लाइव कैलेंडर

March 2026
M T W T F S S
 1
2345678
9101112131415
16171819202122
23242526272829
3031  
09/03/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಊಟ ಬರೀ ಬಾಯಿಗಲ್ಲ… ಅಂದ್ರೆ ಬಾಯಿಗೆ ರುಚಿ ಅನ್ನಿಸಲಿ ಅಂತ ಹಾಕೋದಲ್ಲ,….

1 min read
  1. ಊಟ ಬರೀ ಬಾಯಿಗಲ್ಲ… ಅಂದ್ರೆ ಬಾಯಿಗೆ ರುಚಿ ಅನ್ನಿಸಲಿ ಅಂತ ಹಾಕೋದಲ್ಲ, ಬಾಯಿಯ ಮೂಲಕ ತಿನ್ನೋದೆ ಆದ್ರೂ ತಿನ್ನೋದು ಇಡೀ ದೇಹಕ್ಕೆ ಬೇಕಾದ ಪೋಷಣೆ, ಚೈತನ್ಯ, ಆರೋಗ್ಯ ಸಿಗಲಿ ಅಂತ.

ಮದುವೆ ಬರೀ 2 ಮೈಗಲ್ಲ. ಬರೀ 2 ಮನಸ್ಸಿಗೂ ಅಲ್ಲ… 2 ಕುಟುಂಬಕ್ಕೆ ಆಗೋದು.

ಅದೇ ರೀತಿ ಅಂದ ಕಣ್ಣಿಗಲ್ಲ…, ಕಣ್ಣು ಮುಚ್ಚಿದರೂ ಎಷ್ಟು ಚೆನ್ನಾಗಿದೆ ಅಂತ ಮನಸ್ಸಿಗೆ ಅನಿಸಬೇಕು.

ಮತ್ತೆ ಈ ದೇಹ, ರೂಪ ಏನು?
#ದೇಹ ಅನ್ನೋದು ಒಂದು container ಅಷ್ಟೇ,
#ರೂಪ ಅನ್ನೋದು ಆ containerಗೆ ಒಂದು shape.
ಮನಸ್ಸು, ಗುಣ ಸ್ವಭಾವ, ಯೋಚನೆ, ಆದರ್ಶಗಳು, ಮಾಡೋ ಕೆಲಸ ಇವು ನಿಜವಾದ content.

ಆದ್ರೆ unfortunately ತುಂಬಾ ಜನ ಒಳಗಡೆ ಇರೋ ಹಾಲಿನ quality, speciality ತಿಳಿದು ತಗೊಳ್ಳೋ ಬದಲು ಬರೀ pack/bottle colour ನೋಡಿ ಇದು ಒಳ್ಳೇದು, ಇದು ಚೆನ್ನಾಗಿಲ್ಲ judge ಮಾಡ್ತಾರೆ.

ಹಾಗಾದ್ರೆ ದೇಹ ಏನೂ ಅಲ್ವಾ…?
ಯಾಕಲ್ಲ, ಈ ಜೀವ, ಈ ವ್ಯಕ್ತಿ ಯಾರು ಅನ್ನೋದನ್ನ ನೋಡಿ ಗುರುತಿಸೋಕೆ ದೇಹ, ಬೇರೆ ಬೇರೆ ರೂಪ ಇರೋದು.
ಅಂದ್ರೆ identify ಮಾಡೋಕೆ, ಅಷ್ಟೇ… Quality checking/ಅದನ್ನೇ ನೋಡಿ ಆ ವ್ಯಕ್ತಿ ಬಗ್ಗೆ judge ಮಾಡೋಕೆ ಅಲ್ಲ.

______________________________________________

ಒಬ್ಬಳು ಅಷ್ಟೇನು ಅಂದವಾಗಿಲ್ಲದ ಹುಡುಗಿ ಕೂಡಾ ಗಂಡ, ಮಕ್ಕಳಿಗೆ ಹೊತ್ತಿಗೆ ಸರಿ ಪ್ರೀತಿಯಿಂದ ರುಚಿಯಾಗಿ, ಆರೋಗ್ಯವಾದ ಅಡುಗೆ ಮಾಡಿ ಹಾಕಬಹುದು… ಯಾಕಂದ್ರೆ ಅಕ್ಕಿ, ಬೇಳೆ, ತರಕಾರಿ ನೀನು ಚಂದ ಇಲ್ಲ, ನೀನು ಬೇಯಿಸಿದರೆ ನಾವು ಬೇಯಲ್ಲ ಅಂತ ಹೇಳಲ್ಲ.
ಒಬ್ಬ ಅಷ್ಟೇನೂ ಚಂದ ಇಲ್ಲದ ಗಂಡ ಕೂಡಾ ಹೆಂಡತಿಗೆ ಮೋಸ ಮಾಡದೇ ಇರಬಹುದು… ತನ್ನ ಸುಖಕ್ಕಿಂತ ಹೆಂಡತಿ ಮಕ್ಕಳ ಸುಖಕ್ಕಾಗಿ ಕಷ್ಟ ಪಡುವವನಾಗಿ ಇರಬಹುದು.

ಕಪ್ಪಗೆ, ದಪ್ಪಗೆ ಇದ್ದವರೂ ಗಂಡನ ಕಷ್ಟಕ್ಕೆ ಆಸರೆ ಆಗಬಹುದು… ಸೊಟ್ಟಗೆ, ಸಣ್ಣಗೆ ಇದ್ದವನೂ ಹೆಂಡತಿಯನ್ನ ದೇವತೆ ರೀತಿ ನೋಡಿಕೊಳ್ಳಬಹುದು.

