लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಬಿಜೆಪಿ ಆಲ್ದೂರು ಮಂಡಲ ವತಿಯಿಂದ ವಿಬಿ ಜಿ ರಾಮ್ ಜಿ ಸತ್ಯ ಸಂದರ್ಶನ ಅರಿವು ಕಾರ್ಯಕ್ರಮ…

1 min read

ಬಿಜೆಪಿ ಆಲ್ದೂರು ಮಂಡಲ ವತಿಯಿಂದ ವಿಬಿ ಜಿ ರಾಮ್ ಜಿ
ಸತ್ಯ ಸಂದರ್ಶನ ಅರಿವು ಕಾರ್ಯಕ್ರಮ

ಆಲ್ದೂರು: ಪಟ್ಟಣದಲ್ಲಿ ಆಲ್ದೂರು ಮಂಡಲ ಬಿಜೆಪಿ ಘಟಕದ ವತಿಯಿಂದ ನರೇಗಾ ಉದ್ಯೋಗ ಖಾತ್ರಿ ಯೋಜನೆ ಗೆ ಹೊಸದಾಗಿ ವಿಬಿಜಿ ರಾಮ್ ಜಿ ನಾಮನಿರ್ದೇಶನ ಕಾಂಗ್ರೆಸ್ ಅಪಪ್ರಚಾರ ವಿರುದ್ಧ ಸತ್ಯ ಸಂದರ್ಶನ ಅರಿವು ಮೂಡಿಸುವ ಕಾರ್ಯಕ್ರಮ ಶನಿವಾರ ನಡೆಯಿತು.

ಮಹಾಗಣಪತಿ ದೇವಸ್ಥಾನದ ಮುಂಭಾಗದಿಂದ ಹೊರಟಂತ ಕಾಲ್ನಡಿಗೆ ಜಾತ ಕೆಂಪೇಗೌಡ ಮತ್ತು ಅಂಬೇಡ್ಕರ್ ವೃತ್ತಗಳ ಮೂಲಕ ಪ್ರಮುಖ ಬೀದಿಗಳಲ್ಲಿ ಸಾಗಿ ಬಂದಿತು.

ಬಳಿಕ ಪ್ರಾಸ್ತಾವಿಕವಾಗಿ ಮಾತನಾಡಿದ ಮಂಡಲ ಬಿಜೆಪಿ ಅಧ್ಯಕ್ಷ ರವಿ ಬಸರವಳ್ಳಿ, ನರೇಗಾ ಉದ್ಯೋಗ ಖಾತ್ರಿ ಯೋಜನೆಗೆ ಹೊಸದಾಗಿ ವಿಬಿಜಿ ರಾಮ್ ಜಿ
ನಾಮನಿರ್ದೇಶನ ಮಾಡಿರುವುದಕ್ಕೆ ಮತ್ತು ನರೇಗಾದಲ್ಲಿ ಹಿಂದೆ ಆಗಿರುವ ಭ್ರಷ್ಟಾಚಾರವನ್ನು ತಡೆಯುವ ನಿಟ್ಟಿನಲ್ಲಿ ನೂತನ ಕಾನೂನನ್ನು ಕೂಡ ರೂಪಿಸಿದ್ದು, ದೇಶದ ಅತ್ಯಂತ ಕಾಂಗ್ರೆಸ್ ಪಕ್ಷ ಬಿಜೆಪಿ ವಿರುದ್ಧ ಮಹಾ ಅಪರಾಧ ಎಸಗಿರುವಂತೆ ಇಲ್ಲಸಲ್ಲದ ಆರೋಪಗಳನ್ನು ಸೃಷ್ಟಿಸಿಕೊಂಡು ಅಪಪ್ರಚಾರ ಮಾಡುತ್ತಿದೆ ಎಂದು ಟೀಕಿಸಿದರು.

