लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಶಾಂತಿ ಭಂಗವಾಗದಿರಲಿ: ವಿಶ್ವಗುರು ಲಿಯೋ
‎
ಕಳೆದ ಕೆಲವು ದಿನಗಳಿಂದಲೂ ಮಧ್ಯ ಪ್ರಾಚ್ಯದಲ್ಲಿ ನಡೆಯುತ್ತಿರುವ ಇರಾನ್ ಹಾಗು ಇಸ್ರಯೇಲ್ ಅಮೇರಿಕ ದೇಶಗಳ ಯುದ್ಧವನ್ನು ಕಥೋಲಿಕ ಕ್ರೈಸ್ತರ ಪರಮೋಚ್ಛ ವಿಶ್ವಗುರು 14ನೇ ಲಿಯೋರವರು ಖಂಡಿಸುತ್ತಾ ಬಂದಿದ್ದಾರೆ. ಇಡೀ ವಿಶ್ವ ಇಂದು ಬಯಸುತ್ತಿರುವುದು ಶಾಂತಿ. ಹಾಗಾಗೀ ಯುದ್ಧದ ಮನೋಭಾವನ್ನು ತ್ಯಜಿಸಿ, ಮುಗ್ಧರ ರಕ್ತಪಾತ ಮಾಡದೇ, ದ್ವೇಷವನ್ನು ತೊರೆದು, ಶಾಂತಿಯಿಂದ ಸರ್ವರು ಒಟ್ಟಾಗಿ ಬಾಳಬೇಕು ಎಂದು ಅವರು ಅನೇಕ ಪ್ರತಿಕಾ ಪ್ರಕಟಣೆಯಲ್ಲಿ, ಪ್ರಾರ್ಥನೆಗಳಲ್ಲಿ ಹೇಳುತ್ತಲ್ಲೇ ಬರುತ್ತಿದ್ದಾರೆ.
‎
‎ಆದರೆ ವಿಶ್ವಗುರುಗಳ ಈ ಶಾಂತಿ ಸಂದೇಶವನ್ನು ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರವರು ಖಂಡಿಸಿರುವುದು ನಿಜವಾಗಿಯೂ ಒಂದು ದುರಂತ. ಶಾಂತಿಯಿಂದ ಜೀವಿಸಬೇಕಾದ ಮನುಷ್ಯರು, ಎಲ್ಲಾ ಸಮಸ್ಯೆಗಳಿಗೂ ಯುದ್ಧವನ್ನೇ ಪರಿಹಾರವನ್ನಾಗಿಸಿಕೊಂಡಿರುವ ಜನರ ಮನೋಸ್ಥಿತಿಯನ್ನು ವಿಶ್ವಗುರು ಲಿಯೋರವರು ಖಂಡಿಸುತ್ತಾರೆ.
‎
‎ಇದರ ಜೊತೆಗೆ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರವರು ತಮ್ಮನ್ನೇ ಯೇಸು ಕ್ರಿಸ್ತರಂತೆ ಹೋಲಿಕೆ ಮಾಡಿಕೊಂಡಿರುವ ಎಐ ಚಿತ್ರ ಕೂಡ ಖಂಡನಿಯ. ಯೇಸು ಕ್ರಿಸ್ತರ ಸರಿಸಮಕ್ಕೆ ಯಾರೂ ಕೂಡ ಹೋಗಲು ಸಾಧ್ಯವಿಲ್ಲ. ಅದರೆ ಡೊನಾಲ್ಡ್‌ ಟ್ರಂಪ್‌ರವರ ಈ ಎಐ ಚಿತ್ರ ನಿಜವಾಗಿಯೂ ಕ್ರೈಸ್ತರ ಭಾವನೆಗಳಿಗೆ ನೋವುಂಟು ಮಾಡಿದೆ. ಈ ನಿಟ್ಟಿನಲ್ಲಿ ಚಿಕ್ಕಮಗಳೂರು ಧರ್ಮಕ್ಷೇತ್ರ ಡೊನಾಲ್ಡ್ ಟ್ರಂಪ್‌ರವರ ಶಾಂತಿಯ ವಿರುದ್ದದ ನಡೆಯನ್ನು ಹಾಗೂ ವಿಶ್ವಗುರುಗಳ ಸಂದೇಶದ ವಿರುದ್ಧದ ಹೇಳಿಕೆಗಳನ್ನು ಖಂಡಿಸುತ್ತದೆ. ಇದರೊಂದಿಗೆ ಚಿಕ್ಕಮಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಟಿ. ಅಂತೋಣಿ ಸ್ವಾಮಿಯವರು, ಯುದ್ಧ ಇಂದಿಗೆ ಕೊನೆಯಾಗಲಿ, ಇಡೀ ಮನುಕುಲ ಶಾಂತಿ, ಸೌರ್ಹಾದತೆಯಿಂದ ಜೀವಿಸಲಿ, ಅದಕ್ಕಾಗಿ ನಾವೆಲ್ಲರೂ ಒಂದಾಗಿ ಶ್ರಮಿಸೋಣ ಎಂದು ಕರೆನೀಡಿದ್ದಾರೆ.

About Author

Leave a Reply

Your email address will not be published. Required fields are marked *

You may have missed