लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

7/3/2026 ರ ಶನಿವಾರ ದಂದು ದೇವಾಲದಕೆರೆ ಪಂಚಾಯತ್ ನ ಸರ್ಕಾರಿ ಹಿರಿಯ ಪ್ರೌಢಶಾಲೆಯಲ್ಲಿ ಅಮಲು ಪದಾರ್ಥ ಅಪಾಯ ಮತ್ತು ಕಾನೂನು ಅರಿವಿನ ಕಾರ್ಯಕ್ರಮ ದಲ್ಲಿ…

1 min read

7/3/2026 ರ ಶನಿವಾರ ದಂದು ದೇವಾಲದಕೆರೆ ಪಂಚಾಯತ್ ನ ಸರ್ಕಾರಿ ಹಿರಿಯ ಪ್ರೌಢಶಾಲೆಯಲ್ಲಿ ಅಮಲು ಪದಾರ್ಥ ಅಪಾಯ ಮತ್ತು ಕಾನೂನು ಅರಿವಿನ ಕಾರ್ಯಕ್ರಮ ದಲ್ಲಿ

ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ರಾದ ಶ್ರೀಯುತ ಸೀನ ಹಾಗು ಈ ಸಾಮಾಜಿಕ ಚಿಂತಕ, ಹಾಗು ಈ ಕಾರ್ಯಕ್ರಮದ ಮುಖ್ಯ ರೂವಾರಿ ಶ್ರೀಯುತ ಸುರೇಶ್ ಅವರ ಅಹ್ವಾನದ ಮೇರೆಗೆ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಪ್ರೌಢಶಾಲೆ ಮಕ್ಕಳಿಗೆ ಮಾಹಿತಿ ನೀಡಲಾಯಿತು
ಆ ಕಾರ್ಯಕ್ರಮ ದಲ್ಲಿ ಹೇಳಿದ ಕೆಲವು ವಿಚಾರಗಳು

