ಬದುಕಿನ ಚರಿತ್ರೆಯನ್ನು ಪೀಠಗಳ ಪರಂಪರೆಯನ್ನು ಉತ್ಕೃಷ್ಟವಾಗಿ ಬರೆಸಿಕೊಳ್ಳಬೇಕಾಗಿದ್ದ ಮಠ ಮಂದಿರಗಳು ಇಂದು ಎತ್ತ ಸಾಗುತ್ತಿವೆ ?..
1 min read
ಅವಿನ್ ಟಿವಿ ಸುದ್ದಿಜಾಲ ✍️:
ಬದುಕಿನ ಚರಿತ್ರೆಯನ್ನು ಪೀಠಗಳ ಪರಂಪರೆಯನ್ನು ಉತ್ಕೃಷ್ಟವಾಗಿ ಬರೆಸಿಕೊಳ್ಳಬೇಕಾಗಿದ್ದ ಮಠ ಮಂದಿರಗಳು ಇಂದು ಎತ್ತ ಸಾಗುತ್ತಿವೆ ?
ಭಕ್ತರು ಮತ್ತು ಸ್ವಾಮೀಜಿಗಳ ನಡುವೆ ಇರುವ ಅಂತರದ ಗೆರೆ ಮಸುಕಾದರೆ ಯಾರು ಯಾರಿಗೆ ಮಾದರಿಯಾಗಲು ಸಾಧ್ಯ ?
ಐಷಾರಾಮಿ ಭೋಗ ಜೀವನದ ಹಿಂದೆ ಬಿದ್ದು, ಸರಳತೆ ಮತ್ತು ಸಂತೃಪ್ತ ಜೀವನಕ್ಕೆ ಬೆನ್ನು ಮಾಡಿ, ಹಣದ ರಾಶಿಯ ಬೆನ್ನತ್ತಿ, ಸುಖಕ್ಕೆ ಮಾರು ಹೋಗಿ, ಸಂತೋಷವನ್ನು ಕಳೆದುಕೊಳ್ಳುತ್ತಿರುವ ಈ ಕಾಲಘಟ್ಟದಲ್ಲಿ ನಮ್ಮನ್ನು ನಾವೇ ವಿಮರ್ಶೆಗೆ ಒಡ್ಡಿಕೊಳ್ಳದಿದ್ದರೆ ಭವಿಷ್ಯದ ಸಮಾಜಕ್ಕೆ ಅದು ಭಕ್ತರಾಗಿರಲಿ ಅಥವಾ ಸ್ವಾಮೀಜಿಗಳಾಗಿರಲಿ ಶಾಪಗ್ರಸ್ತರಂತೆ ಕಾಣುತ್ತಾರೆ.
ಹರಿಹರದ ಲಿಂಗಾಯತ ಪಂಚಮಸಾಲಿ ಪೀಠದಿಂದ ಯೋಗಗುರು ವಚನಾನಂದ ಸ್ವಾಮೀಜಿ ಅವರನ್ನು ಉಚ್ಚಾಟನೆ ಮಾಡಿದ ಟ್ರಸ್ಟಿಗಳು.
ಹರಿಹರ ಏ ೧೩: ಇಂದು ಗುರುಪೀಠದಲ್ಲಿ ನಡೆದ ಧರ್ಮದರ್ಶಿಗಳ ಸಭೆಯಲ್ಲಿ 12 ಮಂದಿ ಧರ್ಮದರ್ಶಿಗಳು ಭಾಗವಹಿಸಿ ಸ್ವಾಮೀಜಿಯನ್ನು ಪೀಠದಿಂದ ತೆಗೆಯಲು ನಿರ್ಣಯಿಸಿದರು.
ಶ್ವಾಸಪೀಠ ಅಥವಾ ಹರಿಹರ ಪೀಠ ಎರಡರಲ್ಲಿ ಒಂದನ್ನು ಮಾರ್ಚ್ 24ರ ಒಳಗೆ ಆಯ್ಕೆ ಮಾಡಿಕೊಳ್ಳಲು ಧರ್ಮದರ್ಶಿಗಳು ಸ್ವಾಮೀಜಿಗೆ ಗಡುವು ನೀಡಿದ್ದರು. ಆದರೆ ಸ್ವಾಮೀಜಿ ಇದಕ್ಕೆ ಸ್ಪಂದಿಸದಿದ್ದುದ್ದು ಈ ಕ್ರಮಕ್ಕೆ ಕಾರಣವೆಂದು ಹೇಳಲಾಗಿದೆ.