ಮುಖಂಡ ದೀಪಕ್ ದೊಡ್ಡಯ್ಯ ದೇಶದ ಚರಿತ್ರೆಯಲ್ಲಿ ಅತಿ ಹೆಚ್ಚಿನ ಆಡಳಿತಾವಧಿಯನ್ನು ನಿರ್ವಹಿಸಿರುವ ಕಾಂಗ್ರೆಸ್ ಪ್ರಸ್ತುತ ರಾಜ್ಯಸಭೆ ಮತ್ತು ಲೋಕಸಭೆಯ ಸದನಗಳ ಮಹತ್ವಪೂರ್ಣ ಸಮಯವನ್ನು ಸಾರ್ವಜನಿಕ ಅಭಿವೃದ್ಧಿ ಪ್ರಜೆಗಳ ಹಿತಾಸಕ್ತಿಗಾಗಿ ವ್ಯಯ ಮಾಡದೆ ಮತ ಬ್ಯಾಂಕ್ ಗಾಗಿ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದ್ದು, ಪ್ರಯೋಜನಕ್ಕೆ ಬಾರದಂತಹ ಚರ್ಚೆಗಳನ್ನು ಮಾಡುತ್ತ ಕಾಲಹರಣ ಮಾಡುತ್ತಿದೆ ಎಂದರು.