ಇಂದಿನ ಕಾಲದಲ್ಲಿ ಪ್ರೌಢಶಾಲೆ ದಾಟಿ ಪದವಿ ಪೂರ್ವ ಶಿಕ್ಷಣಕ್ಕೆ ಅದರ ನಂತರ ಪದವಿ ಶಿಕ್ಷಣಕ್ಕೆ ಹೋದಾಗ ಕೆಲವು ಮಕ್ಕಳ ಮನಸ್ಥಿತಿ ಶಿಕ್ಷಣ ದಿಂದ ಬೇರೆಕಡೆ ತಿರುಗಿ ಪ್ರೀತಿ ಪ್ರೇಮ ಅಂತ ದಾರಿ ತಪ್ಪಿ ತಮ್ಮ ಭವಿಷ್ಯ ಹಾಳುಮಾಡಿಕೊಳ್ಳುತ್ತಾರೆ ಹಾಗು ಬೀಡಿ ಸಿಗರೇಟ್ ಇಂದ ಪ್ರಾರಂಭವಾಗಿ ಬಿಯರ್ ಬ್ರಾಂಡಿ ಸರಾಯಿ ಇಂದ ಗಾಂಜಾ ನಂತರ ಬೇರೆ ಬೇರೆ ಅಮಲು ಪದಾರ್ಥದ ದಾಸರಾಗಿ ತಮ್ಮ ಜೀವನ ಹಾಳುಮಾಡಿಕೊಳ್ಳುತ್ತಾರೆ
ಮಕ್ಕಳು ಪ್ರಾರ್ಥಮಿಕ ಶಾಲೆಗೆ ಬರವುದು ವಿದ್ಯಾಭ್ಯಾಸ ಕ್ಕೆ ಮಾಧ್ಯಮಿಕ ಶಾಲೆ ಪ್ರೌಢ ಶಾಲೆಗೆ ಬರವುದು ವಿದ್ಯಾಭ್ಯಾಸಕ್ಕೆ ಹಾಗೆ PUC ಹಾಗು ಪದವಿ ಕಾಲೇಜ್ ಗೆ ಹೋಗುವುದು ಸಹ ವಿದ್ಯಾಭ್ಯಾಸಕ್ಕೆ ಹೊರತು ಕಾಲೇಜು ವದುವರ ಅನ್ವೇಷಣೆ ಮಾಡುವ, ಪ್ರೀತಿ ಪ್ರೇಮದ ಮದುವೆ ಕೇಂದ್ರ ವಲ್ಲ. ಅದು ಶಿಕ್ಷಣ ಕೇಂದ್ರ ಅಲ್ಲಿ ವಿದ್ಯಾರ್ಜನೆ ಆಗಬೇಕು ಹೊರತು ಉದ್ದೇಶದಿಂದ ಮಕ್ಕಳು ವಿಮುಖರಾಗಬಾರದು
ತಮ್ಮ ತಂದೆ ತಾಯಿಗೆ ಹೇಗೆ ಅವರ ಅಪ್ಪ ಅಮ್ಮ ಕುಟುಂಬ ಮದುವೆ ಮಾಡಿದರೂ ಹೇಗೆ ತಮ್ಮ ಅಜ್ಜ ಅಜ್ಜಿಯರಿಗೆ ಅವರ ಕಾಲದಲ್ಲಿ ಅವರ ಅಪ್ಪ ಅಮ್ಮಹಾಗು ಕುಟುಂಬ ಸೇರಿ ಮದುವೆ ಮಾಡಿದರೂ ಹಾಗೆ ನಿಮಗೂ ಮದುವೆ ಆಗುವ ಕಾಲಕ್ಕೆ ಮದುವೆ ಮಾಡುತ್ತಾರೆ ಹಾಗಾಗಿ ಅದರ ಬಗ್ಗೆ ಯೋಚನೆ ಮಾಡದೆ ಉದ್ದೇಶದ ವಿದ್ಯಾರ್ಜನೆಗೆ ಮಾತ್ರ ತಮ್ಮ ಮನಸ್ಸನ್ನು ಕೇಂದ್ರೀಕರಿಸಬೇಕು
ಹಾಗೆ ಕೆಲವು ಹುಡುಗರಿಗೆ ಹುಡುಗಿಯರು ಆಟದ ವಸ್ತು ತರ ಅವರ ಜೀವನದಲ್ಲಿ ಆಟ ಆಡುತ್ತಾರೆ ಇದರ ದುಷ್ಪರಿಣಾಮ ಬೀಳುವುದು ಹೆಣ್ಣುಮಕ್ಕಳ ಮೇಲೆ, ಅದೆ ರೀತಿ ತಮ್ಮ ಮನೆ ಹೆಣ್ಣುಮಕ್ಕಳ ಜೀವನ ದ ಜೊತೆ ಈ ರೀತಿ ಬೇರೆ ಗಂಡು ಮಕ್ಕಳು ಆಟವಾಡಿದರೆ ಸಹಿಸೋದಿಲ್ಲವೋ ಅದೆ ರೀತಿ ಬೇರೆ ಹೆಣ್ಣುಮಕ್ಕಳ ಜೀವನದ ಜೊತೆ ಯಾವ ಹುಡುಗರು ಆಟ ಆಡಬಾರದು
