लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಅವಿನ್ ಟಿವಿ ಸುದ್ದಿಜಾಲ ✍️: ಮೊದಲ ನೋಟದ ಪ್ರೇಮ ಘಟಿಸುವ ಪರಿಯಿದು.

ನೀವು ಪ್ರೇಮದೊಂದಿಗೆ ಬೀಳುತ್ತಿರುವುದು ಒಬ್ಬ ವ್ಯಕ್ತಿಯೊಂದಿಗೆ ಅಲ್ಲ ಬದಲಾಗಿ ನಿಮ್ಮದೇ ಆದ ಒಂದು ಇತಿಹಾಸದೊಂದಿಗೆ…

Love at first sight ಎನ್ನುವುದು ನಿಜದ ಸಂಗತಿ. ಇದು ನಾವು ಗಮನಿಸಬಹುದಾದ ಮಾನಸಿಕ ವಿದ್ಯಮಾನ. ಆದರೆ ಫಿಲಾಸೊಫರ್ ಮತ್ತು cognitive scientist Berit Brogaard ಪ್ರಕಾರ, ಇದು ನಮ್ಮ ಸಿನೆಮಾಗಳಲ್ಲಿ ತೋರಿಸುವ ಹಾಗೆ ಬಹಳ ರೋಮ್ಯಾಂಟಿಕ್ ಆದ ಸಂಗತಿಯೇನಲ್ಲ. Brogaard ಹಲವು ವರ್ಷಗಳ ಕಾಲ ಈ ರೋಮ್ಯಾಂಟಿಕ್ ಆಕರ್ಷಣೆಯ ಸಮಯದಲ್ಲಿ ಜನರ ಮೆದುಳಿನಲ್ಲಿ ನಡೆಯುವ ಸಂಗತಿಗಳನ್ನು ಅಧ್ಯಯನ ಮಾಡಿ ಒಂದು ತೀರ್ಮಾನಕ್ಕೆ ಬರುತ್ತಾರೆ.

ಈ Love at first sight ಸಮಯದಲ್ಲಿ ಜನ ಅನುಭವಿಸುವ ಆಯಸ್ಕಾಂತೀಯ ಆಕರ್ಷಣೆ ಒಂದು ಬಗೆಯ pattern recognition ( ಮಾದರಿ ಗುರುತಿಸುವಿಕೆ).

ನಿಮ್ಮ ಮೆದುಳು ಒಂದು ಚೆಹರೆಯನ್ನು ನೋಡಿ, ಅದರ ದನಿಯನ್ನು ಕೇಳಿ, ಅಥವಾ ಅವರು ಹೇಗೆ ವರ್ತಿಸುತ್ತಾರೆ ಎನ್ನುವುದನ್ನು ಗಮನಿಸಿ ಅದನ್ನು ಮಾದರಿ ಟೆಂಪ್ಲೇಟ್ ಜೊತೆ ಹೋಲಿಸಿ ನೋಡುತ್ತದೆ.

ಈ ಟೆಂಪ್ಲೇಟ್ ನ ಮೆದುಳು ನಿಮಗೆ ಮ್ಯಾಟರ್ ಆದ ಪ್ರತಿಯೊಬ್ಬರನ್ನು ನೋಡಿ ಸಿದ್ಧಪಡಿಸಿಕೊಂಡಿದೆ,ನಿಮ್ಮ ತಂದೆ ತಾಯಿ, ನಿಮ್ಮ ಮೊದಲ ಪ್ರೇಮ, ನಿಮ್ಮ ಹತ್ತಿರದ ಗೆಳೆಯರು, ನಿಮ್ಮ ಮೇಲೆ ಬಹುವಾಗಿ ನಂಬಿಕೆಯಿಟ್ಟಿದ್ದ ಟೀಚರ್, ನಿಮ್ಮ ಹೃದಯವನ್ನು ಒಡೆದವರು ಇತ್ಯಾದಿಯಾಗಿ.

