लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
16/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಆರೋಗ್ಯಭರಿತ ಕುಟುಂಬದಿಂದ ಸಂತೋಷಭರಿತ ಸಮಾಜ ನಿರ್ಮಾಣ:ಫಾ.ತೋಮಸ್ ಕಲಘಟಗಿ*….

1 min read

ಕೊಟ್ಟಿಗೆಹಾರ ಏಕಲವ್ಯ ಶಾಲೆ,ಬಣಕಲ್ ನಲ್ಲಿ ಆರೋಗ್ಯ ಶಿಬಿರ, *ಆರೋಗ್ಯಭರಿತ ಕುಟುಂಬದಿಂದ ಸಂತೋಷಭರಿತ ಸಮಾಜ ನಿರ್ಮಾಣ:ಫಾ.ತೋಮಸ್ ಕಲಘಟಗಿ*
ಮೂಡಿಗೆರೆ: ಕೊಟ್ಟಿಗೆಹಾರದ ತರುವೆ ಏಕಲವ್ಯ ವಸತಿ ಶಾಲೆ ಹಾಗೂ ಬಣಕಲ್ ಚರ್ಚ್ ಸಭಾ ಭವನದಲ್ಲಿ ಫಾದರ್ ಮುಲ್ಲರ್ ಆಸ್ಪತ್ರೆ,ಮಂಗಳೂರು ಮತ್ತು ವಿಮುಕ್ತಿ ಚಾರಿಟೆಬಲ್ ಟ್ರಸ್ಟ್ ಹಾಗೂ ಬಣಕಲ್ ಕ್ರೈಸ್ತರ ಅಭಿವೃದ್ಧಿ ಸಂಘದ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಬಣಕಲ್ ಚರ್ಚ್ ಸಹಾಯಕ ಗುರು ಫಾ.ತೋಮಸ್ ಕಲಘಟಗಿ ಮಾತನಾಡಿ’ ಆರೋಗ್ಯ ಭರಿತ ಕುಟುಂಬದಿಂದ ಸಂತೋಷ ಭರಿತ ಸಮಾಜ ನಿರ್ಮಾಣವಾಗುತ್ತದೆ.ಸಂಘ ಸಂಸ್ಥೆ ನಡೆಸುವ ಉಚಿತ ಆರೋಗ್ಯ ತಪಾಸಣೆ ಶಿಬಿರಗಳು ಬಡವರಿಗೂ ತಲುಪುವಂತಾಗಬೇಕು.ನಮ್ಮಲ್ಲಿ ಸುಖ ಶಾಂತಿಯಿದ್ದರೂ ಆರೋಗ್ಯ ಸರಿ ಇಲ್ಲದಿದ್ದರೆ ಜೀವನವೇ ಶೂನ್ಯ ಎನಿಸುತ್ತದೆ.

ಆದುದರಿಂದ ನಮಗೆ ಆರೋಗ್ಯವೇ ಭಾಗ್ಯ’ ಎಂದರು. ಸಮಾರಂಭದ ಉದ್ಘಾಟನೆಯನ್ನು ವಿಮುಕ್ತಿ ಚಾರೀಟೆಬಲ್ ಟ್ರಸ್ಟ್ ನಿರ್ದೇಶಕ ಫಾ.ಅರುಣ್ ಲೋಬೊ ಮಾತನಾಡಿ’ ಗ್ರಾಮೀಣ ಜನರ ಆರೋಗ್ಯವು ಬಹು ಮುಖ್ಯವಾಗಿದ್ದು ಸಾರ್ವಜನಿಕರು ಆರೋಗ್ಯ ತಪಾಸಣೆ ಮಾಡಿಸಿಕೊಂಡು ನೆಮ್ಮದಿ ಜೀವನ ನಡೆಸಬೇಕು’ಎಂದರು.
ರಾಜ್ಯ ಕ್ರಿಶ್ಚಿಯನ್ ಅಭಿವೃದ್ಧಿ ನಿಗಮದ ನಿರ್ದೇಶಕ ಹರ್ಷ ಮೆಲ್ವಿನ್ ಲಸ್ರಾದೊ ಅವರು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವ ಅಗತ್ಯತೆ ಹಾಗೂ ಸರ್ಕಾರ ಮತ್ತು ಸಂಸ್ಥೆಗಳ ಮೂಲಕ ಜನರಿಗೆ ಲಭ್ಯವಿರುವ ವಿವಿಧ ಆರೋಗ್ಯ ಸಂಬಂಧಿತ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಏಕಲವ್ಯ ಶಾಲೆಯಲ್ಲಿ 150ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಕಣ್ಣು,ಚರ್ಮ ಹಾಗೂ ಸಾಮಾನ್ಯ ಕಾಯಿಲೆಯ ಪರೀಕ್ಷೆ ನಡೆಸಿ ಔಷಧಿ ನೀಡಲಾಯಿತು.ಶಿಬಿರದಲ್ಲಿ ಇತರ 250 ಮಂದಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಉಚಿತ ಔಷಧಿ ಪಡೆದುಕೊಂಡರು.
ಫಾದರ್ ಮುಲ್ಲರ್ ಆಸ್ಪತ್ರೆಯ ಡಾ. ಸುಶೀಲ್ ಅವರು ಆರೋಗ್ಯದ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಬಣಕಲ್ ಕ್ರೈಸ್ತರ ಅಭಿವೃದ್ಧಿ ಸಂಘ ಅಧ್ಯಕ್ಷ ಫ್ರೆಡ್ರಿಕ್ ಲೋಬೊ, ಕ್ರೈಸ್ತ ಅಭಿವೃದ್ಧಿ ಸಂಘದ ಪದಾಧಿಕಾರಿಗಳಾದ ವಿಕ್ಟರ್ ಮಾರ್ಟಿಸ್, ವಿನುತಾ ಸೆರಾವೊ, ಪ್ರಶಾಂತಿ ಡಿ’ಸೋಜ ಡಾ.ಲಿಯೋ ಸುದೇಶ್,ವಿಮುಕ್ತಿ ಮಹಿಳಾ ಒಕ್ಕೂಟದ ಪ್ರತಿನಿಧಿಗಳಾದ ಸರೋಜಾ ಮತ್ತಿಕಟ್ಟೆ, ಲಿಲ್ಲಿ ಮೋನಿಸ್,ವಿಮುಕ್ತಿ ಸಂಯೋಜಕಿ ವಿಂದ್ಯಾ ಯೋಗೀಶ್, ಸಿಬ್ಬಂದಿಗಳಾದ ಸ್ವಾತಿಶ್ರೀ, ಸವಿತಾ,ಹಾಗೂ ಸಂಘದ ಸ್ವಯಂಸೇವಕರು ಇದ್ದರು

About Author

Leave a Reply

Your email address will not be published. Required fields are marked *

You may have missed