लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ನಿಸರ್ಗದತ್ತವಾದ ಮನುಷ್ಯನ ಬುದ್ಧಿಶಕ್ತಿಯನ್ನು ಸರಿಗಟ್ಟಲು ಕೃತಕ ಬುದ್ಧಿಮತ್ತೆಯಿಂದ ಸಾಧ್ಯವಿಲ್ಲ:ಬಿ ಅಮ್ಜದ್….

1 min read

ಅವಿನ್ ಟಿವಿ ಸುದ್ದಿವಾಹಿನಿ ✍️: ನವ ಮಾಧ್ಯಮಗಳ ತರಬೇತಿ ಶಿಬಿರದ ಸಮಾರೋಪ ಸಮಾರಂಭ.

ನಿಸರ್ಗದತ್ತವಾದ ಮನುಷ್ಯನ ಬುದ್ಧಿಶಕ್ತಿಯನ್ನು ಸರಿಗಟ್ಟಲು ಕೃತಕ ಬುದ್ಧಿಮತ್ತೆಯಿಂದ ಸಾಧ್ಯವಿಲ್ಲ:ಬಿ ಅಮ್ಜದ್

ಚಿಕ್ಕಮಗಳೂರು ಮಾ ೧೫, ಎ ಐ ಕೃತಕ ಬುದ್ಧಿಮತ್ತೆ ಸೇರಿದಂತೆ ನೂತನ ತಂತ್ರಜ್ಞಾನಗಳನ್ನು ಯುವಜನತೆ ಇತಿ ಮಿತಿಯಲ್ಲಿ ಬಳಸಬೇಕು ಎಂದು ಎ ಐ ಟಿ ಯು ಸಿ ರಾಜ್ಯ ಉಪಾಧ್ಯಕ್ಷ ಬಿ.ಅಮ್ಜದ್ ಸಲಹೆ ಮಾಡಿದರು.

ಹೊನ್ನ ಬಿತ್ತೇವು ಹೊಲಕೆಲ್ಲ ಬಳಗ ಮತ್ತು ನ್ಯೂಸ್ ಕಿಂಗ್ ಸುದ್ದಿವಾಹಿನಿಯು ನಗರದ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಎರಡು ದಿನಗಳ ಕಾಲ ಆಯೋಜಿಸಿದ್ದ ಎಐ ಕೃತಕ ಬುದ್ಧಿಮತ್ತೆ ಮತ್ತು ನೂತನ ತಂತ್ರಜ್ಞಾನಗಳ ಬಳಕೆ ಕುರಿತ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾನುವಾರ ಅವರು ಮಾತನಾಡಿದರು.

