ಇಂದು ಇಡೀ ಜಗತ್ತನ್ನು ಕಾಡುತ್ತಿರುವ ಯುದ್ದೋನ್ಮಾದದ ವ್ಯಾದಿ ಕೊನೆಗೊಳ್ಳುವುದಾದರೂ ಹೇಗೆ ?..
1 min read
ಅವಿನ್ ಟಿವಿ ಸುದ್ದಿಜಾಲ ✍️: ಇಂದು ಇಡೀ ಜಗತ್ತನ್ನು ಕಾಡುತ್ತಿರುವ ಯುದ್ದೋನ್ಮಾದದ ವ್ಯಾದಿ ಕೊನೆಗೊಳ್ಳುವುದಾದರೂ ಹೇಗೆ ?


ಚಿಕ್ಕಮಗಳೂರು ಮಾ ೨೨: ಯಾವುದೇ ದೇಶ ಯುದ್ಧ ಪ್ರಾರಂಭ ಮಾಡುವುದು ಬಹಳ ಸುಲಭ ಆದರೆ ಅದನ್ನು ನಿಲ್ಲಿಸುವುದು ಅಷ್ಟು ಸುಲಭವಲ್ಲ ಎಂಬ ಒಂದು ಪ್ರಾಥಮಿಕ ಜ್ಞಾನ ನಮ್ಮೆಲ್ಲರ ಅರಿವಿಗೆ ಬರಬೇಕಾಗಿದೆ.
ದ್ವೇಷದಿಂದ ದೇಶ ಕಟ್ಟಲು ಸಾಧ್ಯವಿಲ್ಲ, ಬಂದೂಕಿನ ತುದಿಗೆ ಅಣು ಬಾಂಬುಗಳ ತಲೆಯ ಮೇಲೆ ಕೆಂಪು ಗುಲಾಬಿ ಹೂವು ಪ್ರೀತಿ ಕಾರುಣ್ಯದಿಂದ ನೆಲೆಗೊಂಡಾಗ ಮಾತ್ರ ಮನುಷ್ಯ ಜನಾಂಗದ ಉತ್ಕೃಷ್ಟತೆ ಸಾಧ್ಯವಾಗುತ್ತದೆ.
ಒಮ್ಮೆ ಇತಿಹಾಸದ ಭೂಪಟವನ್ನು ತೆರೆದು ನೋಡಿದರೆ ಗೊತ್ತಾಗುತ್ತದೆ, ರಾಜಾಧಿರಾಜರು ಮಾತ್ರವಲ್ಲ ಚಕ್ರಾಧಿಪತಿಗಳು ಕೊಡ ಅವರು ಕಟ್ಟಿ ಮೆರೆದು ಆಳಿದ ಕೋಟೆ ಕೊತ್ತಲುಗಳು ಅರಮನೆಗಳು ಮಣ್ಣಲ್ಲಿ ಮಣ್ಣಾಗಿ ಹೋಗಿವೆ, ಇದು ಇತಿಹಾಸದ ಪಾಠ.
ಇಂತಹ ಸಂದರ್ಭದಲ್ಲಿ ಯುದ್ಧದ ವಾಸ್ತವ ಸ್ಥಿತಿಯನ್ನು ಅರಿಯದೆ ಬೇರೆ ಬೇರೆ ಕಾರಣಕ್ಕಾಗಿ ಭಾವುಕರಾಗಿ ಒಂದು ದೇಶದ ಪರ ಇನ್ನೊಂದು ದೇಶದ ವಿರುದ್ಧ ನಮ್ಮ ಗಂಟಲನ್ನು ಅರಚಿಕೊಳ್ಳುವುದಕ್ಕಿಂತ ಆ ಗಂಟಲನ್ನು ಮೆದುಮಾಡಿಕೊಂಡು ನಿಜವಾದ ವಾಸ್ತವ ಸ್ಥಿತಿ ಮತ್ತು ಯುದ್ಧದ ದುಷ್ಪರಿಣಾಮಗಳನ್ನುಇಡೀ ಜಗತ್ತಿನ ಜನರು ಅರಿಯುವುದು ಈ ಹೊತ್ತಿನ ತುರ್ತು.
ಈ ಕುರಿತು ಬರಹಗಾರ ಚಿಂತಕ ಶೃಂಗೇಶ್ ವೈ ವಿ ಎನ್ನುವವರ ಬರಹವೊಂದನ್ನು ಅವಿನ್ ಟಿವಿ ಸುದ್ದಿಜಾಲ ತನ್ನ ಓದುಗರಿಗಾಗಿ ಯಥಾವತ್ತಾಗಿ ಕೊಡ ಮಾಡುತ್ತಿದೆ.
