ಮಲ್ಲಂದೂರು ಸಂತ ಲಾರೆನ್ಸ್ ಚರ್ಚ್ ವಾರ್ಷಿಕೋತ್ಸವ….
1 min read


ಮಲ್ಲಂದೂರು ಸಂತ ಲಾರೆನ್ಸ್ ಚರ್ಚ್ ವಾರ್ಷಿಕೋತ್ಸವ
ಆಲ್ದೂರು: 1961 ರಲ್ಲಿ ಪ್ರಾರಂಭವಾಗಿ ಮಲ್ಲಂದೂರು ಸಂತ ಲಾರೆನ್ಸ್ ಚರ್ಚ್ ಉಪ ಕೇಂದ್ರವಾಗಿದ್ದು 1971ರಲ್ಲಿ ಅಧಿಕೃತವಾಗಿ ಧರ್ಮ ಕೇಂದ್ರವಾಗಿ ಮಾರ್ಪಾಡಾಗಿದ್ದು, 2025ರಲ್ಲಿ
ಸಂತ ಲಾರೆನ್ಸ್ ಚರ್ಚ್ ಕಟ್ಟಡ ನೂತನವಾಗಿ ಜೀರ್ಣೋದ್ಧಾರವಾಗಿದ್ದು, ಚರ್ಚ್ ಪ್ರಾರಂಭವಾಗಿ ಒಟ್ಟು 54 ವರ್ಷಗಳು ಕಳೆದಿದ್ದು 55ನೇ ವರ್ಷದ ವಾರ್ಷಿಕೋತ್ಸವ ಮಹೋತ್ಸವ
ಬುಧವಾರ ವಿಜೃಂಭಣೆಯಿಂದ ನಡೆಯಿತು.
ಚರ್ಚ್ ಪಾಲಕ ಸಂತರಾದ ಸಂತ ಲಾರೆನ್ಸ್ ಪ್ರತಿಮೆಯನ್ನು
ಪುಷ್ಪಾಲಂಕಾರ ಮಾಡಿದ ವಾಹನದ ಮೂಲಕ ಪಟ್ಟಣದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಲಾರೆನ್ಸ್ ರವರ ಕುರಿತ ಭಜನೆ ಮತ್ತು ಏಸುಕ್ರಿಸ್ತರ ಹಾಡುಗಳನ್ನು ಕ್ರೈಸ್ತ ಭಕ್ತಾದಿಗಳು ಹಾಡುತ್ತ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು ಬಳಿಕ
ಕಪ್ಪು ಚಿನ್ ಸಭೆಯ ಫಾದರ್ ಪೌಲ್ ಮೆಲ್ವಿನ್ ಡಿಸೋಜಾ ವಾರ್ಷಿಕೋತ್ಸವದ ಅಂಗವಾಗಿ ವಿಶೇಷ ಬಲಿ ಪೂಜೆಯನ್ನು ನೆರವೇರಿಸಿ.
ಸಂತ ಲಾರೆನ್ಸ್ ರವರ ಜೀವನದಂತೆ ಮಾದರಿ ಜೀವನ ನಡೆಸಿ, ಪ್ರಭು ಕ್ರಿಸ್ತರು ತತ್ವ ಆದರ್ಶಗಳನ್ನು ಪಾಲಿಸಿ ಸರ್ವರೊಂದಿಗೂ ಪ್ರೀತಿ ಸಹೋದರತ್ವದಿಂದ ಬಾಳಬೇಕೆಂದು ಸಂದೇಶ ನೀಡಿದರು.
ಧರ್ಮ ಕೇಂದ್ರ ಗುರು ಅನಿಲ್ ಪಾಯಸ್ ಹಬ್ಬದ ನೇತೃತ್ವವನ್ನು ವಹಿಸಿದ್ದು ವಿವಿಧ ಧರ್ಮ ಕೇಂದ್ರಗಳಿಂದ 25 ಮಂದಿ ಗುರುಗಳು ಭಾಗವಹಿಸಿದ್ದರು. ಹಬ್ಬದ ಪ್ರಯುಕ್ತ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಚರ್ಚ್ ಕಟ್ಟಡವನ್ನು ವಿದ್ಯುತ್ ದ್ವೀಪಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು.
ಚರ್ಚ್ ವ್ಯಾಪ್ತಿಯ ಜಾಗರ, ಅರ್ಜಿ ಹಳ್ಳಿ, ಬೈಗೂರು,
ಕೆರೆ ಮಕ್ಕಿ, ಶಿರವಾಸೆ ಗ್ರಾಮಗಳಿಂದ ಭಕ್ತಾದಿಗಳು ಪಾಲ್ಗೊಂಡರು.