ದೇಶದ ಅಭಿವೃದ್ಧಿಗೆ ನೂತನ ತಂತ್ರಜ್ಞಾನಗಳು ಅತ್ಯಗತ್ಯ ಮತ್ತು ಪೂರಕ ವಾಗಿರುವುದು ಒಂದೆಡೆಯಾದರೆ ಇನ್ನೊಂದೆಡೆ ಅವುಗಳ ದುಷ್ಪರಿಣಾಮ ರಾಷ್ಟ್ರದ ಜನತೆಯ ಮೇಲಾಗುತ್ತಿದೆ, ಮೊಬೈಲ್, ಕಂಪ್ಯೂಟರ್, ಫೇಸ್ಬುಕ್ ಸೇರಿದಂತೆ ಆಧುನಿಕ ತಂತ್ರಜ್ಞಾನಗಳ ಮಿತಿಮೀರಿದ ಬಳಕೆಯಿಂದಾಗಿ ವಿದ್ಯಾರ್ಥಿಗಳು, ಯುವಜನತೆ ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ ಎಂದು ವಿಷಾದಿಸಿದರು.
ನೂತನ ತಂತ್ರಜ್ಞಾನಗಳಿಂದ ಆರೋಗ್ಯ ಮತ್ತು ಬುದ್ಧಿಮತ್ತೆಯ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ, ಉದ್ಯೋಗ ನಷ್ಟ ಉಂಟಾಗುವ ಭೀತಿ ಯುವಜನತೆಯನ್ನು ಕಾಡುತ್ತಿದೆ ಎಂದ ಅವರು ನೂತನ ತಂತ್ರಜ್ಞಾನಗಳು ಆರ್ಥಿಕ ಕಡಿತಕ್ಕೆ ಕಾರಣವಾದರೆ ಇನ್ನೊಂದೆಡೆ ಮೊಬೈಲ್, ಲ್ಯಾಪ್ ಟಾಪ್, ಕಂಪ್ಯೂಟರ್ ಬಳಕೆಗಳ ಮೂಲಕ ಸೈಬರ್ ಅಪರಾಧಗಳು ಹೆಚ್ಚಾಗುತ್ತಿವೆ, ಅಂತರ್ಜಾಲದ ದುರುಪಯೋಗವಾಗುತ್ತಿದೆ, ಆರ್ಥಿಕ ನಷ್ಟ ಮತ್ತು ಕೌಟುಂಬಿಕ ಕಲಹಗಳು ಸಮಾಜವನ್ನು ದುಸ್ಥಿತಿಗೆ ತಳ್ಳುತ್ತಿವೆ, ಯುವಜನರನ್ನು ಹೊಸ ಅಪ್ಲಿಕೇಶನ್ ಗಳ ಮೂಲಕ ಆಮಿಷವುಡ್ಡಿ ವಂಚಿಸಲಾಗುತ್ತಿದೆ ಎಂದು ಹೇಳಿದರು.
ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಮತ್ತು ಯುವಜನತೆ ಜಾಗೃತರಾಗಿ ಎಚ್ಚೆತ್ತುಕೊಳ್ಳಬೇಕು, ತಮಗೆ, ಸಮಾಜ ಮತ್ತು ದೇಶದ ಅಭಿವೃದ್ಧಿಗೆ ಯಾವುದು ಪೂರಕವೋ ಅದನ್ನು ಮಾತ್ರ ಬಳಸಬೇಕು ಎಂದು ಕಿವಿ ಮಾತು ಹೇಳಿದರು.

ಸಮಾರೋಪ ನುಡಿಗಳನ್ನಾಡಿದ ಐ ಐ ಪಿ ಸಂಸ್ಥಾಪಕ ನಂಜೇಶ್ ಬೆಣ್ಣೂರು ಈ ಶಿಬಿರದಲ್ಲಿ ಎರಡು ದಿನಗಳ ಕಾಲ ಕಲಿತ ವಿಷಯಗಳನ್ನು ಶಿಬಿರಾರ್ಥಿಗಳು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು, ಯುವಜನತೆ ಮತ್ತು ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಇಂತಹ ಶಿಬಿರಗಳನ್ನು ರಾಜ್ಯಮಟ್ಟದಲ್ಲೂ ಆಯೋಜಿಸಬೇಕು, ಇಂತಹ ಶಿಬಿರಗಳಿಂದ ಮಾನವ ಸಂಬಂಧಗಳು ಹತ್ತಿರವಾಗಿ ಜೀವನವನ್ನು ಅರ್ಥಪೂರ್ಣವಾಗಿ ದುಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ರವೀಶ್ ಕ್ಯಾತನಬೀಡು ಮಾತನಾಡಿ ಯುವಜನರಿಗೆ ಅತ್ಯಗತ್ಯವಾದ ಇಂತಹ ಶಿಬಿರಗಳನ್ನು ಶಾಲಾ ಕಾಲೇಜುಗಳಲ್ಲೂ ನಡೆಸಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ರಾಜ್ಯಾಧ್ಯಕ್ಷ ಹಾಗೂ ಈ ಶಿಬಿರದ ಮುಖ್ಯ ಆಯೋಜಕರಾದ ಎನ್.ರಾಜು ಅವರು ಹೊನ್ನ ಬಿತ್ತೇವು ಹೊಲಕೆಲ್ಲ ಬಳಗದಿಂದ ಮುಂಬರುವ ದಿನಗಳಲ್ಲಿ ಜಿಲ್ಲಾ ಅಥವಾ ರಾಜ್ಯಮಟ್ಟದ ಸಮ್ಮೇಳನವನ್ನು ನಡೆಸಲಾಗುವುದು, ವಿದ್ಯಾರ್ಥಿಗಳು ಮತ್ತು ಯುವಜನತೆಯನ್ನು ಜಾಗೃತಿಗೊಳಿಸುವ ನಿಟ್ಟಿನಲ್ಲಿ ಕೃತಕ ಬುದ್ಧಿಮತ್ತೆ ಸೇರಿದಂತೆ ನೂತನ ತಂತ್ರಜ್ಞಾನಗಳ ಕುರಿತ ತರಬೇತಿ ಶಿಬಿರಗಳನ್ನು ಜಿಲ್ಲಾಧ್ಯಂತ ನಡೆಸಲಾಗುವುದು ಎಂದು ತಿಳಿಸಿದರು.