ಮಾರ್ಚ್ 24 ನಡೆಯಬೇಕಿದ್ದ ಧರ್ಮದರ್ಶಿಗಳ ಸಭೆಯನ್ನು ಪೋಲೀಸರ ಸಲಹೆ ಮೇರೆಗೆ ಮುಂದಕ್ಕೆ ಹಾಕಲಾಗಿತ್ತು. ದಾವಣಗೆರೆಯಲ್ಲಿ ಉಪ ಚುನಾವಣೆ ಘೋಷಣೆಯಾಗಿದ್ದರಿಂದ ಸಭೆಗೆ ಬೇಕಾದ ರಕ್ಷಣಾ ವ್ಯವಸ್ಥೆಯನ್ನು ಮಾಡಲಾಗುವುದಿಲ್ಲವೆಂದು ಪೊಲೀಸರು ಹೇಳಿದ್ದರು.
ಇಂದು ಟ್ರಸ್ಟ್ ಸಭೆ ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ ಅವರ ನೇತೃತ್ವದಲ್ಲಿ ನಡೆಯಿತು. ಈ ಸಭೆಯಲ್ಲಿ ಟ್ರಸ್ಟ್ ಕಾರ್ಯದರ್ಶಿ ಕೆ.ಎಂ. ಜ್ಯೋತಿಪ್ರಕಾಶ್, ಬಸವರಾಜ ದಿಂಡೂರ, ಬಾವಿ ಬೆಟ್ಟಪ್ಪ, ಚಂದ್ರಶೇಖರ ಪೂಜಾರ್ ಸೇರಿದಂತೆ 12 ಟ್ರಸ್ಟಿಗಳು ಭಾಗವಹಿಸಿದರು.
ಟ್ರಸ್ಟ್ ಸಭೆಯ ಬಳಿಕ ಮಾತನಾಡಿದ ಟ್ರಸ್ಟಿ ಬಸವರಾಜ ದಿಂಡೂರ ಅವರು, “ಶ್ವಾಸಪೀಠ ಅಥವಾ ಹರಿಹರ ಪಂಚಮಸಾಲಿ ಪೀಠ ಈ ಎರಡರಲ್ಲಿ ಒಂದನ್ನು ಆಯ್ಕೆಮಾಡುವಂತೆ ಸೂಚಿಸಲಾಗಿತ್ತು. ಆದರೆ, ಸ್ವಾಮೀಜಿಗಳು ಅದಕ್ಕೆ ವಿರುದ್ಧವಾಗಿ ನಡೆದುಕೊಂಡ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ” ಎಂದು ಸ್ಪಷ್ಟಪಡಿಸಿದರು.
ಮತ್ತೊಬ್ಬ ಟ್ರಸ್ಟಿ ಜಿ.ಪಿ. ಪಾಟೀಲ್, “ಇದು ಟ್ರಸ್ಟ್ನ ವೈಯಕ್ತಿಕ ನಿರ್ಧಾರವಲ್ಲ, ಸಮಾಜದ ಒಟ್ಟಾರೆ ಅಭಿಪ್ರಾಯದ ಮೇರೆಗೆ ತೆಗೆದುಕೊಳ್ಳಲಾದ ತೀರ್ಮಾನ. ಸ್ವಾಮೀಜಿ ಶ್ವಾಸಗುರು ಪೀಠವನ್ನು ಬಿಡದೇ ಇರುವುದೇ ಪ್ರಮುಖ ಕಾರಣ. ಉಳಿದ ಕಾರಣಗಳನ್ನು ಅಧಿಕೃತವಾಗಿ ತಿಳಿಸಲಾಗುತ್ತದೆ” ಎಂದು ಹೇಳಿದರು.
ಸಭೆ ನಂತರ ಟ್ರಸ್ಟಿಗಳು ಬಿಗಿ ಭದ್ರತೆಯೊಂದಿಗೆ ಶಾಲಾ ವಾಹನದಲ್ಲಿ ಸ್ಥಳ ತೊರೆದರು.
