ಫೆಬ್ರವರಿ 28 ರಿಂದ ಮಾರ್ಚ್ 1ರವರೆಗೆ,* ನಾವೆಲ್ಲ ವಿದ್ಯಾಭ್ಯಾಸ ಪಡೆದ ಚಿಕ್ಕಮಗಳೂರು ಜಿಲ್ಲೆಯ, ಮೂಡಿಗೆರೆ ತಾಲ್ಲೂಕಿನ *ಗೌಡಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸೇರೊಣ…
1 min read
*ಫೆಬ್ರವರಿ 28 ರಿಂದ ಮಾರ್ಚ್ 1ರವರೆಗೆ,*
ನಾವೆಲ್ಲ ವಿದ್ಯಾಭ್ಯಾಸ ಪಡೆದ ಚಿಕ್ಕಮಗಳೂರು ಜಿಲ್ಲೆಯ, ಮೂಡಿಗೆರೆ ತಾಲ್ಲೂಕಿನ
*ಗೌಡಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ
*
ಸುಣ್ಣ–ಬಣ್ಣ ಹಚ್ಚುವ ಸೇವಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಸರ್ಕಾರದ ಯಾವುದೇ ನೆರವಿಲ್ಲದೆ,
*ಗ್ರಾಮದ ಯುವಕರ ಸ್ವಯಂಪ್ರೇರಿತ* ಸಹಕಾರದಿಂದ
ಪ್ರತಿ ವರ್ಷ ನಿರಂತರವಾಗಿ ನಡೆಯುತ್ತಿರುವ ಈ ಸಮಾಜಮುಖಿ ಕಾರ್ಯ
ಈ ವರ್ಷವೂ ಯಶಸ್ವಿಯಾಗಿ ನಡೆಯಲಿದೆ.
*ಗ್ರಾಮದ ಹುಡುಗರು* ತಂಡ ಒಂದು ಸಣ್ಣ ಅರ್ಥಪೂರ್ಣ ಪ್ರಯತ್ನಕ್ಕೆ ಕೈ ಹಾಕಿದ್ದೇವೆ. ಮೌನವಾಗಿ ನಿಂತಿರುವ *ಸರ್ಕಾರಿ ಕನ್ನಡ ಶಾಲೆಗಳು* ಇಂದಿಗೂ ಮಕ್ಕಳ ಕನಸುಗಳನ್ನು ಕಾಯುತ್ತಿವೆ.
ಅವರ *ಕಣ್ಣುಗಳಲ್ಲಿ ಬೆಳಗಬೇಕಾದ ಜ್ಞಾನಜ್ಯೋತಿಗೆ* ದಾರಿ ತೋರಿಸುವ *ಹೊಣೆಗಾರಿಕೆ* ನಮ್ಮೆಲ್ಲರದು. ಈ ಭಾವನೆಯೊಂದಿಗೆ, ನಮ್ಮ *ಗ್ರಾಮದ ಯುವಶಕ್ತಿ ಕೈಜೋಡಿಸಿ ಸರ್ಕಾರಿ ಕನ್ನಡ ಶಾಲೆಗಳ ಪುನರುಜ್ಜೀವನಕ್ಕೆ* ಸಂಕಲ್ಪಬದ್ಧವಾಗಿದೆ.
ಕಳೆದ ವರ್ಷ *ಗೌಡಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ* ಆರಂಭಿಸಿದ ಈ ಪ್ರಯತ್ನ, ಇಂದು *ನಂಬಿಕೆ ಮತ್ತು ಫಲಿತಾಂಶಗಳಾಗಿವೆ.*
ಅದೇ ಉತ್ಸಾಹ ಮತ್ತು ಹೊಣೆಗಾರಿಕೆಯನ್ನು ಮುಂದುವರೆಸಿ, ಈ ವರ್ಷವೂ *ಸರ್ಕಾರಿ ಶಾಲೆಗಳ ಶೈಕ್ಷಣಿಕ ವಾತಾವರಣದ* ಸುಧಾರಣೆಗೆ ನಾವು ಮುಂದಾಗಿದ್ದೇವೆ.
ಈ ಸಾರ್ಥಕ ಪ್ರಯಾಣದಲ್ಲಿ ನಮ್ಮೊಂದಿಗೆ ಹೆಜ್ಜೆ ಹಾಕಿ, ಮಕ್ಕಳ ಭವಿಷ್ಯವನ್ನು ಕಟ್ಟುವ ಈ ಪವಿತ್ರ ಕಾರ್ಯಕ್ಕೆ ಕೈಜೋಡಿಸಿ.
🤝🙏