ಮುಖ್ಯ ಭಾಷಣ ಮಾಡಿದ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಇಂದು ಯೋಜನೆಯಲ್ಲಿ ಮಾರ್ಪಾಡುಗೊಂಡಿರುವ ಮುಖ್ಯ ಬದಲಾವಣೆಗಳನ್ನು ಮತ್ತು ಕಾಂಗ್ರೆಸ್ ಮಾಡುತ್ತಿರುವ ಅಪಪ್ರಚಾರದ ವಿರುದ್ಧ ಸತ್ಯದ ಅರಿವನ್ನು ತಿಳಿಸುವ ಸಲುವಾಗಿ ಕಾಲ್ ನಡಿಗೆ ಜಾತವನ್ನು ಆಯೋಜಿಸಲಾಗಿದೆ
ಕಾಂಗ್ರೆಸ್ ಬಿಜೆಪಿ ಹಾಗೂ ನರೇಂದ್ರ ಮೋದಿಯವರ ಮೇಲಿನ ದ್ವೇಷದಿಂದಾಗಿ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತ ಸುಳ್ಳಿನ ಸರಮಾಲೆಗಳನ್ನು ಸೃಷ್ಟಿ ಮಾಡುತ್ತಿದೆ ಪ್ರಜಾಪ್ರಭುತ್ವದಲ್ಲಿ ಟೀಕೆ ಟಿಪ್ಪಣಿಗಳು ಸಹಜ ಕಾಯ್ದೆಗಳ ವಿಷಯದಲ್ಲಿ ಲೋಪದೋಷಗಳು ಕಂಡು ಬಂದಾಗ ಸರಿಪಡಿಸಬಹುದು ಆದರೆ ಉದ್ದೇಶಪೂರ್ವಕವಾಗಿ ಮಾಡುವಂತವರನ್ನು ಹೇಗೆ ಸರಿಪಡಿಸಲು ಸಾಧ್ಯ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನು 2006ರಿಂದ 2008 ರವರೆಗೆ ಪ್ರಾರಂಭಿಸಿದ್ದು ಈ ಹಿಂದೆ ಅದಕ್ಕೆ ಜವಾಹರ್ ರೋಜ್ಗಾರ್ ಯೋಜನೆ ಎಂದು ಹೆಸರಿತ್ತು ಬಳಿಕ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಎಂದು ಬದಲಾವಣೆ ತಂದಿದ್ದು 2014ರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಧಿಕಾರದ ಚುಕ್ಕಾಣಿ ಹಿಡಿದರು ಬದಲಾವಣೆ ತಂದಿರಲಿಲ್ಲ ಜಿ ರಾಮ್ ಜಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಪ್ರಮುಖ ಮೂರು ಬದಲಾವಣೆಗಳನ್ನು ತರಲಾಗಿದ್ದು, ಯುಪಿಎ ಸರ್ಕಾರ 100 ದಿನಗಳ ಉದ್ಯೋಗವನ್ನು ಒದಗಿಸುತ್ತಿತ್ತು ಪ್ರಸ್ತುತ 125 ದಿನಗಳ ಉದ್ಯೋಗವನ್ನು ಒದಗಿಸುವಂತೆ ನಿಯಮ ತರಲಾಗಿದೆ ಯುಪಿಎ ಕಾಲಾವಧಿಯಲ್ಲಿ ಒಂದು ದಿನಕ್ಕೆ 175 ರೂ ಇತ್ತು ಪ್ರಸ್ತುತ 375 ಗೆ ಕೂಲಿಯನ್ನು ಒಂದು ದಿನಕ್ಕೆ ಏರಿಸಲಾಗಿದೆ ಒಟ್ಟು ನೂರು ದಿನಗಳಿಗೆ 17500 ಪಡೆಯುತ್ತಿದ್ದ ಉದ್ಯೋಗ ಖಾತ್ರಿ ಕಾರ್ಮಿಕರಿಗೆ ಈಗ 46875 ರೂಪಾಯಿ ಸಂಬಳ ದೊರೆಯುತ್ತದೆ ಮೆದುಳಿನಲ್ಲಿ ಸಾಮಗ್ರಿ ಇರುವಂತಹ ಯಾವೊಬ್ಬ ವ್ಯಕ್ತಿಯು ಇಂತಹ ಬದಲಾವಣೆಯನ್ನು ಟೀಕಿಸಲು ಸಾಧ್ಯವೇ ಆದರೆ ಕಾಂಗ್ರೆಸ್ ಟೀಕೆ ಮಾಡುವುದಲ್ಲದೆ ಜಿ ರಾಮ್ ಜಿ ಅವರನ್ನು ಕುರಿತು ಅಪಪ್ರಚಾರ ಮಾಡುತ್ತಿದೆ ಆದರೆ ಸತ್ಯ ದರ್ಶನದ ಅರಿವನ್ನು ಮೂಡಿಸಲು ನಾವಿಂದು ಒಟ್ಟು ಸೇರಿದ್ದು ಇಲ್ಲಿಂದ ಮೂಡಿಗೆರೆ ಮತ್ತು ಕಳಸ ಭಾಗದಲ್ಲಿ ಈ ಜಿ ರಾಮ ಜಿ ಯೋಜನೆ ಕುರಿತು ಕಾಂಗ್ರೆಸ್ ಮಾಡಿರುವಂತಹ ಅಪಪ್ರಚಾರದ ವಿರುದ್ಧ ಸತ್ಯದ
ದರ್ಶನವನ್ನು ಮಾಡಿಸಲು ಕಾರ್ಯಕ್ರಮ ಆಯೋಜಿಸಿದ್ದೇವೆ ಎಂದರು.
ಬಿಜೆಪಿಯ ಪ್ರಮುಖ ಮುಖಂಡರಾದ ದಿನೇಶ್ ಮುಗುಳುವಳ್ಳಿ,
ಚಂಪಾ ಜಗದೀಶ್, ಸಂಪತ್ ಹೆಡದಾಳು, ಕವೀಶ್,
ಮನು ರಾಮ್, ಮಹೇಶ್ ಕೆರೆಮಕ್ಕಿ, ನಾಗೇಶ್ ಭೂತನ ಕಾಡು, ಪ್ರಸನ್ನ ಕೆಳಗಣೆ, ಯೋಗೇಶ್,
ನಾರಾಯಣ ಆಚಾರ್ಯ, ರವೀಂದ್ರ ಆನಿಗನಹಳ್ಳಿ, ಸುದರ್ಶನ್ ಬನ್ನೂರು, ಅರವಿಂದ್ ಕೂದುವಳ್ಳಿ,
ನಾಗೇಶ್ ಬೈಗೂರು,ಭವ್ಯ ನಟೇಶ್, ಶಿವಕುಮಾರ್, ನಾಗೇಶ್ ಡಿಜೆ,
ಸಿಂಧು ಕುಮಾರ್, ಪ್ರತಿಭಾ ನವೀನ್ ,ವಿಜಯ್ ಕುಮಾರ್, ಶಶಿ, ಚೇತನ್, ಕಾರ್ಯಕರ್ತರುಗಳು ಭಾಗವಹಿಸಿದ್ದರು.

About Author

Leave a Reply

Your email address will not be published. Required fields are marked *

You may have missed