•••••••••••••👇
ಪ್ರಸಕ್ತ ಯುದ್ದದಿಂದ ಇರಾನ್ ಸಂಪೂರ್ಣವಾಗಿ ನಾಶಗೊಳ್ಳುತ್ತದೆ, ಇನ್ಯಾವುತ್ತೂ ಎದ್ದು ನಿಲ್ಲಲ್ಲ, ಇರಾನ್ ಮುಗಿದು ಹೋಯಿತು ಎನ್ನುವವರ ಗಮನಕ್ಕೆ:
ಇರಾನ್ ಬಳಿ ವಿಶ್ವದಲ್ಲೇ ಮೂರನೆಯ ಅತೀ ದೊಡ್ಡ ತೈಲ ನಿಕ್ಷೇಪಗಳಿವೆ, ವೆನೇಜುವೇಲಾ ಹಾಗೂ ಸೌದಿ ಅರೇಬಿಯಾವನ್ನು ಹೊರತುಪಡಿಸಿ. ಸುಮಾರು ನೂರು ತೈಲ Oilfields ಗಳಿವೆ. ಸದ್ಯ ಇರಾನಿನ proven oil reserves 200 ಬಿಲಿಯನ್ ಬ್ಯಾರಲ್ಸ್. ಸದ್ಯದ ಲೆಕ್ಕಾಚಾರ ಪ್ರಕಾರ ಹಾಗೂ ಜಗತ್ತಿನ ಕಚ್ಚಾ ತೈಲ ಬೇಡಿಕೆಯ ಪ್ರಕಾರ ಈ ಇರಾನ್ನಲ್ಲಿ ಮುಂದೆ ಯಾವುದೇ ಹೊಸ ತೈಲ ನಿಕ್ಷೇಪ ಕಂಡುಹಿಡಿಯದಿದ್ದರೂ, ಸದ್ಯದ reserves 125-140 ವರುಷಗಳಿಗೆ ಸಾಕಂತೆ.
ಇನ್ನು ಇರಾನ್ ಬಳಿ ವಿಶ್ವದಲ್ಲೇ ಎರಡನೆಯ ಅತೀ ದೊಡ್ಡ proven gas reserves ಇದೆ, ರಷ್ಯಾವನ್ನು ಹೊರತುಪಡಿಸಿ. ಇರಾನಿನ ಸದ್ಯದ ನೈಸರ್ಗಿಕ ಅನಿಲ ಸಂಗ್ರಹ 34 trillion ಕ್ಯೂಬಿಕ್ ಮೀಟರ್ಸ್. ಸದ್ಯವಿರುವ ಅನಿಲ ಸಂಗ್ರಹವನ್ನು ಹೊರತುಪಡಿಸಿ, ಮುಂದೆ ಹೊಸ ಅನಿಲ ಸಂಗ್ರಹವನ್ನು ಅನ್ವೇಷಿಸದಿದ್ದರೂ, ಈಗಿರುವ proven gas reserves ಮುಂದಿನ ಕನಿಷ್ಟ 150-200 ವರುಷಗಳಿಗೆ ಸಾಕಂತೆ.
ಇರಾನ್ನ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು ಇರಾನ್ ಬಡ ರಾಷ್ಟ್ರ ಅನ್ನುವ ಕಾರಣಕ್ಕಲ್ಲ ಬದಲಾಗಿ ಇರಾನಿನ ತೈಲ ಹಾಗೂ ಗ್ಯಾಸ್ ಮೇಲೆ ನಿಯಂತ್ರಣ ಪಡೆಯಲು ಸಾಧ್ಯವಾಗದ ಕಾರಣ ಅಮೇರಿಕಾ ಹೇರಿರುವ ನಿರ್ಭಂಧಗಳ ಕಾರಣ. ಅದರ ಹೊರತಾಗಿಯೂ ಇರಾನ್ ಇವತ್ತು ಬಲಾಢ್ಯ ಮಿಲಿಟರಿ ಶಕ್ತಿಯಾಗಿ ಎದ್ದುನಿಂತಿದೆ.
ಇರಾನ್ ಬೀಳಲಿದೆ, ಎಕ್ಕುಟ್ಟಿ ಹೋಗಲಿದೆ, ಭೂಪಟದಿಂದಲೇ ಮಾಯವಾಗಲಿದೆ ಅನ್ನುವವರು ಸದ್ಯ ಇರಾನ್ ಚಿಂತೆ ಬಿಟ್ಟು ಭಾರತದ ಚಿಂತೆ ಮಾಡಿದರೆ ಉತ್ತಮ. ಸದ್ಯದ ಯುದ್ದ ಮುಂದುವರೆದರೆ, ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋದರೆ ದೊಡ್ಡ ಹೊಡೆತ ಬೀಳುವುದು ಭಾರತಕ್ಕೆ. ಭಾರತ ತನ್ನ ಒಟ್ಟು ಬಳಕೆಯ ಸುಮಾರು 45% ಇಂಧನಕ್ಕೆ ಮಧ್ಯಪ್ರಾಚ್ಯವನ್ನು ಅವಲಂಬಿಸಿದೆ. ಎರಡು ವಾರಗಳ ಯುದ್ದದಲ್ಲೇ ಭಾರತದಲ್ಲಿ ಎಲ್ಪಿಜಿಗಾಗಿ ಹಾಹಾಕಾರ ಎದ್ದಿದೆ. ಹೊಟೇಲುಗಳು ಮುಚ್ಚಿವೆ, ತಿಂಡಿ-ತಿನಿಸುಗಳ ಬೆಲೆ ಹೆಚ್ಚಿದೆ, ಗ್ಯಾಸ್ ಸಿಲಿಂಡರ್ ಬೆಲೆಯೂ ಹೆಚ್ಚಾಗಿದೆ. ಜಸ್ಟ್ ಇಮ್ಯಾಜಿನ್ ಈ ಯುದ್ದ ವಿಕೋಪಕ್ಕೆ ಹೋದರೆ ಏನಾಗಬಹುದೆಂದು.
