लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎ಫೋಟೋ ಶೂಟ್‌ಗೆ ನಿರ್ಬಂಧ ಹಾಗೂ ತಪ್ಪಿತಸ್ಥ ಪೋಟೋಗ್ರಾಪರ್ ಗಳ ವಿರುದ್ದ ಕ್ರಮಕ್ಕೆ ಮತ್ತು ಫೋಟೋ ಶೂಟ್‌ ಗೆ ನಿರ್ಭಂದ ಹೇರುವಂತೆ ಒತ್ತಾಯ…

1 min read
‎ಫೋಟೋ ಶೂಟ್‌ಗೆ ನಿರ್ಬಂಧ ಹಾಗೂ ತಪ್ಪಿತಸ್ಥ ಪೋಟೋಗ್ರಾಪರ್ ಗಳ ವಿರುದ್ದ ಕ್ರಮಕ್ಕೆ ಮತ್ತು ಫೋಟೋ ಶೂಟ್‌ ಗೆ ನಿರ್ಭಂದ ಹೇರುವಂತೆ ಒತ್ತಾಯ..

‎ಮೂಡಿಗೆರೆ: ಶುಕ್ರವಾರದಂದು ಮೂಡಿಗೆರೆ ತಾಲ್ಲೂಕಿನಂಚಿನಲ್ಲಿರುವ ಬೆಟ್ಟದ ಭೈರವೇಶ್ವ ದೇವಸ್ಥಾನದಲ್ಲಿ ಪ್ರಿ ವೆಡ್ದಿಂಗ್  ಹೆಸರಿನಲ್ಲಿ ಅನುಚಿತವಾಗಿ ನಡೆದುಕೊಂಡ ಛಾಯಾಗ್ರಾಹಕಾರ ಮೇಲೆ ಗ್ರಾಮದ ಭಕ್ತರು ಹಲ್ಲೆ ನಡೆಸಿದರು ಎಂದು ಇಬ್ಬರನ್ನು ಬಂಧಿಸಿರುವ ಪ್ರಕರಣಕ್ಕೆ ಭಾನುವಾರ ಗ್ರಾಮಸ್ಥರು ದೇವಸ್ಥಾನ ಮಂಡಳಿಯವರು ಮತ್ತು ಪ್ರಶಾಂತ್ ರಕ್ಷಯ ಕುಟುಂಬದವರು ದೇವಸ್ಥಾನದ  ಅವರಣದಲ್ಲಿ ಮಾಧ್ಯಮದವರೊಂದಿಗೆ ತಮ್ಮ ನೋವನ್ನು ಹಂಚಿಕೊಂಡರು.ಮುಜರಾಯಿ ದೇವಸ್ಥಾನದಲ್ಲಿ ಪ್ರೀ ವೆಡ್ಡಿಂಗ್ ಶೂಟ್‌ಗೆ ನಿರ್ಭಂದ ಹೇರುವಂತೆ ಒತ್ತಾಯಿಸಿದರು.

‎ಈ ಸಂದರ್ಭದಲ್ಲಿ ಹುರುಡಿ ವಿಕ್ರಂ ಮಾತನಾಡಿ ಮಲೆನಾಡಿನ ಹೊಯ್ಸಳ ರ ಕಾಲದಲ್ಲಿ ಮಲೆನಾಡಿನ ಜನರನ್ನು ಕಾಯಲು 6 ಬೆಟ್ಟದಮೇಲೆ ಇರುವ ಬೈರವರಲ್ಲಿ ಮರಗುಂದ ಬೆಟ್ಟದ ಭೈರವೇಶ್ವ ದೇವಸ್ಥಾನ ಒಂದು.

