ಪ್ರೀತಿಗೆ ಕಣ್ಣಿಲ್ಲ ಧರ್ಮಕ್ಕೆ ಗಡಿಗಳಿಲ್ಲ ಎಂದು ಸಾಬೀತು ಮಾಡಿದ ನೀಲಿ ಕಣ್ಣಿನ ಮುಗ್ಧ ನಗುವಿನ ಕುಂಭಮೇಳದ ಮೊನಾಲಿಸಾ ತನ್ನ ಪ್ರೇಮ ವಿವಾಹದ ಮೂಲಕ ಈಗ ಮತ್ತೊಮ್ಮೆ ಧರ್ಮದ ಕಾವೀನೊಂದಿಗೆ ಸುದ್ದಿಯ ಸರಕು….
1 min read
ಅವಿನ್ ಟಿವಿ ಸುದ್ದಿಜಾಲ ✍️: ಪ್ರೀತಿಗೆ ಕಣ್ಣಿಲ್ಲ ಧರ್ಮಕ್ಕೆ ಗಡಿಗಳಿಲ್ಲ ಎಂದು ಸಾಬೀತು ಮಾಡಿದ ನೀಲಿ ಕಣ್ಣಿನ ಮುಗ್ಧ ನಗುವಿನ ಕುಂಭಮೇಳದ ಮೊನಾಲಿಸಾ ತನ್ನ ಪ್ರೇಮ ವಿವಾಹದ ಮೂಲಕ ಈಗ ಮತ್ತೊಮ್ಮೆ ಧರ್ಮದ ಕಾವೀನೊಂದಿಗೆ ಸುದ್ದಿಯ ಸರಕು.
ತಿರುವನಂತಪುರ ಕೆರಳ ಮಾ ೧೧:
ಕಳೆದ ವರ್ಷ ಪ್ರಯಾಗ್ ರಾಜ್ ನಲ್ಲಿ ನೆಡೆದ ಮಹಾ ಕುಂಭಮೇಳದಲ್ಲಿ ರುದ್ರಾಕ್ಷಿ ಮಾರುವ ಮೂಲಕ ತನ್ನ ನೀಲಿ ಕಣ್ಣು ಮತ್ತು ಮುಗ್ಧ ನಗುವಿನ ಮೂಲಕ ದೇಶದ ಗಮನ ಸೆಳೆದು ಅದೆಷ್ಟೋ ಹುಡುಗರ ನಿದ್ದೆಯ ಕದ್ದ ಉತ್ತರ ಭಾರತದ ಚಂದುಳ್ಳಿ ಚೆಲುವೆ ದಕ್ಷಿಣ ಭಾರತದ ದೇವರ ನಾಡು ಕೇರಳದ ತಂಪಮಾರು ಎಂಬಲ್ಲಿ ಪೊಲೀಸ್ ರಕ್ಷಣೆಪಡೆದು ಮಹಾರಾಷ್ಟ್ರದ ಫರ್ಮಾನ್ ಖಾನ್ ಎಂಬ ಗೆಳೆಯನನ್ನು ವರಿಸಿ ಪ್ರೇಮ ವಿವಾಹವಾಗಿದ್ದಾರೆ.
ತಿರುವನಂತಪುರದ ದೇವಸ್ಥಾನವೊಂದರಲ್ಲಿ ಇದ್ದಕ್ಕಿದ್ದಂತೆ ದಿಡೀರನೆ ನಡೆದ ಈ ಅಂತರರಾಜ್ಯ ಮತ್ತು ಅಂತರ್ಧರ್ಮೀಯ ಈ ಪ್ರೇಮ ವಿವಾಹಕ್ಕೆ ಕೇರಳ ಸರ್ಕಾರದ ಕೆಲವು ಸಚಿವರು, ರಾಜಕೀಯ ಪಕ್ಷಗಳು, ಅಲ್ಲಿನ ಅನೇಕ ಸಮಾಜಮುಖಿ ಸಂಘಟನೆಗಳ ಮನಸ್ಸುಗಳು ಈ ಮದುವೆಗೆ ಸಾಕ್ಷಿಯಾಗಿದ್ದಾರೆ.
ಕುಂಭಮೇಳದ ಮೂಲಕ ಖ್ಯಾತಿ ಗಳಿಸಿದ್ದ ಮೊನಾಲಿಸಾ, ತನ್ನ ಪ್ರಿಯಕರ ಫರ್ಮಾನ್ ಖಾನ್ ಜೊತೆ ವಿವಾಹವಾಗಲು ತನ್ನ . ಕುಟುಂಬದ ವಿರೋಧದ ಹಿನ್ನೆಲೆಯಲ್ಲಿ ಪೊಲೀಸ್ ರಕ್ಷಣೆ ಕೋರಿದ್ದ ಈ ಜೋಡಿ, ತಿರುವನಂತಪುರಂನ ಹತ್ತಿರದ ದೇವಸ್ಥಾನವೊಂದರಲ್ಲಿ ಗಣ್ಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಪ್ರಯಾಗ್‌ರಾಜ್ ಕುಂಭಮೇಳದ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಮನೆಮಾತಾಗಿದ್ದ ಇಂದೋರ್‌ನ ಸುಂದರಿ ಮೋನಿ ಭೋಂಸ್ಲೆ ಅಲಿಯಾಸ್ ಮೊನಾಲಿಸಾ, ಕೊನೆಗೂ ತನ್ನ ಪ್ರಿಯಕರ ಫರ್ಮಾನ್ ಖಾನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ತಿರುವನಂತಪುರಂನ ಅರುಮಾನೂರು ಶ್ರೀ ನೈನಾರ್ ದೇವಸ್ಥಾನದಲ್ಲಿ ಇವರ ವಿವಾಹ ಕಾರ್ಯಕ್ರಮ ನೆರವೇರಿದೆ.
