लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಸೋಷಿಯಲ್ ಮೀಡಿಯಾಗಳಲ್ಲಿ “ಪರಿಸರ… ಪರಿಸರ…” ಎನ್ನುವ ಒಬ್ಬರೂ ಯಾವುದೇ ರಚನಾತ್ಮಕ ಕೆಲಸಗಳಿಗೆ ಕನಿಷ್ಠ ಬೆಂಬಲ ಕೂಡಾ ನೀಡುವುದಿಲ್ಲ. ಹಾಗಂತ……

1 min read

ಪರಿಸರ, ವನ್ಯಜೀವಿ, ಅರಣ್ಯ ಕಾಯ್ದೆ ಕಾನೂನುಗಳನ್ನು ಗಾಳಿಗೆ ತೂರಿ, ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ತಮಗಿಷ್ಟ ಬಂದಂತೆ ಚಟುವಟಿಕೆಗಳನ್ನು ನಡೆಸುತ್ತಿದ್ದ ವ್ಯಕ್ತಿಗಳನ್ನು, ವಾಣಿಜ್ಯಿಕ ಕೇಂದ್ರಗಳನ್ನು “ಕಾಳಿಂಗ ಶೋಷಣೆ ನಿಲ್ಲಿಸಿ” ಅಭಿಯಾನ ನಿರಂತರವಾಗಿ ಪ್ರಶ್ನಿಸಿದೆ. ಇದರಿಂದ ಕಾಳಿಂಗ ಶೋಷಣೆ ನಿಂತು, ಪ್ರಭಾವಿ ವ್ಯಕ್ತಿಯ ಮೇಲೆ 3 ಪ್ರಕರಣ ದಾಖಲಾಗಿ, ಕಂಡಕಂಡವರು ನಾಯಿ ಮರಿ ಹಿಡಿದಂತೆ ಕಾಳಿಂಗ ಸರ್ಪ ಹಿಡಿಯುವುದು ನಿಂತಿದೆ. ಕಾಳಿಂಗ ಪ್ರವಾಸೋದ್ಯಮ, ಕಾಳಿಂಗ ವಾಣಿಜ್ಯಿಕ ಚಟುವಟಿಕೆಗಳು ಬಂದ್ ಆಗಿದೆ. ಇದೆಲ್ಲದರಿಂದ ಅಪಾರ ಮನನೊಂದಿರುವ ಜಗತ್ಪ್ರಸಿದ್ಧ ಕಾಳಿಂಗ ಸಂರಕ್ಷಕರು, ಜನ ಸಾಮಾನ್ಯನಾದ ನನ್ನ ಮೇಲೆ ನಿರಂತರವಾಗಿ ದುರುದ್ದೇಶಪೂರಿತವಾದ ಸರಣಿ ಪೊಲೀಸ್ ದೂರುಗಳನ್ನು ಕೊಡುತ್ತಿದ್ದಾರೆ.

ಸದರಿ TED Speaker ಅವರು ಈ ಹಿಂದೆ ಆಗುಂಬೆ ಪೊಲೀಸ್ ಠಾಣೆಯಲ್ಲಿ “Complaint against the Mr. Nagaraj Koove for posting Defamatory statements on Facebook, Criminal Intimidation and Extortion” ಎಂದು ನವೆಂಬರ್ ನಲ್ಲಿ ದೂರು ನೀಡಿದ್ದರು. ನಾನು ಡಿಸೆಂಬರ್ ನಲ್ಲಿ ಆಗುಂಬೆ ಪೊಲೀಸ್ ಠಾಣೆಗೆ ಹಾಜರಾಗಿ ವಿವರವಾದ ಹೇಳಿಕೆ ನೀಡಿ, ದಾಖಲೆಗಳನ್ನು ಕೊಟ್ಟು ಬಂದಿದ್ದೆ. ನನ್ನ ಮೇಲೆ ದೂರು ಕೊಟ್ಟಿರುವ ಖ್ಯಾತ Wildlife Biologistರವವರಿಗೆ “ನೀವು ನೀಡಿರುವ ದೂರು ಮಾನನಷ್ಟಕ್ಕೆ ಸಂಬಂಧಿಸಿದ್ದಾಗಿದ್ದು, ಕಲಂ 356 ಬಿಎನ್ ಎಸ್ 2023 ರೀತ್ಯಾ ಮಾನ್ಯ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿ ಪರಿಹಾರ ಕಂಡುಕೊಳ್ಳಬಹುದಾಗಿರುತ್ತದೆ” ಎಂದು ಬುದ್ಧಿ ಹೇಳಿ, ಆಗುಂಬೆ ಠಾಣೆಯವರು ಅರ್ಜಿಯನ್ನು ಮುಕ್ತಾಯ ಮಾಡಿ ಹಿಂಬರಹ ನೀಡಿದ್ದರು.

ಆದರೂ ಸರಣಿ ಕಾನೂನು ಉಲ್ಲಂಘಕರಾದ ಗೌರವಾನ್ವಿತರು ಪದೇ ಪದೇ ಪೊಲೀಸ್ ಇಲಾಖೆಯ ಬೇರೆ ಬೇರೆ ಕಛೇರಿಗಳಲ್ಲಿ ನನ್ನ ಮೇಲೆ ದೂರು ಕೊಟ್ಟುಕೊಂಡು ನಿರಂತರವಾಗಿ ಸಾಕ್ಷಿದಾರರನ್ನು ಬೆದರಿಸುತ್ತಿದ್ದಾರೆ. ಆ ಮೂಲಕ ಪ್ರತಿಭಟನೆಯ ಧ್ವನಿ ಅಡಗಿಸುವ, ತಮ್ಮ ಮೇಲಿನ ಪ್ರಕರಣಗಳನ್ನು ದುರ್ಬಲಗೊಳಿಸುವ ಪ್ರಯತ್ನ ನಡೆಸುತ್ತಿದ್ದಾರೆ.

