लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಯಾವುದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಏನೆ ಸಮಸ್ಯೆ ಆದರೂ ಹೈ ವೆ ಪೆಟ್ರೋಲಿಂಗ್ ಗೆ ಕರೆ ಮಾಡಿ, ಗೂಗಲ್ ನಲ್ಲಿ ಸಂಖ್ಯೆ ಸಿಗುತ್ತದೆ , ಗಾಬರಿ ಆಗಬೇಡಿ….

1 min read

ನೆನ್ನೆ ಒಂದು ಕಾರ್ಯನಿಮಿತ್ತ ಹಾಸನ ಕ್ಕೆ ಕುಟುಂಬ ಸಮೇತ ಹೋಗಿದ್ದೆ, ವಾಪಸ್ ಬರುವಾಗ ಸಂಜೆ 5 ರ ಸಮಯ ಕಂದಲಿ ಇಂದ ಮುಂದೆ ಇರುವ ಕೆರೆಯ ಸಮೀಪ ಕಾರ್ ಬರ ಬರ ಅಂತ ಶಬ್ದಮಾಡಿ ಎಡಭಾಗಕ್ಕೆ ಎಳೆಯಿತು, ನೋಡಿದರೆ ಮುಂದಿನ ಎಡಭಾಗದ ಚಕ್ರದ ಗಾಳಿ ಸಂಪೂರ್ಣ ಹೋಗಿತ್ತು
ಸರಿ ಬದಲಿ ಚಕ್ರ ಹಾಕಲು ಚಕ್ರ ವನ್ನು ಡಿಕ್ಕಿ ಇಂದ ಕೆಳಗಿಳಿಸಿ, ಜಾಕ್, ವೀಲ್ ಬಾಕ್ಸ್, ಜಾಕ್ ಲಿವರ್ ಹುಡುಕಾಡಿದರೆ ಪತ್ತೆ ಇಲ್ಲ
ನಾನು ತೆಗೆದುಕೊಂಡು ಹೋದ ಕಾರ್ ನನ್ನ ಚಿಕ್ಕಪ್ಪನದು, ನನ್ನ ಕಾರ್ ದುರಸ್ತಿಗೆ ಅಂತ ಗ್ಯಾರೇಜ್ ಗೆ ಬಿಟ್ಟಿದ್ದೆ. ಚಿಕ್ಕಪ್ಪನಿಗೆ ಕರೆ ಮಾಡಿ ಟೂಲ್ಸ್ ಎಲ್ಲಿ ಅಂತ ಕೇಳಿದೆ, ಅವರು ಹೇಳಿದ್ದು ಕಾರ್ ಸ್ವಚ್ಛ ಮಾಡಬೇಕಾದ್ರೆ ಅವನ್ನೆಲ್ಲ ಎತ್ತಿ ಇಟ್ಟಿದ್ದೆ ಮನೆಯಲ್ಲಿ ಇದೆ ಅಂತ, ಮನೆ ಜಾಸ್ತಿ ದೂರ ಇಲ್ಲ ಕಾರ್ ನಿಲ್ಲಿಸಿದ ಜಾಗದಿಂದ ಬರೆ 55 ಕಿಲೋಮೀಟರ್
ಹಾಸನ ದಲ್ಲಿರುವ ಸಂಬಂಧಿಕರಿಗೆ ಕರೆ ಮಾಡಿದೆ, ಆ ಸಂದರ್ಭದಲ್ಲಿ ಒಂದು ಮಹಿಂದ್ರಾ ಪಿಕ್ ಅಪ್ ವಾಹನ ಬಂದು ನನ್ನ ಕಾರಿನ ಹಿಂಬಾಗದಲ್ಲಿ ನಿಂತು ಏನು ಆಗಿದೆ ಅಂತ ವಿಚಾರಿಸಿದರು. ಅದು NHAI (National high way authority of INDIA )ಪೆಟ್ರೋಲಿಂಗ್ ವಾಹನ
ಅದರಲ್ಲಿದ್ದ ಸಿಬ್ಬಂದಿ ತಕ್ಷಣ ಬಂದು ಟೈಯರ್ ಬಿಚ್ಚಲು ತಮ್ಮ ಜಾಕ್ ಮತ್ತು ಇನ್ನುಳಿದ ಸಾಧನ ಜೊತೆ ಬಂದು ಪ್ರಯತ್ನ ಮಾಡಿದರು, ಆದರೆ ಅವರ ಪರಿಕರ ನನ್ನ ವಾಹನಕ್ಕೆ ಆಗಲಿಲ್ಲ, ನನ್ನ ವಾಹನಕ್ಕೆ ಸರಿ ಹೊಂದುವ ಪರಿಕರ ತರವುದಾಗಿ ಹೋಗಿ 8 ನಿಮಿಷದಲ್ಲಿ ಸಕಲ ಪರಿಕರ ಜೊತೆ ಬಂದು ಚಕ್ರ ಬದಲಿಸಿ ಟೈಯರ್ ಅನ್ನು ಡಿಕ್ಕಿಯಲ್ಲಿ ಹಾಕಿ ಕೊಟ್ಟರು. ನನಗೆ ಏನನ್ನು ಸಹ ಮುಟ್ಟಲು ಬಿಡಲಿಲ್ಲ
3 ಜನ ಸಿಬ್ಬಂದಿ ಇದ್ದರು
ಅಮೀದ ಅನ್ನುವ ವ್ಯಕ್ತಿ ಪೆಟ್ರೋಲಿಂಗ್ ಆಫೀಸರ್
ವಿನೋದ್ ಕುಮಾರ್ ಹೆಲ್ಪರ್
ಚಂದನ್ ಮತ್ತು ಕಾಂತರಾಜ್ ಅನ್ನುವ ಸಿಬ್ಬಂದಿ ಜೊತೆ ಇದ್ದರು
ಇವರದ್ದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಉಚಿತ ವಾಗಿ ಸೇವೆಗೆ ಇಟ್ಟಿರುವ ವ್ಯವಸ್ಥೆ. ತುಂಬಾ ಚೆನ್ನಾಗಿ ಪರಿಸ್ಥಿತಿ ನಿರ್ವಹಣೆ ಮಾಡಿದರು ಯಾವುದೆ ಶುಲ್ಕ ವಿಲ್ಲದೆ
ಇಂತ ಒಂದು ವ್ಯವಸ್ಥೆ ಕಲ್ಪಿಸಿದ ಕೇಂದ್ರ ಭೂ ಸಾರಿಗೆ ಸಚಿವರಿಗೂ. ಇಲಾಖೆಗೂ ಹಾಗು ತಕ್ಷಣ ಸ್ಥಳದಲ್ಲಿ ಸ್ಪಂದಿಸಿದ NHAI ಪೆಟ್ರೋಲಿಂಗ್ ಸಿಬ್ಬಂದಿ ಯ ಆಫೀಸರ್ ಅಮೀದ್, ಹೆಲ್ಪರ್ ವಿನೋದ್ ಕುಮಾರ್ ಮತ್ತವರ ತಂಡ, ಚಂದನ್, ಕಾಂತರಾಜ್ ಅವರಿಗೂ ತುಂಬು ಹೃದಯದ ಧನ್ಯವಾದಗಳು
ಇತ್ತೀಚಿಗೆ ಮೂರು ದಿನದಿಂದ ಈ ರೀತಿ ತಕ್ಷಣವಾಗಿ ಚಕ್ರದ ಗಾಳಿ ಹೋಗುವ ಪ್ರಕರಣ ಜಾಸ್ತಿ ಆಗುತ್ತಿದೆ, ಕಾರಣ ತಾಪಮಾನ ಏರುತ್ತಿರುವುದು ಮತ್ತು ಕಾಂಕ್ರೀಟ್ ರಸ್ತೆ ಅನ್ನುವ ವಿಚಾರ ತಿಳಿಯಿತು
ಕಳೆದ ಮೂರು ದಿನದಿಂದ ದಿನಕ್ಕೆ 10 ರ ಸರಸರಿಯಂತೆ ವಾಹನಗಳು ಈ ರೀತಿ ಆಗುತ್ತಿದೆ ಅಂತ ತಿಳಿಸಿದರು

ಯಾವುದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಏನೆ ಸಮಸ್ಯೆ ಆದರೂ ಹೈ ವೆ ಪೆಟ್ರೋಲಿಂಗ್ ಗೆ ಕರೆ ಮಾಡಿ, ಗೂಗಲ್ ನಲ್ಲಿ ಸಂಖ್ಯೆ ಸಿಗುತ್ತದೆ , ಗಾಬರಿ ಆಗಬೇಡಿ

ಇನ್ನೊಂದು ವಿಷಯ ನೆನಪಿಸಲು ಮರೆತಿದ್ದೆ.
ವಾಹನದಲ್ಲಿ ಹೊರಡುವ ಮುಂಚೆ ಬದಲಿ ಚಕ್ರ, ಅದರ ಪರಿಸ್ಥಿತಿ, ವೀಲ್ ಜಾಕ್, ಜಾಕ್ ಲಿವರ್, ಸ್ಪಾನರ್ ಕಾರ್ ಲ್ಲಿ ಇದೆಯೋ ಇಲ್ಲವೋ ಅಂತ ಗಮನಿಸಿ, ವಿಶೇಷವಾಗಿ ಕಾರ್ ನ್ನು ಮನೆಯಲ್ಲಿ ತೊಳೆದಾಗ, ಸರ್ವಿಸ್ ಗೆ ಬಿಟ್ಟಾಗ, ದುರಸ್ತಿಗೆ ಬಿಟ್ಟಾಗ ಮತ್ತೊಮ್ಮೆ ಪರಿಶೀಲಿಸಿ,
ಇದರ ಬಗ್ಗೆ ಪತ್ನಿ, ತಂದೆ ತಾಯಿ ಮಕ್ಕಳು ಸಹ ಗಮನಿಸಲು ಹೇಳಬೇಕು

✍️ ಅವರೇಕಾಡು ಪೃಥ್ವಿ

About Author

Leave a Reply

Your email address will not be published. Required fields are marked *

You may have missed