*ಟ್ರಸ್ಟಿಗಳ ವಿರುದ್ಧ ಘೋಷಣೆ*
ಮಠದ ಪ್ರವೇಶದ್ವಾರ ಬಳಿ ಜಮಾವಣೆಗೊಂಡಿದ್ದ ಭಕ್ತರು ಟ್ರಸ್ಟಿಗಳ ವಿರುದ್ಧ ಧಿಕ್ಕಾರ ಘೋಷಣೆಗಳನ್ನು ಕೂಗಿದರು.
ಪರಿಸ್ಥಿತಿ ಉದ್ವಿಗ್ನವಾಗುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು, ಮಠದ ಸುತ್ತಮುತ್ತಲಿನ 2 ಕಿಲೋಮೀಟರ್ ವ್ಯಾಪ್ತಿಯಲ್ಲಿ ಸಂಜೆ 5 ಘಂಟೆಯವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಯಿತು,ಭಕ್ತರನ್ನು ನಿಯಂತ್ರಿಸಲು ಪ್ರವೇಶದ್ವಾರದಲ್ಲಿ ಬ್ಯಾರಿಕೇಡ್ಗಳನ್ನು ಅಳವಡಿಸಲಾಗಿತ್ತು.
ಆಡಳಿತಾಧಿಕಾರಿ ರಾಜಕುಮಾರ್ ಅವರ ನೇತೃತ್ವದಲ್ಲಿ ನೆರದಿದ್ದ ಸ್ವಾಮೀಜಿಯ ಬೆಂಬಲಿಗರು ಧರ್ಮದರ್ಶಿಗಳು ಲೆಕ್ಕ ಕೊಡಬೇಕೆಂದು ಆಗ್ರಹಿಸಿದರು.
ಉಚ್ಚಾಟನೆ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ವಚನಾನಂದ ಸ್ವಾಮೀಜಿ ಇಂದು ಸಭೆ ನಡೆಯುವ ಬಗ್ಗೆ ಯಾವುದೇ ನೋಟಿಸ್ ಸಹ ನೀಡಿಲ್ಲ. ಈ ನಿರ್ಧಾರದಿಂದ ನನಗೆ ಯಾವುದೇ ಆತಂಕ ಇಲ್ಲ, ಪಂಚಮಸಾಲಿ ಮಠ 12 ಜನರ ಮಠ ಅಲ್ಲ, ಸಮಾಜದ ಜನ ಏನು ಹೇಳುತ್ತಾರೆ ಅದನ್ನು ಕೇಳುತ್ತೇನೆ ಎಂದು ವಚನಾನಂದ ಸ್ವಾಮೀಜಿ ಉಚ್ಚಾಟನೆ ಘೋಷಣೆಯಾದ ನಂತರ
ಪಂಚಮಸಾಲಿ ಸಮಾಜವೇ ನನ್ನ ಶ್ವಾಸ. ಸಮಾಜದ ಜನ ಏನು ಹೇಳುತ್ತಾರೋ ಅದರಂತೆ ಕೇಳುತ್ತೇನೆ ಎಂದರು.
ಕರ್ನಾಟಕದಲ್ಲಿ ಪಂಚಮಸಾಲಿ ನಾಯಕರು ಮತ್ತು ಸ್ವಾಮೀಜಿಗಳು ಇಂದು ಗಟ್ಟಿಯಾಗುತ್ತಿದ್ದಾರೆ. ಈ ಕಾರಣಕ್ಕೆ ಜಯ ಮೃತ್ಯುಂಜಯ ಸ್ವಾಮೀಜಿ ಇರಬಹುದು, ಹಿಂದೆ ಸಿದ್ದಲಿಂಗ ಸ್ವಾಮೀಜಿ ಇರಬಹುದು, ಈಗ ನಮ್ಮನ್ನು ಟಾರ್ಗೆಟ್ ಮಾಡಲಾಗಿದೆ ಎಂದು ದೂರಿದರು.
••••••••••••••°
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ ….. ✍️
ಚಿಕ್ಕಮಗಳೂರು