ಸದರಿ ಗೌರವಾನ್ವಿತ TED Fellow ಅವರು, ಹೀಗೆ ಪದೇ ಪದೇ ದೂರು ಕೊಟ್ಟು ಪೊಲೀಸ್ ಇಲಾಖೆಯ ಸಮಯ, ಸಂಪನ್ಮೂಲ, ಮಾನವ ಶ್ರಮ ಹಾಳು ಮಾಡುತ್ತಿದ್ದಾರೆ ಅಷ್ಟೇ. Conservationistsರವರ ಇಂತಹ ಅನಗತ್ಯ ದೂರುಗಳಿಂದ ಪೊಲೀಸ್ ಇಲಾಖೆಯ ಪೆನ್ನು, ಪೇಪರ್ ವ್ಯರ್ಥವಾಗುತ್ತಿದೆ ಅಷ್ಟೇ.

ಖ್ಯಾತ Herpetologist ಅವರ ಮತ್ತೊಂದು ದೂರಿನ ಆಧಾರದ ಮೇಲೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕು ಬಾಳೂರು ಪೊಲೀಸ್ ಠಾಣೆಗೆ ಹೋಗಿ ನಾನು ವಿವರವಾದ ಹೇಳಿಕೆ ಕೊಟ್ಟು, ಸುಮಾರು 515 ಪುಟದ ದಾಖಲೆಗಳನ್ನು ಕೊಟ್ಟು ಬಂದೆ.

ಇಂತಹ ಸಾವಿರ ದೂರುಗಳನ್ನು ಕೊಟ್ಟರೂ ಹೆದರುವುದಿಲ್ಲ, ಬೆದರುವುದೂ ಇಲ್ಲ. ಹಣಬಲ, ತೋಳ್ಬಲ, ಪ್ರಭಾವ, ವರ್ಚಸ್ಸಿನಿಂದ ನಮ್ಮ ಧ್ವನಿ ಅಡಗಿಸಲು ಸಾಧ್ಯವಿಲ್ಲ. ಪರಿಸರವಾದಿಗಳನ್ನು ಕೊಳ್ಳಬಹುದು. ಪರಿಸರಾಸಕ್ತರನ್ನು ಕೊಳ್ಳಲು ಆಗುವುದಿಲ್ಲ.

ವನ್ಯಜೀವಿಯೊಂದರ ಶೋಷಣೆ, ವಾಣಿಜ್ಯೀಕರಣದ ಬಗೆಗೆ ಪ್ರಶ್ನೆಗಳನ್ನು ಕೇಳಿದರೆ, ತಮ್ಮ ಕೆಲಸಗಳಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಇಲ್ಲದ ವ್ಯಕ್ತಿಗಳು ಧ್ವನಿ ಅಡಗಿಸಲು ನೇರ ವ್ಯಯಕ್ತಿಕ ದಾಳಿಗೆ ಇಳಿಯುತ್ತಾರೆ. ಪ್ರಶ್ನೆಗಳನ್ನು ಕೇಳುವುದೇ ಅಪಾಯಕಾರಿ ಎಂಬ ಹಂತಕ್ಕೆ ನಾವು ತಲುಪಿದ್ದೇವೆ.

ನಮ್ಮಂತವರು ತೀರಾ ಕನಿಷ್ಠ ಸಂಪನ್ಮೂಲಗಳೊಂದಿಗೆ, ತಳಮಟ್ಟದಲ್ಲಿ ನಡೆಸುತ್ತಿರುವ ಪರಿಸರ ಸಂರಕ್ಷಣಾ ಪ್ರಯತ್ನಗಳಿಗೆ ಪ್ರೋತ್ಸಾಹದ ಕಥೆ ಹಾಳಾಗಿ ಹೋಗಲಿ, ವಿವಿಧ ಸ್ವರೂಪದ ವಿಘ್ನಗಳು, ಕಿರುಕುಳಗಳೇ ಜಾಸ್ತಿ. ಸೋಷಿಯಲ್ ಮೀಡಿಯಾಗಳಲ್ಲಿ “ಪರಿಸರ… ಪರಿಸರ…” ಎನ್ನುವ ಒಬ್ಬರೂ ಯಾವುದೇ ರಚನಾತ್ಮಕ ಕೆಲಸಗಳಿಗೆ ಕನಿಷ್ಠ ಬೆಂಬಲ ಕೂಡಾ ನೀಡುವುದಿಲ್ಲ. ಹಾಗಂತ ನಾವೇನು ಸುಮ್ಮನಾಗುವುದಿಲ್ಲ. ನಮ್ಮ ಪ್ರಯತ್ನಗಳು ನಿರಂತರವಾಗಿ ಜಾರಿಯಲ್ಲಿರುತ್ತವೆ.

ಚಿತ್ರ: ಹೇಳಿಕೆ ಕೊಡಲು ಹೋದಾಗ ತೆಗೆದ ಬಾಳೂರು ಪೊಲೀಸ್ ಠಾಣೆ ಮುಂಭಾಗದ ಫೋಟೋ.

.ಕೃಪೆ..

ನಾಗರಾಜು.ಕೂವೆ.

About Author

Leave a Reply

Your email address will not be published. Required fields are marked *

You may have missed