ಶುದ್ಧ ಕುಡಿಯುವ ನೀರಿನ ಘಟಕದ ಕೊಡುಗೆ ನೀಡಿದ ರೋಟರಿ ಕಾಫಿ ಲ್ಯಾಂಡ್…..
1 min read
ಅವಿನ್ ಟಿವಿ ಸುದ್ದಿಜಾಲ ✍️: ಶುದ್ಧ ಕುಡಿಯುವ ನೀರಿನ ಘಟಕದ ಕೊಡುಗೆ ನೀಡಿದ ರೋಟರಿ ಕಾಫಿ ಲ್ಯಾಂಡ್.
ಚಿಕ್ಕಮಗಳೂರು ಏ ೧೭: ಆರೋಗ್ಯಕರ ಜೀವನಕ್ಕೆ ಶುದ್ಧ ನೀರು ಬಹಳ ಮುಖ್ಯ, ಬಹುಪಾಲು ರೋಗಗಳು ಅಶುದ್ಧ ನೀರಿನ ಬಳಕೆಯಿಂದಲೇ ಮನುಷ್ಯರನ್ನು ಬಳಲಿಸುತ್ತಿದ್ದಾವೆ ಹಾಗೂ ಶುದ್ಧ ನೀರು ಕುಡಿಯುವುದರಿಂದ ಹಲವು ರೋಗಗಳನ್ನು ದೂರ ಮಾಡಬಹುದು ಎಂದು ವೈದ್ಯಕೀಯ ಶಾಸ್ತ್ರ ಹೇಳುತ್ತದೆ.
ಈ ನಿಟ್ಟಿನಲ್ಲಿ ನಗರದ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ತರಬೇತಿ ಕೇಂದ್ರಕ್ಕೆ ರೋಟರಿ ಕಾಫಿ ಲ್ಯಾಂಡ್ ವತಿಯಿಂದ 50 ಲೀಟರ್ ಸಾಮರ್ಥ್ಯದ ಶುದ್ಧ ಕುಡಿಯುವ ನೀರಿನ ಘಟಕವನ್ನು ಗುರುವಾರ ಕೊಡುಗೆಯಾಗಿ ನೀಡಲಾಯಿತು.
ರೋಟರಿ ಕಾಫಿ ಲ್ಯಾಂಡ್ ಅಧ್ಯಕ್ಷ ನಾಗೇಶ್ ಕೆಂಜಿಗೆ, ಕಾರ್ಯದರ್ಶಿ ಶೇಕ್ ಆಲಿ, ವಿವೇಕ್, ಬಿ.ಕೆ.ಗುರುಮೂರ್ತಿ, ಆ ರ್ಪಿಐ ರುದ್ರೇಶ್, ರೆಹಮಾನ್ ಹಾಗೂ ಇತರರು ಇದ್ದರು.
•••••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ …. ✍️
ಚಿಕ್ಕಮಗಳೂರು

