लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಎಂ ಕೆ ಪ್ರಾಣೇಶ್ ಅವರ ವಿಧಾನ ಪರಿಷತ್ತು ಸದಸ್ಯತ್ವ ಕುರಿತು ಇಂದು ಸುಪ್ರೀಂ ಕೋರ್ಟ್ ನಲ್ಲಿ ನಿರ್ಣಾಯಕ ವಿಚಾರಣೆ.

1 min read

ಅವಿನ್ ಟಿವಿ ಸುದ್ದಿಜಾಲ ✍️:
ಎಂ ಕೆ ಪ್ರಾಣೇಶ್ ಅವರ ವಿಧಾನ ಪರಿಷತ್ತು ಸದಸ್ಯತ್ವ ಕುರಿತು ಇಂದು ಸುಪ್ರೀಂ ಕೋರ್ಟ್ ನಲ್ಲಿ ನಿರ್ಣಾಯಕ ವಿಚಾರಣೆ.

ಚಿಕ್ಕಮಗಳೂರು ಮಾ ೧೧:
ಜಿಲ್ಲೆಯ
ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ
ಆಯ್ಕೆಯಾಗಿರುವ ವಿಧಾನ ಪರಿಷತ್ತು ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಅವರ ವಿರುದ್ಧ
ಪರಾಜಿತ ಅಭ್ಯರ್ಥಿ ಗಾಯಿತ್ರಿ ಶಾಂತೇಗೌಡ ಅವರು ಸಲ್ಲಿಸಿರುವ ಚುನಾವಣಾ ತಕರಾರು ಅರ್ಜಿಯ ವಿಚಾರಣೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರ ಪೀಠದ ಮುಂದೆ ಇಂದು ನಿರ್ಣಾಯಕ ವಿಚಾರಣೆ ನಡೆಯಲಿದೆ.

ನಾಮ ನಿರ್ದೇಶನ ಸದಸ್ಯರಿಗೆ
ಮತದಾನದ ಹಕ್ಕು ಇಲ್ಲ ಎಂದು
ಗಾಯಿತ್ರಿ ಶಾಂತೇಗೌಡರ ವಾದವನ್ನು ಎತ್ತಿಹಿಡಿದ ರಾಜ್ಯ ಹೈಕೋರ್ಟ್ ತೀರ್ಪನ್ನು
ಎಂ.ಕೆ.ಪ್ರಾಣೇಶ್ ಅವರು ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸಿದ್ದರು,ಸಾಕಷ್ಟು ಬಾರಿ ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ಮುಂದೂಡಿದ್ದರಿಂದ ತೀರ್ಪು ಹೊರ ಬರುವುದು ಇದುವರೆಗೂ ಸಾಧ್ಯವಾಗಿಲ್ಲ.

ನೆನ್ನೆ ನಡೆದ
ವಿಚಾರಣೆಯಲ್ಲಿ ಮತ್ತೆ ಕಾಲಾವಕಾಶ ಕೇಳಿದ ಪ್ರಾಣೇಶ್
ಅವರ ವಕೀಲರ ವಾದವನ್ನು
ಒಪ್ಪದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರ ನೇತೃತ್ವದ ಪೀಠ ವಿಚಾರಣೆಯನ್ನು ಇಂದು ನಡೆಸಲು ಆದೇಶಿಸಿದ್ದಾರೆ.

ಇಂದಿನ ವಿಚಾರಣೆಯಲ್ಲಿ
ವಿಧಾನ ಪರಿಷತ್ತು ಉಪ ಸಭಾಪತಿಗಳಾದ ಎಂ.ಕೆ.ಪ್ರಾಣೇಶ್ ಅವರ ವಿಧಾನಪರಿಷತ್ತು ಸದಸ್ಯತ್ವ ಸಿಂಧು ಅಥವಾ ಅಸಿಂಧು ಕುರಿತು ಬಹುತೇಕ ನಿರ್ಧಾರವಾಗಬಹುದು ಎನ್ನಲಾಗಿದೆ.

