲ್ಲಿ ಆರತಿ ತಟ್ಟೆ ತಯಾರಿಸಿ ವಿಶೇಷ ಪೂಜೆ ನಡೆಸಲಾಗುತ್ತದೆ. ಬಳಿಕ ಅನ್ನಪ್ರಸಾದ ವಿತರಣೆ ಮಾಡಲಾಗುತ್ತದೆ.
ಈ ಉತ್ಸವ ವರ್ಷಕ್ಕೊಮ್ಮೆ ಮಾತ್ರ ನಡೆಯುವ ವಿಶೇಷ ಆಚ-ರಣೆ. ಇದರ ಎರಡನೇ ದಿನದ ಮೊದಲು, ಮಂಗಳವಾರ ತರುವೆ ಗ್ರಾಮದ ಅಮ್ಮನವರ ದೇವಸ್ಥಾನದಲ್ಲಿ ವಾರ್ಷಿಕೋತ್ಸವ ನಡೆಯುತ್ತದೆ. ಅದರ ಮುಂದುವರಿದ ಭಾಗವಾಗಿ ಗುರುವಾರ ಮಂಜ ಉತ್ಸವ ನಡೆಯುವುದು ಸಂಪ್ರದಾಯವಾಗಿದೆ.
ನೆನ್ನೆ ನಡೆದ ಮಂಜ ಉತ್ಸವದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಮಾತ್ರವಲ್ಲದೆ ಬೆಂಗಳೂರು, ಹಾಸನ, ಮಂಗಳೂರು, ಶಿವಮೊಗ್ಗ, ಬಳ್ಳಾರಿ, ಹರಪನಹಳ್ಳಿ, ದಾವಣಗೆರೆ, ಮಡಿಕೇರಿ, ಅರಕಲಗೂಡು, ಮೈಸೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು. ಭಕ್ತರು ಕುರಿ, ಕೋಳಿ ಹರಕೆಗಳನ್ನು ಸಲ್ಲಿಸಿ ದೇವಿ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.
ಈ ರೀತಿ ಕಾನನದ ನೈಸರ್ಗಿಕ ಸೌಂದರ್ಯದ ನಡುವೆ ನಡೆದ ಕಲಾವಳಿ ಉತ್ಸವ ಭಕರ ಮನಸಿನಲ್ಲಿ ಆಧ್ಯಾತ್ಮಿಕ ಸಂದನೆ ಮೂಡಿಸಿತು.

