ಕಾಡಂಚಿನ ಸಾಮಾನ್ಯರಲ್ಲಿ ಸಾಮಾನ್ಯ ಸಿದ್ದಿ, ಈಗ ರಾಜ್ಯದ ಗೌರವಯುತ ವಿಧಾನ ಪರಿಷತ್ ಸಭಾಪತಿ ಸ್ಥಾನದಲ್ಲಿ….
1 min read
ಕಾಡಂಚಿನ ಸಾಮಾನ್ಯರಲ್ಲಿ ಸಾಮಾನ್ಯ ಸಿದ್ದಿ, ಈಗ ರಾಜ್ಯದ ಗೌರವಯುತ ವಿಧಾನ ಪರಿಷತ್ ಸಭಾಪತಿ ಸ್ಥಾನದಲ್ಲಿ.
ಬಾಬಾ ಸಾಹೇಬರ ಸಂವಿಧಾನದ ಮೂಲ ಆಶಯವೂ ಇದೇ ಆಗಿತ್ತು.
ದೇಶದ ಕಟ್ಟ ಕಡೆಯ ವ್ಯಕ್ತಿಯೊಬ್ಬ ಉನ್ನತ ಸ್ಥಾನಕ್ಕೇರುವುದೇ ಪ್ರಜಾಪ್ರಭುತ್ವದ ಸೌಂದರ್ಯ.
ತಾವಾದಮೇಲೆ ತಮ್ಮ ಕುಟುಂಬದವರು ಸರತಿ ಸಾಲಿನಲ್ಲಿ ನಿಂತಿರುವ ಈ ಸಮಾಜದಲ್ಲಿ. ರಾಜಕರಣವೇ ಕೊಳಕಾಗಿದೆ ಎನ್ನುವ ಮಾತಿದೆ.
ಸಿದ್ದಿಯಂತಹ ಅನೇಕ ಮಂದಿ ಕೆಸರಿನಲ್ಲಿ ಹುದುಗಿಹೋಗಿದ್ದಾರೆ, ಅವರು ಕೆಸರಿನಿಂದ ಪುಟಿದೇಳುವ ಕಮಲದಂತಾಗಲು ಬಿಜೆಪಿಯೇ ಮುನ್ನೆಲೆಗೆ ಬರಬೇಕಾಯಿತು.
ಸಂಪೂರ್ಣ ಅಲ್ಲದಿದ್ದರೂ, ಅನೇಕ ಇಂತಹ ಉದಾಹರಣೆಗಳನ್ನು ನೋಡುತ್ತಿರುವುದು ನಮ್ಮಂತ ಬಿಜೆಪಿ ಪಕ್ಷದ ಕಾರ್ಯಕರ್ತರಿಗೆ ಸೌಭಾಗ್ಯವೇ ಸರಿ.
ಅಟಲ್ ಜಿ ಯವರ ಕಮಲ್ ಕೇಲೆಗ ಎನ್ನುವ ಪದ ಈ ಮೂಲಕ ಮುನ್ನೆಲೆಗೆ ಬರುತ್ತಿದೆ ಎಂದರೆ ತಪ್ಪಾಗಲಾರದು.
ಒಬ್ಬ ಕಾಡಂಚಿನ ಜೋಪಡಿಯಲ್ಲಿ ವಾಸಿಸುತ್ತಿದ್ದ. ತನ್ನವರನ್ನು ರಕ್ಷಿಸುವ ಸೂರಿಗಾಗಿ, ಬಾಯರಿಕೆ ತೀರಿಸುವ ನೀರಿಗಾಗಿ ಹೋರಾಟ ಮಾಡಿದ ವ್ಯಕ್ತಿಯ ಮುಖದಲ್ಲಿ ಕಮಲ ಅರಳಿದೆ. ಇದಕ್ಕಾಗಿ ನನ್ನ ಪಕ್ಷದ ಬಗ್ಗೆ ನನಗೆ ಹೆಮ್ಮೆಯಿದೆ.
ಶಶಿ ಸನಾತನ