ಈ ಎಲ್ಲ ಜನ, ನಿಮ್ಮೊಳಗೆ ಬಿಟ್ಟುಹೋಗಿರುವ ತಮ್ಮ ಅಂಶಗಳನ್ನ ಒಟ್ಟುಗೂಡಿಸಿ ನಿಮ್ಮ ಮೆದುಳು, ನಿಮ್ಮ ಲವ್ ಹೇಗಿರಬೇಕೆಂದು ಒಂದು ಅಪ್ರಜ್ಞಾಪೂರ್ವಕ ಮಾದರಿಯನ್ನು ಸಿದ್ಧಪಡಿಸುತ್ತದೆ. ಮತ್ತು ನೀವು Love at first sight ಸನ್ನಿವೇಶಕ್ಕೆ ಎದುರಾದಾಗ ನೀವು ಪ್ರೇಮದಲ್ಲಿ ಬೀಳುವುದು ಆ ವ್ಯಕ್ತಿಯೊಂದಿಗೆ ಅಲ್ಲ ಬದಲಾಗಿ ಆ ಸಿದ್ಧಮಾದರಿಯೊಂದಿಗೆ,
ಆದರೆ ಅಪರಿಚಿತ ವ್ಯಕ್ತಿಗೂ ತನ್ನದೇ ಆದ ಮಾದರಿಗಳಿವೆ, ತನ್ನದೇ ಆದ ಇತಿಹಾಸವಿದೆ.

ಆದ್ದರಿಂದಲೇ ಫಸ್ಟ್ ಲವ್ ಅಷ್ಟು ತೀವ್ರವಾಗಿರುವುದು (intense) ಅಷ್ಟು ನಾಜೂಕಾಗಿರುವುದು (fragile). ಏಕೆಂದರೆ ನೀವು ಪ್ರೇಮದಲ್ಲಿ ಬೀಳುತ್ತಿರುವುದು ಒಬ್ಬ ವ್ಯಕ್ತಿಯೊಂದಿಗಲ್ಲ, ಬದಲಾಗಿ ನಿಮ್ಮದೇ ಆದ ಇತಿಹಾಸದೊಂದಿಗೆ. ಆದ್ದರಿಂದ ಮೊದಲ ಆಕರ್ಷಣೆ ಮುಗಿದು ನಿಜದ ಪ್ರೇಮ ಶುರುವಾಗೋದು, ನಿಮ್ಮ ಮೈಂಡ್ ನಲ್ಲಿದ್ದ ಸಿದ್ಧ ಮಾದರಿ ಮಸುಕಾಗಿ ಆ ವ್ಯಕ್ತಿ ಸ್ಪಷ್ಟವಾಗಿ ಕಾಣಿಸಲು ಶುರುವಾದಾಗ. ಆಗ ಅವರು ನಿಮಗೆ ಪರಿಚಿತರಲ್ಲ, ಅವರು ನಿಮಗೆ ಅಪರಿಚಿತರು. ಆಗ ಮಾತ್ರ ನೀವು ಅವರನ್ನು ಪ್ರೇಮಿಸಲು ಆಯ್ಕೆ ಮಾಡಿಕೊಳ್ಳಬಹುದು. ಒಬ್ಬ ವ್ಯಕ್ತಿಯನ್ನು ಅವರು ಇರುವ ಹಾಗೆ ಪ್ರೇಮಿಸಲು ಆಯ್ಕೆ ಮಾಡಿಕೊಳ್ಳುವುದು ಮಾತ್ರ ನಿಜವಾದ ಪ್ರೇಮ.

ಸಂಗ್ರಹಾನುವಾದ : ಚಿದಂಬರ ನರೇಂದ್ರ ಅವರ ಅರಳಿ ಮರದಿಂದ……

ಕೃಪೆ: ದೀಪಾ ಹಿರೇಗುತ್ತಿ
••••••••••••••
ಡಿ ಎಂ ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ ….. ✍️
ಚಿಕ್ಕಮಗಳೂರು

About Author

Leave a Reply

Your email address will not be published. Required fields are marked *

You may have missed