लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

” ಸ್ವ ಗ್ರಾಮದಲ್ಲಿ ಸಾಧಕನಿಗೆ ಸನ್ಮಾನ”💐💐💐💐💐💐💐

ಇತ್ತೀಚಿಗೆ ನಡೆದ ಕನ್ನಡ ವಿಶ್ವವಿದ್ಯಾಲಯದ 34ನೇ ನುಡಿ ಹಬ್ಬದಂದು ಸಮಾಜ ವಿಜ್ಞಾನ ನಿಕಾಯದ ಚರಿತ್ರೆ ವಿಭಾಗದಲ್ಲಿ ಪ್ರೊ. ಸುರೇಶ ರೈ ಕೆ. ರವರ ಮಾರ್ಗದರ್ಶನದಲ್ಲಿ
” ಚಿಕ್ಕಮಗಳೂರು ಜಿಲ್ಲೆಯ ದಲಿತ ಚಳುವಳಿ :ಸಮಕಾಲೀನ ಅಧ್ಯಯನ” ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ
ಕರ್ನಾಟಕ ಸರ್ಕಾರದ ಘನವೆತ್ತ ರಾಜ್ಯಪಾಲರಿಂದ ದಿನಾಂಕ.24.02.2026 ರಂದು ” ಡಾಕ್ಟರ್ ಆಫ್ ಫಿಲಾಸಫಿ” ಪದವಿಯನ್ನು ಪಡೆದ ಡಾ. ಹರೀಶ್ ನಲ್ಕೆ ಅವರಿಗೆ ,
ಸ್ವ ಗ್ರಾಮದಲ್ಲಿ ಯಾವುದೇ ಪ್ರಚಾರವಿಲ್ಲದೆ, ಆಡಂಬರವಿಲ್ಲದೆ, ಅಂತರಾಳದಿಂದ ಸಕಲೇಶಪುರ ತಾಲ್ಲೂಕು, ಮೂಡಿಗೆರೆ ತಾಲ್ಲೂಕು, ಬೇಲೂರು ತಾಲ್ಲೂಕುಗಳ ಗಡಿ ಪ್ರದೇಶದಲ್ಲಿ ತ್ರಿಕೋನ ಆಕಾರದಲ್ಲಿರುವ ನಲಿಕೆ ಗ್ರಾಮದಲ್ಲಿ ಜಾತಿ, ಧರ್ಮ ಲಿಂಗ ತಾರತಮ್ಯವಿಲ್ಲದೆ ದಲಿತರನ್ನು ಹೊರತುಪಡಿಸಿದರೆ ಬಹುಸಂಖ್ಯಾತ ಜೈನ ಧರ್ಮಿಯರೇ ಕೂಡಿರುವ. ಗ್ರಾಮದಲ್ಲಿ ಜಾತಿ,ಧರ್ಮ ಮರೆತು ಎಲ್ಲರೂ ಒಂದಾಗಿ ದಿನಾಂಕ 10.03.2026ನೇ ಮಂಗಳವಾರ , ನಲಿಕೆ ಗ್ರಾಮಸ್ಥರೇ ದೇಣಿಗೆ ಹಾಕಿ ಯಾರ ಸಹಾಯವೂ ಇಲ್ಲದೆ ಸ್ವಾಭಿಮಾನದಿಂದ ಸ್ವತಹ ಗ್ರಾಮಸ್ಥರೇ ಕೆಲಸ ಕಾರ್ಯಗಳನ್ನು ನಿರ್ವಹಿಸಿ ಗ್ರಾಮದ ಹೃದಯ ಭಾಗದಲ್ಲಿ ನಿರ್ಮಿಸಿರುವ ಡಾ. ಬಿ.ಆರ್ ಅಂಬೇಡ್ಕರ್ ರವರ ಸರ್ಕಲ್ ನಲ್ಲಿ ಡಾ. ಬಿಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿ, ಪದವಿದರ ಡಾ. ಹರೀಶ್ ನಲ್ಕೆ ರವರನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಶ್ರೀಮತಿ ಶಾಲಿನಿ ಲೇಟ್ ರಮೇಶ್ ರವರು ಮಾತನಾಡುತ್ತ ಇಂತಹ ಚಿಕ್ಕ ಕುಗ್ರಾಮದಲ್ಲಿ ಜನಿಸಿದ ಇವರು ಬಡತನದ ಬೇಗುದಿಯಲ್ಲಿ ಅನೇಕ ಏಳುಬೀಳುಗಳನ್ನು ದಾಟಿ ಪದವಿಯಲ್ಲಿ ಡಿಸ್ಟಿಂಕ್ಷನ್ ಪಡೆದು ತದ ನಂತರದಲ್ಲಿ ಕುವೆಂಪು ವಿಶ್ವವಿದ್ಯಾಲಯದ ಕ್ಯಾಂಪಸ್ ನ ಚರಿತ್ರೆ ವಿಭಾಗದಲ್ಲಿ ಪ್ರಥಮ ದರ್ಜೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಮುಗಿಸಿ, ಸುಮಾರು ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿ ತದನಂತರ ಕನ್ನಡ ವಿಶ್ವವಿದ್ಯಾಲಯದಲ್ಲಿ ಆರು ವರ್ಷಗಳ ಕಾಲ ನಿರಂತರವಾಗಿ ಅಧ್ಯಯನ ಮಾಡಿ ಪಿ.ಹೆಚ್ ಡಿ ಪದವಿ ಗಳಿಸಿರುವುದು ನಲ್ಕೆ ಗ್ರಾಮಕ್ಕೆ ಸಂದ ದೊಡ್ಡ ಗೌರವವಾಗಿದೆ. ಇಂದಿನ ಪೀಳಿಗೆ ಪುಸ್ತಕಗಳನ್ನು ಬಿಟ್ಟು ಮೊಬೈಲ್ ಗಿಳಿಗೆ ಬಿದ್ದು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಪ್ರತಿಯೊಬ್ಬ ವಿದ್ಯಾರ್ಥಿಯು ಡಾ .ಹರೀಶ್ ರವರ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕೆಂದು ಹೇಳಿದರಲ್ಲದೆ, ಇಂತಹ ಹತ್ತಾರು ಪದವಿಗಳು ನಮ್ಮ ಗ್ರಾಮಕ್ಕೆ ಬರುವಂತಾಗಲಿ ಆ ಮೂಲಕ ಅಂಬೇಡ್ಕರ್ ಆಶಯಗಳನ್ನು ಈಡೇರಿಸುವಂತಾಗಬೇಕು. ಅದಕ್ಕಾಗಿ ಇಂದಿನಿಂದಲೇ ವಿದ್ಯಾರ್ಥಿ ಯುವಜನತೆ ಶ್ರದ್ಧೆಯಿಂದ ನಿರಂತರವಾಗಿ ಅಧ್ಯಯನ ಮಾಡಿ ಉನ್ನತ ಶಿಕ್ಷಣವನ್ನು ಪಡೆಯಬೇಕೆಂದು ಕಿವಿ ಮಾತು ಹೇಳಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಸಿದ್ದಪ್ಪಗೌಡ, ಅಶ್ವಥ್, ಮಾಣಿಕ್ ರಾಜ್, ಮೋಹನ್ ಕುಮಾರ್, ಜಗದೀಶ್ , ಶೇಖರ್, ಸೂರಪ್ಪ, ಬಸವರಾಜ್, ಸುರೇಂದ್ರ ಕುಮಾರ್, ಲಕ್ಷ್ಮಣ್, ವಸಂತ್ ಕುಮಾರ್, ಮಹೇಂದ್ರ, ಕುಮಾರ್, ಲಿಖಿತ್, ಲೋಕೇಶ್, ಮಾಲಾ , ತೀರ್ಥ, ಶೋಭಾ , ನಾಗರತ್ನ, ಶೋಭಾ, ಪ್ರೀತಿ, ಅಂಕಿತ, ಸುಚಿತ್ರ, ರೂಪ ಇನ್ನೂ ಮುಂತಾದವರಿದ್ದರು.
ಸೋಮಶೇಖರ್ ನಲ್ಕೆ ರವರು ಕಾರ್ಯಕ್ರಮವನ್ನು ಸಂಯೋಜಿಸಿ ಸಂಘಟಿಸಿದರೆ,
ಚಂದ್ರು ನಲಿಕೆ ರವರು ಸ್ವಾಗತಿಸಿ, ಅಚ್ಚುಕಟ್ಟಾಗಿ ನಿರೂಪಿಸಿದರು.

About Author

Leave a Reply

Your email address will not be published. Required fields are marked *

You may have missed