लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎ಜಿಲ್ಲಾ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ.ಮೋಟಮ್ಮ ಆಯ್ಕೆ….

1 min read

‎ಜಿಲ್ಲಾ ಜಾನಪದ ಸಮ್ಮೇಳನದ
ಸರ್ವಾಧ್ಯಕ್ಷರಾಗಿ ಡಾ.ಮೋಟಮ್ಮ ಆಯ್ಕೆ.
‎
ಚಿಕ್ಕಮಗಳೂರು ಜಿಲ್ಲಾ ಆರನೇ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಮಾಜಿ ಸಚಿವೆ. ಜಾನಪದ ಕಲಾವಿದೆ, ಡಾ.ಮೋಟಮ್ಮ ಅವರಿಗೆ ಕರ್ನಾಟಕ ಜಾನಪದ ಪರಿಷತ್ತಿನ ಪದಾಧಿಕಾರಿಗಳು ಭಾನುವಾರ ಅಧಿಕೃತ ಆಹ್ವಾನ ನೀಡಿದರು.
‎
‎ಮೂಡಿಗೆರೆಯಲ್ಲಿರುವ ಮೊಟಮ್ಮನವರ ಮನೆಗೆ ತೆರಳಿದ ಪರಿಷತ್ತಿನ ಪದಾಧಿಕಾರಿಗಳು ಮೋಟಮ್ಮ ಮತ್ತು ಅವರ ಪುತ್ರಿ ಮೂಡಿಗೆರೆ ಶಾಸಕಿ ನಯನ ಮೋಟಮ್ಮ ಅವರನ್ನು ಸನ್ಮಾನಿಸಿದರು. ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ವಹಿಸಿಕೊಂಡು ಯಶಸ್ವಿಯಾಗಿ ನಡೆಸಿ ಕೊಡುವಂತೆ ಮೋಟಮ್ಮ ಅವರಿಗೆ ಮನವಿ ಮಾಡಿದರು.
‎
‎ಈ ವೇಳೆ ಮಾತನಾಡಿದ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಬಿ. ಸುರೇಶ್ ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ಏ 26ರಂದು ಜಿಲ್ಲಾ ಆರನೇ ಜಾನಪದ ಸಮ್ಮೇಳನ ಅದ್ದೂರಿಯಾಗಿ ನಡೆಯಲಿದೆ. ಸಮ್ಮೇಳನದಲ್ಲಿ ವಿವಿಧ ಗೋಷ್ಠಿಗಳು, ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ಪ್ರದರ್ಶನ ಜರುಗಲಿವೆ. ಸಮ್ಮೇಳನದಲ್ಲಿ ಜಾನಪದ ಕಲಾವಿದರನ್ನು ಗೌರವಿಸಲಾಗುವುದು ಎಂದು ತಿಳಿಸಿದರು.
‎
‎ಹನುಮಂತಪ್ಪ ವೃತ್ತದಿಂದ ಜಾನಪದ ಕಲಾತಂಡಗಳ ನಡುವೆ ಸಮ್ಮೇಳನಾಧ್ಯಕ್ಷರನ್ನು ಕುವೆಂಪು ಕಲಾಮಂದಿರಕ್ಕೆ ಕರೆದೊಯ್ಯಲಾಗುವುದು, ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ಕರ್ನಾಟಕ ಜಾನಪದ ಪರಿಷತ್ತಿನ ರಾಜ್ಯಾಧ್ಯಕ್ಷ ಪ್ರೊ.ಬೋರಲಿಂಗಯ್ಯ ಸೇರಿದಂತೆ ನಾಡಿನ ಹೆಸರಾಂತ ಕಲಾವಿದರು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಎಂದರು.ಹಸೆಪದ,ಸೋಬಾನೆಪದ, ನಾಟಿಪದ ಸೇರಿದಂತೆ ಜಾನಪದ ಗೀತೆಗಳನ್ನು ಸ್ವತಃ ಹಾಡುವ ಮೊಟಮ್ಮನವರು ಜಾನಪದ ಕಲೆ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ. ಜಾನಪದ ಜಾತ್ರೆ, ಜಾನಪದ ಹಬ್ಬ, ಯುವಜನ ಮೇಳಗಳನ್ನು ನಡೆಸುವ ಮೂಲಕ ಜಾನಪದವನ್ನು ಉಳಿಸಿ ಬೆಳೆಸಿದ್ದಾರೆ ಎಂದು ಹೇಳಿದರು.
‎
‎ಪರಿಷತ್ತಿನ ಮೂಡಿಗೆರೆ ತಾಲ್ಲೂಕು ಅಧ್ಯಕ್ಷ ಕುನ್ನಳ್ಳಿ ರವಿ ಮಾತನಾಡಿ ಸಮ್ಮೇಳನದ ವೇಳೆ ಜಾನಪದ ಪರಿಕರಗಳ ಪ್ರದರ್ಶನ, ಗ್ರಾಮೀಣ ಅಡುಗೆ ಮೇಳ ನಡೆಸಲಾಗುವುದು ಎಂದು ತಿಳಿಸಿದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ಮೋಟಮ್ಮ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ತಮ್ಮನ್ನು ಆಯ್ಕೆ ಮಾಡಿರುವುದು ತಮಗೆ ಹೆಮ್ಮೆ ಮತ್ತು ಸಾರ್ಥಕತೆ ತಂದಿದೆ ಎಂದು ಹೇಳಿದರು.
‎
‎ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಉಳಿದು, ಬೆಳೆದು, ಮುಂದಿನ ತಲೆಮಾರಿಗೆ ಹಸ್ತಾಂತರವಾಗಬೇಕಾದರೆ ಇಂದಿನ ಯುವ ಪೀಳಿಗೆ ಜಾನಪದವನ್ನು ಮೈಗೂಡಿಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
‎
‎ಕರ್ನಾಟಕ ಜಾನಪದ ಪರಿಷತ್ತಿನ ಗೌರವಾಧ್ಯಕ್ಷ ಸುಬ್ರಹ್ಮಣ್ಯ, ನಿಕಟ ಪೂರ್ವ ಅಧ್ಯಕ್ಷ ಬಕ್ಕಿ ರವಿ, ನಿರ್ಮಲ ಮಂಚೇಗೌಡ, ಬಿದರಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಯೋಗೀಶ್, ಉಪಾಧ್ಯಕ್ಷ ಚಂದ್ರೇಗೌಡ, ಜಗದೀಶ, ಜ್ಯೋತಿ, ಗೋಪಾಲ, ದೀಪಿಕಾ. ಆಶಾ ಗಣೇಶ್, ಯಾಕೂಬ್, ಸುಬತ್ತು ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *

You may have missed