ಕರ್ನಾಟಕ ರಕ್ಷಣಾ ವೇದಿಕೆ ಹೋಬಳಿ ಕಾರ್ಯಕಾರಣಿ ಸಭೆ….
1 min read
ಕರ್ನಾಟಕ ರಕ್ಷಣಾ ವೇದಿಕೆ ಹೋಬಳಿ ಕಾರ್ಯಕಾರಣಿ ಸಭೆ
ಆಲ್ದೂರು: ಪಟ್ಟಣದ ಸಂತೆ ಮೈದಾನ ವಾರ್ಡಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಹೋಬಳಿ ಘಟಕದ ಕಾರ್ಯಕಾರಣಿ ಸಭೆ ನಡೆಯಿತು.
ಸಭೆಯಲ್ಲಿ ಕರವೇ ಘಟಕದ ಬಲ ಸಂವರ್ಧನೆಗಾಗಿ ನೂತನ ಕಾರ್ಯಕರ್ತರ ಸೇರ್ಪಡೆ, ಭವಿಷ್ಯದ ದೃಷ್ಟಿಯಲ್ಲಿ ಕರವೇಯನ್ನು ಬಲಪಡಿಸಲು ಕೈಗೊಳ್ಳಬೇಕಾದ ಕ್ರಮಗಳು ಮತ್ತು ಆಲ್ದೂರು ಪಟ್ಟಣದಲ್ಲಿ ಆರಂಭವಾಗಿ ಸ್ಥಗಿತಗೊಂಡಿರುವ ಆಧಾರ್ ಕೇಂದ್ರವನ್ನು ಅಂಚೆ ಕಚೇರಿಯಲ್ಲಿ ತೆರೆಯುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವುದು ಮತ್ತು ಪಂಚಾಯಿತಿ ವತಿಯಿಂದ ಕಸದ ನಿರ್ವಹಣೆ ಸಮರ್ಪಕವಾಗಿಲ್ಲ ಕಸದ ವಾಹನ ವಾರ್ಡ್ಗಳಿಗೆ ಕಸ ಸಂಗ್ರಹಿಸಲು ಬರುವಾಗ ದಾರಿಯಲ್ಲಿ ಸ್ಪೀಕರ್ ಮೂಲಕ ಶಬ್ದವನ್ನು ಮಾಡದೆ ಬರುತ್ತಿದ್ದು ಇದರಿಂದ ಕಸವನ್ನು ವಾಹನಕ್ಕೆ ನಿವಾಸಿಗಳು ತಂದು ಹಾಕದೆ ಸಾರ್ವಜನಿಕ ಸ್ಥಳಗಳಲ್ಲಿ ಸುರಿಯುತ್ತಿದ್ದು, ಇದರ ಕುರಿತು ಅಗತ್ಯ ಕ್ರಮ ಕೈಗೊಳ್ಳುವಂತೆ ಪಂಚಾಯಿತಿಗೆ ಮನವಿ ಮೂಲಕ ಮಾಹಿತಿ ಸಲ್ಲಿಸುವುದು, ಸಾಮಾಜಿಕ ಜಾಲತಾಣದಲ್ಲಿ ಚಟುವಟಿಕೆಯಿಂದ ಇದ್ದು ಸಾರ್ವಜನಿಕ ಸಮಸ್ಯೆಗಳನ್ನು ಅಧಿಕಾರಿಗಳು ಜನಪ್ರತಿನಿಧಿಗಳು ತಲುಪಿಸಲು ಚಿಂತನೆ ನಡೆಸಲಾಯಿತು. ಆರ್ಟಿಐ ಮುಖಾಂತರ ಸರ್ಕಾರದ ಯೋಜನೆ ಕುರಿತಂತೆ ಸಮಗ್ರ ಮಾಹಿತಿ ಪಡೆಯುವುದು ವಿಷಯಗಳ ಕುರಿತು ಚರ್ಚಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ತಾಲ್ಲೂಕು ಅಧ್ಯಕ್ಷ ಮನೋಜ್ ಶೆಟ್ಟಿ ವಹಿಸಿದ್ದರು. ಹೋಬಳಿ ಅಧ್ಯಕ್ಷ ಮಹಮ್ಮದ್ ಅಲಿ ಸಭೆಯ ನೇತೃತ್ವ ವಹಿಸಿದ್ದರು. ತಾಲ್ಲೂಕು ಕಾರ್ಯದರ್ಶಿ ಮದನ್, ಹೋಬಳಿ ಕಾರ್ಯದರ್ಶಿ ಶ್ರೀಧರ್, ಕಾರ್ಯಕರ್ತರಾದ ರವಿ, ಅಬ್ದುಲ್ ರಹಮಾನ್, ಉಮೇಶ್, ಸತೀಶ್, ಮಹಿಳಾ ಘಟಕದ ಅಧ್ಯಕ್ಷೆ ಸರೋಜಾ ಭಾಗವಹಿಸಿದ್ದರು.
ವರದಿ..
ಮಗ.

