ಗುಡ್ಡದೂರು ಟೆನ್ನಿಸ್ ಕ್ರಿಕೆಟ್ ಸಹರಾ ಚಾಂಪಿಯನ್….
1 min read
ಗುಡ್ಡದೂರು ಟೆನ್ನಿಸ್ ಕ್ರಿಕೆಟ್ ಸಹರಾ ಚಾಂಪಿಯನ್
ಆಲ್ದೂರು: ಸಮೀಪದ ಗುಡ್ಡದೂರು ಗ್ರಾಮದಲ್ಲಿ ಆಯೋಜಿಸಿದ್ದ ಮೂರು ದಿನಗಳ ಟೆನಿಸ್ ಕ್ರಿಕೆಟ್ ಪ್ರೀಮಿಯರ್ ಲೀಗ್ ಸೋಮವಾರ ಮುಕ್ತಾಯವಾಯಿತು.
ಕ್ರೀಡಾಕೂಟದಲ್ಲಿ ಒಟ್ಟು 16 ತಂಡಗಳು ಭಾಗವಹಿಸಿದ್ದು, ಪ್ರಾದೇಶಿಕ ಪರಿಸರದ ಗುಡ್ಡದೂರು ಸಹರಾ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿ 25 ಸಾವಿರ ನಗದು ಬಹುಮಾನ,
ದ್ವಿತೀಯ ಸ್ಥಾನ ಯಲಗುಡಿಗೆ ಏಕತಾ ತಂಡ ಗಳಿಸಿ 13 ಸಾವಿರ ನಗದು,ತೃತಿಯ ಸ್ಥಾನವನ್ನು ಬನ್ನೂರು ತಂಡ ತೃತೀಯ ಸ್ಥಾನ ಪಡೆದು 7 ಸಾವಿರ ನಗದು ಚತುರ್ಥ ಸ್ಥಾನವನ್ನು ರೆಡ್ ಸ್ಟಾರ್ ದೇವರಹಳ್ಳಿ ಅಲಂಕರಿಸಿ 4 ಸಾವಿರ ನಗದು ಬಹುಮಾನ ಪಡೆಯಿತು.
ಸಮಾರೋಪ ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ಕಠಾರದಹಳ್ಳಿ ಶಿವಕುಮಾರ್,ನವರಾಜು ಹೆಚ್, ರಕ್ಷಿತ್ ಗೌಡ ಭಾಗವಹಿಸಿದ್ದರು.
ಸರಣಿ ಸರ್ವೋತ್ತಮ ಪ್ರಶಸ್ತಿಯನ್ನು ಸಹರಾ ತಂಡದ ವಿಶ್ವ ಪಡೆದುಕೊಂಡರು. ಫೈನಲ್ ಪಂದ್ಯದಲ್ಲಿ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಸಹರಾ ತಂಡದ ಕಾರ್ತಿಕ್ ಭಾಜನರಾದರು.
ಕ್ರೀಡಾಕೂಟದ ಆಯೋಜಕರಾದ ರಾಮು,ವಿಶ್ವ, ರವಿ ವಿಕೆ, ಕಾರ್ತಿಕ್, ಶಿವ ಉಪಸ್ಥಿತರಿದ್ದರು.