 ನೂರಾರು ವರ್ಷಗಳಿಂದ ಶ್ರದ್ದಾ ಇಲ್ಲಿನ ಜನರ ಮನೇ ದೇವರಾಗಿದೆ ಇಲ್ಲಿ ಪೂಜೆ ದೇವರ ದರ್ಶನಕ್ಕೆ ಮಾತ್ರ ಅವಕಾಶ ಇತ್ತು ಆದರೆ ಇಗ ಪ್ರೀವೆಡ್ಡಿಂಗ್ ಎಂಬ ಮಾಫ಼ಿಯ  ದೇವಸ್ಥಾನ ದ ಪಾವಿತ್ರತೆಯನ್ನು ಹಾಳುಮಾಡುತ್ತಿದೆ. ಮೊನ್ನೆಯೂ ಸಹ ಇಲ್ಲಿ ಅನುಚಿತವಾಗಿ ವರ್ತಿಸುತ್ತಿದ್ದ ಛಾಯಾಗ್ರಾಹಕರನ್ನು ಪಾದರಕ್ಷೆ ದೇವಸ್ಥಾನದ ಒಲಂಗಣದಲ್ಲಿ ಹಾಕಬಾರದು ಎಂದು ದೇವಸ್ಥಾನ ಕೈ ಬಂದಿದ್ದ ಭಕ್ತ ಪ್ರಶಾಂತ್ ಮತ್ತು ಇತರ ಭಕ್ತರು ಹೇಳಿದ್ದನ್ನು ಕೇಳದೆ ಗೊಂಡ ವರ್ತನೆ ತೋರಿದ ಭಾಯಾಗ್ರಾಹಕರಿಗೆ ಮಲೆನಾಡಿನ ಯಾವುದೇ ದೇವಸ್ಥಾನದಲ್ಲಿ ಫೋಟೋ ಶೂಟ್ ಮಾಡದಂತೆ ನಿರ್ಭಂಬಧಿಸಬೇಕು ಅಲ್ಲದೆ ಮಗಜಹಳ್ಳಿ ಹತ್ತಿರ ಹರಿಯುವ ನದಿ ಕೆಳಬಾಗದಲ್ಲಿ ಎಂಟು ಗ್ರಾಮಗಳ ಜನ ಅದೇ ನೀರು ಕುಡಿಯುತ್ತಾರೆ ಪ್ರವಾಸಿಗರು ತಮ್ಮ ಬಟ್ಟೆ ಇನ್ನಿತರ ವಸ್ತುಗಳನ್ನು ನದಿಗೆ ಬಿಸಾಕಿ ನೀರನ್ನು ಕಲುಷಿತಗೊಳಿಸುತಿದ್ದಾರೆ. ಇನ್ನೊಂದು ಇಂತಹ ಅನಾಹುತ ಆಗೋ ಮುನ್ನ ಜಿಲ್ಲಾ ತಾಲ್ಲೂಕು ಆಡಳಿತ ಗಮನ ಹರಿಸಬೇಕು. ಧರ್ಮದ ರಕ್ಷಣೆಗೆ ಮುಂದಾಗಿ ಕೇಸ್ ಹಾಕಿಸಿಕೊಡಿರುವ ಪ್ರಶಾಂತ್ ಮತ್ತು ಇತರರನ್ನು ಭವ್ಯವಾದ ಮೆರವಣಿಗೆಯಲ್ಲಿ ಕರೆತರುತೇವೆ ಅವರ ಕುಟುಂಬದವರು ಭಯ ಪಡುವ ಅಗತ್ಯ ಇಲ್ಲ ಎಂದು ಹೇಳಿದರು.

ವಿನೋದ್ ಕಣಚೂರು ಮಾತನಾಡಿ ನಾವೆಲ್ಲ ಸನಾತನಿಗಳು ನಮಗೆ ಕಷ್ಟ ಸುಖ ಅಂದಾಗೆಲ್ಲ ನಾವು ಬರುವುದು ದೇವಸ್ಥಾನಕ್ಕೆ ಮೊನ್ನೆಯೂ ಪ್ರಶಾಂತ್ ಕುಟುಂಬ ದೇವಸ್ಥಾನಕ್ಕೆ ಬಂದಿರುವಾಗ ಇಲ್ಲಿ ಬೇಕಾಬಿಟ್ಟಿ ಚಿತ್ರೀಕರಿಸುತ್ತಿರಿವುದನ್ನು ಪ್ರಶ್ನಿಸಿದ್ದಾರೆ. ಸದಾ ಶಾಂತ ಸ್ವಾಭವದ ವ್ಯಕ್ತಿ ಪ್ರಶಾಂತ್‌ಗೆ ಕುಟುಂಬದವರ ಎದುರಿಗೆ ಧಮ್ಮಿ ಹಾಕಿ ಪ್ರಚೋದನೆ ನೀಡಿದ ಛಾಯಾಗ್ರಾಹಕರನ್ನು ಈ ವರಗೇ ಬಂದಿಸಿಲ್ಲ ಎಂದು ಹೇಳಿದರು.