ಇನ್ನು ಈ ಮಧ್ಯಪ್ರಾಚ್ಯದಲ್ಲಿ ಸುಮಾರು 90-95 ಲಕ್ಷ ಭಾರತೀಯರು ಉದ್ಯೋಗ-ಜೀವನ ಕಂಡುಕೊಂಡಿದ್ದಾರೆ. ಭಾರತದ ಸುಮಾರು 40% ವಿದೇಶಿ ವಿನಿಮಯ ಬರುವುದು ಇದೇ ಮಧ್ಯಪ್ರಾಚ್ಯದಲ್ಲಿರುವ ಭಾರತೀಯರ ದುಡ್ಡಿನಿಂದ. ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಬಿಗಡಾಯಿಸಿದರೆ ಇದಕ್ಕೂ ಕುತ್ತು ಬರಲಿದೆ. ಇನ್ನು ಗಲ್ಪ್ ದೇಶಗಳು ಹಾಗೂ ಮಧ್ಯಪ್ರಾಚ್ಯದಲ್ಲಿ ಭಾರತದ ವಾಣಿಜ್ಯ ವ್ಯವಹಾರಗಳೂ ಅತೀ ಹೆಚ್ಚಾದ ಪ್ರಮಾಣದಲ್ಲಿವೆ. ಭಾರತದ ಒಟ್ಟು ರಫ್ತಿನ 17% ಕೇವಲ ಗಲ್ಫ್ ಹಾಗೂ ಮಧ್ಯಪ್ರಾಚ್ಯದಲ್ಲೇ ನಡೆಯುತ್ತದೆ. ಭಾರತದ ಒಟ್ಟು 1.5 ಕೋಟಿ NRI ಗಳಲ್ಲಿ ಗಲ್ಫ್ ಹಾಗೂ ಮಧ್ಯಪ್ರಾಚ್ಯದಲ್ಲೇ ಸುಮಾರು ಒಂದು ಕೋಟಿ NRI ಗಳಿದ್ದಾರೆ.
ಇವತ್ತು ನಾವು ಸ್ಟ್ಯಾಂಡ್ ಹಾಕಿ ನಿಂತಿರುವ ಇಸ್ರೇಲ್ ಆಗಲಿ, ಅಮೇರಿಕಾ ಆಗಲಿ ಸದ್ಯದ ಯುದ್ದದಿಂದ ಭಾರತಕ್ಕೆ ಇಂಧನ ಹಾಗೂ ವಿದೇಶಿ ವಿನಿಮಯದಲ್ಲಾಗುವ ನಷ್ಟವನ್ನು ಭರಿಸಿಕೊಡುವುದಿಲ್ಲ. ಇಲ್ಲಿರುವ ಒಂದು ಕೋಟಿ NRI ಗಳಲ್ಲಿ 25% ಮಂದಿ ವಾಪಾಸ್ ಹೋಗಬೇಕಾಗಿ ಬಂದರೂ, ಅದರ ನಷ್ಟ ಇಲ್ಲ ಅವರೆಲ್ಲರಿಗೂ ನೌಕರಿಯನ್ನು ಇಸ್ರೇಲ್-ಅಮೇರಿಕಾ ಕಲ್ಪಿಸಿಕೊಡಲ್ಲ.
ಹಾಗಾಗಿ ಯುದ್ದದಿಂದ ಇರಾನ್ ಎಕ್ಕುಟ್ಟೋಗಲಿದೆ, ನಾಶವಾಗಲಿದೆ ಎನ್ನುವ ಅಮೇಧ್ಯ ಚಾಂಪಿಯನ್ಗಳು ಸದ್ಯ ಇರಾನ್ ಚಿಂತೆ ಬಿಟ್ಟು ಭಾರತದ ಚಿಂತೆ ಮಾಡಿದರೆ ಮನೆಯಲ್ಲಿನ ಸ್ಟವ್ ಮುಂದೆಯೂ ಉರಿಯಬಹುದು. ಇಲ್ಲಾಂದರೆ ಸೌದೆ ತರಲೂ ಸೌದಿ ದುಡ್ಡು ಇಲ್ಲದ ಹಾಗೆ ಆಗಬಹುದು.
•••••••••••••••••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ …… ✍️
ಚಿಕ್ಕಮಗಳೂರು