ಫರ್ಮಾನ್ ಖಾನ್ ಜೊತೆಗಿನ ಪ್ರೀತಿಗೆ ಪೋಷಕರು ಒಪ್ಪುತ್ತಿಲ್ಲ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ ದಿನವೇ, ದಿಢೀರ್ ಆಗಿ ಮೋನಾಲಿಸಾ ಹಾಗೂ ಫರ್ಮಾನ್ ಖಾನ್ ಅವರ ವಿವಾಹ ನೆರವೇರಿದೆ.
ಪೊಲೀಸ್ ಠಾಣೆಯಿಂದ ಮದುವೆ ಮಂಟಪಕ್ಕೆ!
ಮಧ್ಯಪ್ರದೇಶದ ಇಂದೋರ್ ಮೂಲದ ಮೊನಾಲಿಸಾ ಮತ್ತು ಮಹಾರಾಷ್ಟ್ರದ ಫರ್ಮಾನ್ ಖಾನ್ ಇಂದು ಬೆಳಿಗ್ಗೆ ತಿರುವನಂತಪುರಂನ ತಂಪನೂರು ಪೊಲೀಸ್ ಠಾಣೆಗೆ ಆಗಮಿಸಿ ರಕ್ಷಣೆ ಕೋರಿದ್ದರು.
ತನ್ನ ತಂದೆ ಬೇರೊಬ್ಬರ ಜೊತೆ ಮದುವೆ ಮಾಡಲು ಒತ್ತಾಯಿಸುತ್ತಿದ್ದಾರೆ ಮತ್ತು ಅನ್ಯಧರ್ಮದ ಯುವಕನನ್ನು ಪ್ರೀತಿಸುತ್ತಿರುವುದಕ್ಕೆ ಕುಟುಂಬ ವಿರೋಧ ವ್ಯಕ್ತಪಡಿಸುತ್ತಿದೆ ಎಂದು ಮೊನಾಲಿಸಾ ದೂರಿನಲ್ಲಿ ತಿಳಿಸಿದ್ದಾರೆ.
ಸಿನಿಮಾ ಚಿತ್ರೀಕರಣಕ್ಕಾಗಿ ಕೇರಳಕ್ಕೆ ಬಂದಿದ್ದ ಮೊನಾಲಿಸಾ ಈ ಸಂದರ್ಭವನ್ನು ಬಳಸಿಕೊಂಡು, ತನಗೆ ರಕ್ಷಣೆ ನೀಡುವಂತೆ ಪೊಲೀಸರಲ್ಲಿ ಮನವಿ ಮಾಡಿದ್ದರು.
ಕುಟುಂಬದ ವಿರೋಧದ ನಡುವೆಯೂ ಈ ಪ್ರೇಮಿಗಳು ಒಂದಾಗಲು ಕೇರಳದ ಆಡಳಿತಾರೂಢ ನಾಯಕರು ಸಾಥ್ ನೀಡಿದ್ದಾರೆ.
ಅರುಮಾನೂರು ದೇವಸ್ಥಾನದಲ್ಲಿ ನಡೆದ ವಿವಾಹಕ್ಕೆ ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್, ಸಚಿವ ವಿ. ಶಿವನ್‌ಕುಟ್ಟಿ ಮತ್ತು ರಾಜ್ಯಸಭಾ ಸಂಸದ ಎ.ಎ. ರಹೀಮ್ ಸೇರಿದಂತೆ ಹಲವು ಗಣ್ಯರು ಆಗಮಿಸಿ ನವಜೋಡಿಗೆ ಶುಭ ಹಾರೈಸಿದರು ಎಂದು ಸುದ್ದಿಯಾಗಿದೆ.
ಕುಂಭಮೇಳದಲ್ಲಿ ವೈರಲ್ ಆಗಿದ್ದ ಈ ನೀಲಿ ಕಂಗಳ ಮೊನಾಲಿಸಾ ಸರಿಯಾಗಿ ಕುಂಭ ಮಾಸದಲ್ಲೇ ಮದುವೆಯಾಗಿರುವುದು ಈ ವಿವಾಹದ ವಿಶೇಷ ಎಂದು ದೇವರ ನಾಡು ಕೇರಳ ಬಣ್ಣಿಸುತ್ತಿದೆ .
ತಾನು ಪ್ರೀತಿಸುತ್ತಿದ್ದ ಫರ್ಮಾನ್ ಖಾನ್ ಜೊತೆ ವಿವಾಹವಾಗಲು ಪೋಷಕರ ವಿರೋಧ ಮಾಡಿದರು ಸಹ ಕೇರಳ ಪೊಲೀಸರ ಸಹಾಯ ಪಡೆದು ಕುಂಭಮೇಳದ ವೈರಲ್ ಗರ್ಲ್ ಮೋನಾಲಿಸಾ ಪ್ರೇಮಕ್ಕೆ ಸೈ ಸೈ ಎಂದು ವಿವಾಹವಾಗಿರುವುದು ಈಗ ದೇಶದ ತುಂಬಾ ಚರ್ಚೆಯ ವಿಷಯವಾಗಿದೆ.
••••••••••••
ಡಿ ಎಂ ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ ….. ✍️
ಚಿಕ್ಕಮಗಳೂರು