ಚೆನ್ನಾಗಿ ಇರುವವರೆಲ್ಲ ಕೆಟ್ಟವರು ಅಂತ ಹೇಳ್ತಿಲ್ಲ…,
ಚೆನ್ನಾಗಿ ಇರುವವರು ಮಾತ್ರ ಒಳ್ಳೆಯವರಲ್ಲ ಅಂತಷ್ಟೇ ನಾನು ಹೇಳೋದು.

______________________________________________

ಮದುವೆ ಅಂತ ಬಂದಾಗ ಬರೀ ಚಂದ ನೋಡಿ ok ಮಾಡೋದು ಹೇಗಾಗುತ್ತೆ ಅಂದ್ರೆ ಪೇಟೆಯಲ್ಲಿ ಹೋಗ್ತಿದ್ದೆ… ಅಲ್ಲಿ paneer ನೋಡಿದೆ, ಬೆಳ್ಳಗೆ, soft ಆಗಿ ತುಂಬಾ ಚಂದ ಇತ್ತು… ಇದು ಬಿಟ್ಟು ಬೇರೇನೂ ಬೇಡ ಅಂತ ಜೇಬಲ್ಲಿರೋ ಅಷ್ಟೂ ದುಡ್ಡು ಕೊಟ್ಟು ತಂದೆ.

ತರೋದೇನೋ ತಂದೆ… ಮನೆಯಲ್ಲಿ ಯಾರಿಗೂ ಇಷ್ಟ ಇಲ್ಲ, ಅದನ್ನ ಮಾಡೋಕೆ ಬೇಕಾದ ಬೇರೆ ಎಲ್ಲಾ item ಇಲ್ಲ… ಇರೋದ್ರಲ್ಲೇ ಹೆಂಗೋ ಮಾಡಿದ್ರೆ ಕೆಟ್ಟದಾಗಿದೆ… ತಿಂದ ಮೇಲೆ ಗೊತ್ತಾಯ್ತು ನಂಗ್ ಪನೀರ್ ಅಂದ್ರೆ allergy ಅಂತ.

ತಂದ ಹಾಗೆ ಇದ್ದಿದ್ರೆ ವಾಪಸ್ ಕೊಡಬಹುದು ಆದ್ರೆ ಈಗ ಹಾಗೆ ಮಾಡೋಕೆ ಆಗಲ್ಲ, ತಂದ ತಪ್ಪಿಗೆ ಇಡೀ ದಿನ ಅದನ್ನೇ ತಿನ್ನೋಕು ಆಗಲ್ಲ… ಆಗ್ತಿಲ್ಲ ಅಂತ ಬಿಸಾಕೋಕು ಆಗಲ್ಲ.
ನಾನ್ ತಂದಿಲ್ಲ ಅಂದಿದ್ರೆ ಬೇರೆ ಯಾರೋ ಅದರ ಬಗ್ಗೆ ಗೊತ್ತಿರುವವರು, ಇಷ್ಟ ಪಡುವವರು, ರುಚಿಯಾಗಿ ಅಡುಗೆ ಮಾಡುವವರು ಮನೆಗೆ ತಗೊಂಡು ಹೋಗಿ ಎಲ್ಲರೂ ಇಷ್ಟ ಪಟ್ಟು ತಿಂತಾ ಇದ್ರು… ನಾನ್ ಹೇಗೆ ಎಸೀಲಿ ಅಂತಾನೂ ಅನ್ನಿಸುತ್ತೆ.

ಅದರ ಬಗ್ಗೆ + ನನ್ನ ಬಗ್ಗೆ + ನನ್ನ ಮನೆಯವರ ಗೊತ್ತಿಲ್ಲದೆ ಹಿಂದು ಮುಂದು ನೋಡದೆ ಬರೀ ಕಣ್ಣಿಗೆ ಸೇರ್ತು ಅಂತ ತರೋದು ತುಂಬಾ ತಪ್ಪಾಗುತ್ತೆ.

______________________________________________

ಎಳೆ ಮಕ್ಕಳು ಮಾತ್ರ wrapper ಆಸೆಗೆ ಇದೇ chocolate ಬೇಕು ಅಂತ ಕೇಳಬಹುದು… ಅದು ಮುಗ್ಧತೆ ಅನ್ಸತ್ತೆ. ಅದೇ ದೊಡ್ಡವರು ಹಂಗ್ ಮಾಡಿ ಮಂಗ ಆದ್ರೆ ಮೂರ್ಖತನ ಅಂತಾರೆ.

ಏನಿಲ್ಲ… Containerಗಿಂತ Content important n ಇಷ್ಟ ಆಯ್ತು ಅನ್ನೋದಕ್ಕಿಂತ ಅದು ನಮಗೆ + ನಾವು ಅದಕ್ಕೆ suit ಆಗ್ತೀವಾ ಅನ್ನೋದು important ಅಂತ ಹೇಳ್ದೆ.

ನಿದ್ದೆ ಮಾಡಿದ್ರೆ ಉದ್ದ ಆಗಲ್ಲ,
ಸ್ನಾನ ಮಾಡಿದ್ರೆ ಸಣ್ಣ ಆಗಲ್ಲ,
ಲವ್ವು ಪವ್ವು ನಮ್ಗೆ ಆಗ್ಬರಲ್ಲ 🙄

#. ರವಿಕುಮಾರ್. 🌹🌹. ಬೆಂಗಳೂರು. 🌹🌹🌹🌹 😜

About Author

Leave a Reply

Your email address will not be published. Required fields are marked *

You may have missed