ಇನ್ನು ಮಾದಕ ಪದಾರ್ಥ ಗಳ ಬಗ್ಗೆ ಕುತೂಹಲ ಹಾಗು ಸಿನಿಮಾ ದಲ್ಲಿ ತೋರಿಸುವ ರೀತಿಯಲ್ಲಿ ಅನುಸರಿಸಲು ಹೋಗಿ ಬೀಡಿ ಸಿಗರೇಟ್ ಇಂದ ಪ್ರಾರಂಭವಾಗಿ ಗಾಂಜಾ ಇನ್ನಿತೀರಾ ಡ್ರಗ್ಸ್ ಚಟಕ್ಕೆ ಬಲಿಯಾಗಿ, ಬಿಯರ್ ಬ್ರಾಂಡಿ ಇಂದ ಪ್ರಾರಂಭ ವಾಗಿ ಅದರ ಚಟಕ್ಕೆ ಬಿದ್ದು ತಮ್ಮ ಜೀವನ ಹಾಗು ತಮ್ಮನ್ನು ನಂಬಿದವರ ಜೀವನ ಹಾಳುಮಾಡಬಾರದು
ಹಾಗೆ ಮೊಬೈಲ್ ಬಳಕೆಯನ್ನು ಅನ್ಯ ಉದ್ದೇಶಕ್ಕೆ ಬಳಸಬಾರದು
ಬೈಕ್ ಕಾರ್ ನ್ನು DL ಇಲ್ಲದೆ ಓಡಿಸಬಾರದು, ಹಾಗೆ ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನ ಓಡಿಸಬಾರದು
ರಸ್ತೆಯಲ್ಲಿ ನಡೆಯುವಾಗ ನಮ್ಮ ಬಲಭಾಗದಲ್ಲಿ ನಡೆಯಬೇಕು, ಎಡ ಭಾಗದಲ್ಲಿ ವಾಹನ ಸಂಚಾರಕ್ಕೆ ಮಾತ್ರ ಕಾನೂನು ಇರುವುದು, ಪಾದ ಚಾರಿಗಳು ಬಲಭಾಗದಲ್ಲಿ ನಡೆಯಬೇಕು, ಇದರಿಂದ ಮುಂದುಗಡೆ ಬರುವ ವಾಹನ ಕಣ್ಣಿನ ದೃಷ್ಟಿಯಲ್ಲಿ ಕಾಣುವುದರಿಂದ ಚಾಲಕರ ನಿರ್ಲಕ್ಷ ದಿಂದ ಆಗುವ ಸಂಭವನೀಯ ಅಪಘಾತ ದಿಂದ ಪಾರಾಗಬಹುದು, ಎಡಭಾಗದಲ್ಲಿ ಬೆನ್ನ ಹಿಂದೆ ಬರುವ ವಾಹನ ಕಾಣದೆ ಕೆಲವೊಮ್ಮೆ ಚಾಲಕರ ನಿರ್ಲಕ್ಷ ದಿಂದ ಆಗುವ ಅಪಘಾತಕ್ಕೆ ತುತ್ತಾಗಬೇಕಾಗುತ್ತದೆ ಅನ್ನುವ ವಿಚಾರ ತಿಳಿಸಲಾಯಿತು
ಹೀಗೆ ನನಗೆ ತಿಳಿದ ಹಲವಾರು ವಿಚಾರಗಳನ್ನು ದೇಶದ ಮುಂದಿನ ಪೀಳಿಗೆಗೆ ತಿಳಿಸಲಾಯಿತು
ಈ ಸಂದರ್ಭದಲ್ಲಿ ರಾಷ್ಟ್ರಸೇವಿಕ ಸಮಿತಿ ,ಸಕಲೇಶಪುರ ತಾಲೂಕು,ಸಂಪರ್ಕ ಪ್ರಮುಖ್ ಮೇಘನಾ ನವೀನ್, ದೇವಾಲದಕೆರೆ ಗ್ರಾಮ ಪಂಚಾಯತ್ ಅಧ್ಯಕ್ಷ ರಾದ ಕಮಲಮ್ಮ ಶಾಲೆಯ ಶಿಕ್ಷಕರು ಮುಖ್ಯ ಉಪಾಧ್ಯಾಯರು. ಮಕ್ಕಳು ಉಪಸ್ಥಿತರಿದ್ದರು

✍️ ಅವರೇಕಾಡು ಪೃಥ್ವಿ

About Author

Leave a Reply

Your email address will not be published. Required fields are marked *

You may have missed