लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ನಿನ್ನೆಯ ಈ ಇಳಿ ಸಂಜೆ ಹೊತ್ತಿನ ಆ ದೊರದ ಬಾನಂಗಳದಲ್ಲಿ ಮೂಡಿದನು ಉಗಾದಿಯ ಚಂದಮಾಮ….

1 min read

ಅವಿನ್ ಟಿವಿ ಸುದ್ದಿಜಾಲ ✍️: ನಿನ್ನೆಯ ಈ ಇಳಿ ಸಂಜೆ ಹೊತ್ತಿನ ಆ ದೊರದ ಬಾನಂಗಳದಲ್ಲಿ ಮೂಡಿದನು ಉಗಾದಿಯ ಚಂದಮಾಮ.

ಮಂಗಳನನ್ನು ಅಣ್ಣ ಎಂದು, ಸೂರ್ಯನನ್ನು ತಂದೆ ಎಂದು, ಚಂದ್ರನನ್ನು ಮಾಮ ಎಂದು ಕರೆಯುತ್ತಾರೆ ನಮ್ಮ ಹಳ್ಳಿಗರು, ಯಾಕೆ ಗೊತ್ತಾ?

ಮಾಮ ಎಂದರೆ ಅಮ್ಮನ ತಮ್ಮ ಎಂದು ಅರ್ಥ.

ಈ ಕಾಲಘಟ್ಟದ ಎಷ್ಟು ಮಕ್ಕಳಿಗೆ ಸಮೃದ್ಧವಾದ ಬಾಲ್ಯ ಸಿಕ್ಕಿದೆಯೋ ಇಲ್ಲವೋ ಗೊತ್ತಿಲ್ಲ.

ಆದರೆ,ಅಂದು ನಾವು ಎಳೆಯವರಿದ್ದಾಗ ಅನ್ನಕ್ಕೆ ಉಪ್ಪು ತುಪ್ಪ ಹಾಕಿ ಕಲಸಿ ಚಂದಮಾಮನ ಕಡೆ ಬೆರಳು ಮಾಡಿ ತೋರಿಸಿ ಮುತ್ತಿಟ್ಟು ತುತ್ತು ಕೊಡುತ್ತಿದ್ದ ಅಮ್ಮನ ಪ್ರೀತಿಗೆ ಅಮ್ಮನೇ ಸಾಟಿಯಾಗಿದ್ದಳು.

ಹಾಗಾಗಿ ಆ ಚಂದ ನಮ್ಮ ಅಮ್ಮನ ತಮ್ಮ ಆದ ಕಾರಣ ಅವನನ್ನು ಚಂದಮಾಮ ಎಂದು ಇಂದಿಗೂ ಕರೆಯುತ್ತೇವೆ.

ಇಂದು ಯುಗಾದಿಯ ಆ ಚಂದಮಾಮನ ದರ್ಶನ ಮಾಡಿ, ಬೇವು ಬೆಲ್ಲ ಪರಸ್ಪರ ವಿನಿಮಯ ಮಾಡಿ, ಕಿರಿಯರೆಲ್ಲ ಹಿರಿಯರಿಗೆ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುವ ಸಂಸ್ಕೃತಿ ಸಂಪ್ರದಾಯ ಇಂದಿಗೂ ನಮ್ಮ ಹಳ್ಳಿಯಲ್ಲಿ ಜಾರಿಯಲ್ಲಿದೆ.
•••••••••••••
ಡಿ ಎಂ ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ ….. ✒️
ಚಿಕ್ಕಮಗಳೂರು

About Author

Leave a Reply

Your email address will not be published. Required fields are marked *

You may have missed