ಎರಡು ದಿನಗಳ ಕಾಲ ನಡೆದ ತರಬೇತಿ ಶಿಬಿರದಲ್ಲಿ ಶಿಬಿರಾರ್ಥಿಗಳಿಗೆ ಊಟ ಉಪಾಹಾರಗಳ ಜೊತೆಗೆ ಸಂಪೂರ್ಣ ಉಚಿತವಾಗಿ ಎಐ ಕೃತಕ ಬುದ್ಧಿಮತ್ತೆ ಸೇರಿದಂತೆ ನೂತನ ತಂತ್ರಜ್ಞಾನಗಳ ಸಾಧಕ ಬಾದಕ ಮತ್ತು ಬಳಕೆ ಕುರಿತು ವಿಷಯ ತಜ್ಞರಿಂದ ತರಬೇತಿನೀಡಿ ಶಿಬಿರಾರ್ಥಿಗಳೊಂದಿಗೆ ಸಂವಾದ ಮಾಡಲಾಯಿತು.

ಹಾಸನ ನವ್ಕಿನ್ ಇಂಜಿನಿಯರಿಂಗ್ ಕಾಲೇಜಿನ ಎ ಐ ವಿಭಾಗದ ಮುಖ್ಯಸ್ಥ ಪ್ರೊ,ವಿವೇಕಾನಂದ, ಬೆಂಗಳೂರಿನ ಜಿಯೋ ಹಾಟ್ ಸ್ಟಾರ್ ಸುದ್ದಿ ವಾಹಿನಿಯ ಇಸ್ಮಾಯಿಲ್, ಚಿಕ್ಕಮಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷರಾದ ಸಿ ಡಿ ಚಂದ್ರೇಗೌಡ, ರೈತ ಮುಖಂಡರುಗಳಾದ ಗುರುಶಾಂತಪ್ಪ, ರವೀಶ್ ಜಾನ್ಸಾಲೆ, ನಿಜಗುಣ ಉದ್ದೆಬೋರನಹಳ್ಳಿ ಉಪಸ್ಥಿತರಿದ್ದರು.

ಹೊನ್ನ ಬಿತ್ತೇವು ಹೊಲಕೆಲ್ಲ ಬಳಗದ ಸದಸ್ಯರಾದ ನಟರಾಜ್ ಎಸ್ ಕೊಪ್ಪಲು ಸ್ವಾಗತಿಸಿ,ವಿಜಯಕುಮಾರ್ ಪಿಳ್ಳೇನಹಳ್ಳಿ ವಂದಿಸಿ, ಜಯಂತಿ ಶಿವಾಜಿ ಪ್ರಾರ್ಥಿಸಿ ಡಿ. ಎಂ.ಮಂಜುನಾಥಸ್ವಾಮಿ ಕಾರ್ಯಕ್ರಮ ನಿರೂಪಿಸಿದರು.

ಇದೇ ಸಂದರ್ಭದಲ್ಲಿ ಈ ತರಬೇತಿ ಶಿಬಿರಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ, ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿ ಭಾಗವಹಿಸಿದ ಎಲ್ಲ ಶಿಬಿರಾರ್ಥಿಗಳಿಗೆ ತರಬೇತಿ ಪ್ರಮಾಣ ಪತ್ರವನ್ನು ನೀಡಿ ಗೌರವಿಸಲಾಯಿತು.
••••••••••••
ಡಿ ಎಂ ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿವಾಹಿನಿ ….. ✍️
ಚಿಕ್ಕಮಗಳೂರು

About Author

Leave a Reply

Your email address will not be published. Required fields are marked *

You may have missed