ಕೊಟ್ಟಿಗೆಹಾರ:ಪ್ರೌಢಶಾಲೆಯಲ್ಲಿ ಗ್ಯಾಸ್ ಇಲ್ಲದೇ ಬಿಸಿಯೂಟಕ್ಕೆ ತೊಂದರೆ:ಗ್ಯಾಸ್ ಏಜೆನ್ಸಿ ನಿರ್ಲಕ್ಷ್ಯ.
1 min read
ಕೊಟ್ಟಿಗೆಹಾರ:ಪ್ರೌಢಶಾಲೆಯಲ್ಲಿ ಗ್ಯಾಸ್ ಇಲ್ಲದೇ ಬಿಸಿಯೂಟಕ್ಕೆ ತೊಂದರೆ:ಗ್ಯಾಸ್ ಏಜೆನ್ಸಿ ನಿರ್ಲಕ್ಷ್ಯ. ಮೂಡಿಗೆರೆ: ತಾಲ್ಲೂಕಿನ ಕೊಟ್ಟಿಗೆಹಾರ ಸರ್ಕಾರಿ ಪ್ರೌಢಶಾಲೆಯಲ್ಲಿ ಗ್ಯಾಸ್ ಸರಬರಾಜು ಇಲ್ಲದೇ ಮಕ್ಕಳಿಗೆ ಬಿಸಿಯೂಟಕ್ಕೆ ತೊಂದರೆಯಾಗಿದೆ ಎಂದು ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಭಾಗ್ಯ ತಿಳಿಸಿದ್ದಾರೆ. ‘ಮಕ್ಕಳಿಗೆ ಸದ್ಯಕ್ಕೆ ಐದು ದಿನದಿಂದ ಬಯಲು ಪ್ರದೇಶದಲ್ಲಿ ಬಿಸಿಯೂಟಕ್ಕೆ ಸೌದೆ ಒಲೆ ಹಾಕಿ ಅಡುಗೆ ಸಿಬ್ಬಂದಿ ಅಡುಗೆ ಮಾಡುತ್ತಿದ್ದಾರೆ.ಸೌದೆ ಕೊರತೆಯಿದ್ದು ಹೆಚ್ಚು ದಿನ ಇದೇ ರೀತಿ ಅಡುಗೆ ಮಾಡಲು ಸಾಧ್ಯವಾಗುತ್ತಿಲ್ಲ.ಜಿಲ್ಲಾಧಿಕಾರಿಗಳು ಸರ್ಕಾರಿ ಶಾಲೆಗಳಿಗೆ ಬಿಸಿಯೂಟಕ್ಕೆ ಅಡಚಣೆಯಾಗಬಾರದೆಂಬ ನಿರ್ದೇಶನ ಇದ್ದರೂ ಗ್ಯಾಸ್ ಏಜೆನ್ಸಿಯವರು ನಿರ್ಲಕ್ಷ್ಯ ತೋರುತ್ತಿದ್ದಾರೆ. ಶಾಲೆಗಳಲ್ಲಿ ಗ್ಯಾಸ್ ಕೊರತೆಯಿಂದ ಬಿಸಿಯೂಟ ತಯಾರಿಸಲು ಸಂಕಷ್ಟ ಎದುರಾಗಿದೆ. ಗ್ಯಾಸ್ ಸಿಲಿಂಡರ್ ಸಕಾಲಕ್ಕೆ ಆಗದೆ ವಿವಿಧ ಶಾಲೆಗಳಲ್ಲಿ ಮಕ್ಕಳಿಗೆ ಅಡುಗೆ ತಯಾರಿಸುವುದು ಕೂಡ ಸವಾಲಾಗಿ ಪರಿಣಮಿಸಿದೆ.ಕೆಲವು ಶಾಲೆಗಳಲ್ಲಿ ಶಿಕ್ಷಕರು ಸೌದೆ ಬಳಸಿ ಅಡುಗೆ ತಯಾರಿಸಲು ನೆರವಾಗುತ್ತಿದ್ದಾರೆ.ಸೌದೆಯ ಭರವೂ ಇರುವುದರಿಂದ ಗ್ಯಾಸ್ ಸಿಲಿಂಡರ್ ಸರಬರಾಜು ಆಗದಿದ್ದರೆ ಬಿಸಿಯೂಟಕ್ಕೂ ಬ್ರೇಕ್ ಬೀಳುವ ಸಾಧ್ಯತೆಯೂ ಹೆಚ್ಚಾಗಿದೆ.ಸಂಬಂಧ ಪಟ್ಟ ಅಧಿಕಾರಿಗಳು ಗ್ಯಾಸ್ ಸರಬರಾಜು ಮಾಡುವಂತೆ ಬಗ್ಗೆ ಸೂಕ್ತ ಕ್ರಮ ವಹಿಸಬೇಕು ಎಂದು ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ. ‘ *ತಿಂಗಳಿಗೆ ಮೂರು ಗ್ಯಾಸ್ ಸಿಲಿಂಡರ್ ಪೂರೈಕೆ ಮಾಡಲಾಗುತ್ತಿತ್ತು.ಬಳಿಕ ಎರಡು ಗ್ಯಾಸ್ ಸಿಲಿಂಡರ್ ಸಿಗುತ್ತಿತ್ತು.ಆದರೆ ಈಗ ಗ್ಯಾಸ್ ಪೂರೈಕೆಯಾಗದೇ ಮಕ್ಕಳಿಗೆ ಸಕಾಲದಲ್ಲಿ ಬಿಸಿಯೂಟಕ್ಕೆ ತೊಂದರೆಯಾಗಿದೆ.ಶನಿವಾರವೆ ಗ್ಯಾಸ್ ಪೂರೈಕೆ ಮಾಡಬೇಕಾಗಿದ್ದ ಗ್ಯಾಸ್ ಏಜೆನ್ಸಿಯವರು ಸೋಮವಾರವೂ ಬಂದಿಲ್ಲ. – ●ಕಿರಣ್ ಕುಮಾರ್ ,ಪ್ರೌಢಶಾಲಾ ಶಿಕ್ಷಕರು*