ಹಾಗೆ ಯೂಟ್ಯೂಬ್ ಫೇಸ್ ಬುಕ್ ನಲ್ಲಿ ಇವರನ್ನೆಲ್ಲ ವಸೂಲಿಗಾರು ಗುಂಡಗಳು ಎಂದು ಬಿಂಬಿಸುತ್ತಿದ್ದಾರೆ ಯಾರ ಮೇಲೂ ಇಲ್ಲಿಯವರೆಗೆ ಒಂದೇ ಒಂದು ಕೇಸ್ ಇಲ್ಲ ಆರ್ಥಿಕವಾಗಿ ಎಲ್ಲರೂ ಸಬಲರಾಗಿದ್ದಾರೆ ಎಂದು ತಿಳಿಯಬೇಕು ಅಲ್ಲದೇ ಶ್ರದ್ಧಾ ಕೇಂದ್ರ ಇನ್ನು ಮೇಲೆ ಇಲ್ಲಿ ಯಾವುದೇ ಚಿತ್ರೀಕರಣಕ್ಕೆ ಅವಕಾಶ ದೇವಸ್ಥಾನ ಆಡಳಿತ ಮಂಡಳಿ  ಗ್ರಾಮ ಪಂಚಾಯಿತಿ.ತಾಲೂಕ್ ಮಂಚಾಯಿತಿ ನೀಡಬಾರದು ಎಂದು ಆಗ್ರಹಿಸಿದರು

‎ಈ ಸಂದರ್ಭದಲ್ಲಿ ಮರಗುಂದ ಮೇಕನಗದ್ದೆ ಸೇರಿದಂತೆ ಸುತ್ತಮುತ್ತಲಿನ ಹಲವು ಗ್ರಾಮಗಳ ಗ್ರಾಮಸ್ಥರು ಛಾಯಾಗ್ರಾಹಕರನ್ನು ಬಂದಿಸುವಂತೆ ಆಗ್ರಹಿಸಿದರು. ಲೋಕೇಶ್ ದೇವಲಕೆರೆ ಮಾತನಾಡಿ, ದೇವಾಲಯದ ಸಾವಿತ್ರ್ಯತೆಯನು ಹಾಳುಗೆಡುವುತ್ತಿರುವ ಈ ಫ಼್ರೀವೆಂಡ್ಡಿಂಗ್ ಕ್ಯಾಂಪನ್ನು ಮುಜರಾಯಿ ದೇವಾಲಯಗಳಲ್ಲಿ ನಿಭಂಧವನ್ನು ಹೇರುವುದರೊಂದಿಗೆ ಕಾರ್ಮಿಕತೆಯನ್ನು ಉಳಿಸುವಂತೆ ಸರ್ಕಾರ ಮತ್ತು ಜಿಲ್ಲಾಡಳಿತವನ್ನು ಒತ್ತಾಯಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಬೀಜೇಶ್ ಕಡಿದಾಳು, ಬೆಟ್ಟಗೆರೆ ಅವೀನ್ ಅವರೇಕಾಡು ಪೃಥ್ವಿ, ಹಟ್ಟಿಬೆಟ್ಟಪುಣ್ಯಮೂರ್ತಿ, ಸುಮಾ.ಮೆಘ.ಅಂಬಿಕಾ.ದೆವಲ್ಕೆರೆ ವಸಂತ್..ಮದನ್.ಸೇರಿದಂತೆ ನೂರರು ಜನ ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *

You may have missed