2021ರ ಡಿಸೆಂಬರ್ ನಲ್ಲಿ
ಚಿಕ್ಕಮಗಳೂರು ವಿಧಾನ ಪರಿಷತ್ ಕ್ಷೇತ್ರದಿಂದ ವಿಧಾನ ಪರಿಷತ್ ಕ್ಷೇತ್ರಕ್ಕೆ ನಡೆದ ಚುನಾವಣೆಯ ಮತ ಎಣಿಕ 2021ರ ಡಿಸೆಂಬರ್ 14 ರಂದು
ನಡೆದಿತ್ತು.ಚಲಾವಣೆಯಾದ
2,410 ಮತಗಳ ಪೈಕಿ 2,371 ಮತಗಳು ಸಿಂಧುವಾಗಿದ್ದವು.
ಅವುಗಳ ಪೈಕಿ ಬಿಜೆಪಿಯ
ಎಂ.ಕೆ.ಪ್ರಾಣೇಶ್ 1,188 ಮತಗಳನ್ನು ಪಡೆದಿದ್ದರು.
ಕಾಂಗ್ರೆಸ್‌ನ ಎ.ವಿ.ಗಾಯಿತ್ರಿ ಶಾಂತೇಗೌಡರು 1,182 ಮತಗಳನ್ನು ಗಳಿಸಿದ್ದರು.
ಪ್ರಾಣೇಶ್ 6 ಮತಗಳ ಅಂತರದಿಂದ ಗೆಲುವು ಸಾಧಿಸಿದರು.

ಶೃಂಗೇರಿ, ನರಸಿಂಹರಾಜಪುರ,
ಕೊಪ್ಪ, ಮೂಡಿಗೆರೆ ಪಟ್ಟಣ ಪಂಚಾಯತಿಗಳ ಒಟ್ಟು 12
ನಾಮ ನಿರ್ದೇಶಿತ ಸದಸ್ಯರು ಮತದಾನ ಮಾಡಿದ್ದರು.
ಅವರಿಗೆ ಮತದಾನ ಮಾಡಲು ಅವಕಾಶ ಇಲ್ಲ ಎಂದು ಗಾಯಿತ್ರಿ ಶಾಂತೇಗೌಡ ಅವರು ಹೈಕೋರ್ಟ್ ಮೊರೆ ಹೋಗಿದ್ದರು.

ನಾಮ ನಿರ್ದೇಶಿತ ಸದಸ್ಯರಿಗೆ
ಮತದಾನದ ಹಕ್ಕು ಇಲ್ಲ ಎಂದು ಈ ಹಿಂದೆ ರಾಜ್ಯ ಉಚ್ಚ ನ್ಯಾಯಾಲಯ ತೀರ್ಪು ನೀಡಿತ್ತು. ಈ ತೀರ್ಪನ್ನು ಪ್ರಶ್ನಿಸಿ ಪ್ರಾಣೇಶ್ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು,
ಪ್ರಾಣೇಶ್ ಅವರ ಮೇಲ್ಮನವಿಯ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್,12 ಮತಗಳನ್ನು ಪ್ರತ್ಯೇಕವಾಗಿ ಇರಿಸಿ ಮರು ಎಣಿಕೆ ಮಾಡಿ
ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ
ನೀಡಿತ್ತು.

ಮರು ಮತ ಎಣಿಕೆಯ
ವರದಿಯನ್ನು ಚಿಕ್ಕಮಗಳೂರು ಜಿಲ್ಲಾಧಿಕಾರಿಯವರು 2025ರ
ಮಾರ್ಚ್‌ನಲ್ಲಿ ಸಲ್ಲಿಸಿದ್ದರು.

ಇಂದು ನಡೆಯಲಿರುವ ವಿಚಾರಣೆ ವಿಧಾನ ಪರಿಷತ್ತು
ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಅವರ ವಿಧಾನಪರಿಷತ್ತು ಸದಸ್ಯತ್ವವನ್ನು ಸುಪ್ರೀಂ ಕೋರ್ಟ್ ಯಾವ ರೀತಿ ಎತ್ತಿ ಹಿಡಿಯುತ್ತದೆ ಎಂಬ ಕುತೂಹಲ ಸಾರ್ವಜನಿಕರದ್ದಾಗಿದೆ.
••••••••••••••
ಡಿ ಎಂ ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ ….. ✍️
ಚಿಕ್ಕಮಗಳೂರು

About Author

Leave a Reply

Your email address will not be published. Required fields are marked *

You may have missed