ವೈರಮುತ್ತು ರಾಮಸ್ವಾಮಿ ಅವರಿಗೆ ಜ್ಞಾನಪೀಠ ಪ್ರಶಸ್ತಿ ಘೋಷಣೆ…
1 min read
ಅವಿನ್ ಟಿವಿ ಸುದ್ದಿ ಜಾಲ ✍️: ವೈರಮುತ್ತು ರಾಮಸ್ವಾಮಿ ಅವರಿಗೆ ಜ್ಞಾನಪೀಠ ಪ್ರಶಸ್ತಿ ಘೋಷಣೆ.
ತಮಿಳುನಾಡು ಮಾ ೧೪: ತಮಿಳುನಾಡಿನ 73ರ ವಯೋಮಾನದ ವೈರಮುತ್ತು ರಾಮಸ್ವಾಮಿ ಅವರಿಗೆ ಈ ಸಾಲಿನ ಜ್ಞಾನಪೀಠ ಪ್ರಶಸ್ತಿ ಘೋಷಣೆಯಾಗಿದೆ.
ತಮಿಳುನಾಡಿನ ಅಖಿಲನ್ ಮತ್ತು ಜಯಕಾಂತನ್ ಅವರ ಆನಂತರ ಈ ಪ್ರಶಸ್ತಿ ಪಡೆದ ಮೂರನೇ ತಮಿಳು ಲೇಖಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಈ ಹಿಂದೆ ಜ್ಞಾನಪೀಠ ಪ್ರಶಸ್ತಿಗೆ ಇವರ ಹೆಸರು ಅನೇಕ ಬಾರಿ ಉಲ್ಲೇಖವಾಗುತ್ತಿತ್ತು. ಆದರೆ ಅವರಿಗೆ ಪ್ರಶಸ್ತಿ ನೀಡುವುದರ ಬಗ್ಗೆ ಕೆಲವರ ತೀವ್ರ ವಿರೋಧವಿತ್ತು.
ತಮಿಳು ಚಿತ್ರರಂಗ ಮತ್ತು ಸಾಹಿತ್ಯದ ಅತ್ಯಂತ ಪ್ರಭಾವಶಾಲಿ ಕವಿಯಾಗಿ ಹೆಸರು ಮಾಡಿರುವ ಇವರು ಪದ್ಮಶ್ರೀ ಮತ್ತು ಪದ್ಮಭೂಷಣ ಗೌರವಗಳಿಗೆ ಪಾತ್ರರಾಗಿದ್ದಾರೆ. ‘ಕಳ್ಳಿಕಾಟ್ಟು ಇದಿಹಾಸಂ’ ( ಇದನ್ನು ಡಾ. ಮಲರ್ ವಿಳಿಯವರು ಕನ್ನಡಕ್ಕೆ ಸೊಗಸಾಗಿ ಅನುವಾದ ಮಾಡಿದ್ದಾರೆ). ವೈರಮುತ್ತು ಅವರು ತಮಿಳುನಾಡಿನ ಗ್ರಾಮೀಣ ಜೀವನ ಮತ್ತು ಸಾಮಾಜಿಕ ಬದಲಾವಣೆಗಳ ಬಗ್ಗೆ ಉತ್ಕಟವಾಗಿ ಬರೆಯುವ ಮೂಲಕ ತಮಿಳು ಸಾಹಿತ್ಯದಲ್ಲಿ ಜನಜನಿತವಾಗಿದ್ದಾರೆ.
•••••••••••
ಡಿ ಎಂ ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ ….. ✍️
ಚಿಕ್ಕಮಗಳೂರು

