लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಇನ್ನೂರು ರುಪಾಯಿಗೆ ಯಾರು ತಾನೇ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ? ಜನರು ಸಾಮಾನ್ಯವಾಗಿ ಪ್ರತಿಕ್ರಿಯಿಸುವ ಬಗೆ……

1 min read

ಅವಿನ್ ಟಿವಿ ಸುದ್ದಿಜಾಲ ✒️: ಇನ್ನೂರು ರುಪಾಯಿಗೆ ಯಾರು ತಾನೇ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ? ಜನರು ಸಾಮಾನ್ಯವಾಗಿ ಪ್ರತಿಕ್ರಿಯಿಸುವ ಬಗೆ.

ಬ್ಯಾಂಕ್ ನಲ್ಲಿ ಸಾವಿರಾರು ಕೋಟಿರೂ ಸಾಲ ಮಾಡಿ, ಸಾರ್ವಜನಿಕರ ದುಡ್ಡಿಗೆ ಮೋಸ ಮಾಡಿ ದೇಶ ಬಿಟ್ಟು ಸಾಗರದಾಚೆ ಹಾರಿ ಹೋದ ಮಹಾ ಕಳ್ಳರನ್ನು ಇಂದಿಗೂ ಹಿಡಿದು ಭಾರತಕ್ಕೆ ಮರಳಿ ಕರೆ ತರಲು ಸಾಧ್ಯವಾಗಿಲ್ಲ ,ಆದರೆ ಇಲ್ಲೊಬ್ಬ ಸಹೋದರಿ ಧರ್ಮಸ್ಥಳದ ಸಂಘಕ್ಕೆ ಸಾಲದ ಕಂತನ್ನು ಕಟ್ಟಲು ಕೂಡಿಟ್ಟ ಹಣದಲ್ಲಿ ಇನ್ನೂರು ರೂಪಾಯಿ ತನ್ನ ಗಂಡ ಕದ್ದ ಕಾರಣ ಕಡಿಮೆಯಾದ ಆ 200 ರೂ ಹಣವನ್ನು ಹೊಂದಿಸಲು ಸಾಧ್ಯವಾಗದೆ ಸ್ವಾಭಿಮಾನಕ್ಕೆ ಅಂಜಿ ಸಾವಿಗೆ ಶರಣಾದ ಸುದ್ದಿಯೊಂದು ನಮ್ಮ ಸಾಮಾಜಿಕ ಮತ್ತು ಆರ್ಥಿಕ ಬದುಕನ್ನು ಆತಂಕದಿಂದ ವಿಶ್ಲೇಷಿಸುತ್ತಿದೆ.

ಸಂಗ್ರಹಮಾಡಿ ತಂದ ಈ ಕೆಳಕಂಡ ಸುದ್ದಿಯು ಅವಿನ್ ಟಿವಿ ಸುದ್ದಿಜಾಲದ ಓದುಗರಿಗಾಗಿ 👇
•••••••••••••••••••••••••••••••
ಬೆಂಗಳೂರಿನಿಂದ 30 ಕಿ.ಮಿ ದೂರದಲ್ಲಿರುವ ನೆಲಮಂಗಲ ತಾಲೂಕಿನ ಬ್ಯಾಡರಹಳ್ಳಿ ಗ್ರಾಮದಲ್ಲಿ 200 ರುಪಾಯಿಗಾಗಿ ಇಬ್ಬರು ಮಕ್ಕಳ ತಾಯಿ ಆತ್ಮಹತ್ಯೆಗೆ ಶರಣಾಗಿರುವುದು ಮನಸ್ಸು ಕಲಕುವಂತೆ ಮಾಡುತ್ತದೆ. ಬರೀ ಇನ್ನೂರು ರೂಪಾಯಿಗೆ ಪ್ರಾಣ ಕಳೆದುಕೊಳ್ಳಬೇಕಿತ್ತಾ ಎಂಬ ಆತಂಕ, ಪ್ರಶ್ನೆಗಳು ಎಂಥವರ ಮನಸ್ಸಿನಲ್ಲೂ ಮೂಡುತ್ತವೆ.

ವಾಸ್ತವದಲ್ಲಿ ಬಡ ಜನರಿಗೆ, ಶ್ರಮಿಕ ವರ್ಗಕ್ಕೆ 50 ರುಪಾಯಿ ಕೂಡ ಅತ್ಯಮೂಲ್ಯ.

ಎರಡು ಮಕ್ಕಳ ತಾಯಿಯಾಗಿದ್ದ ಸುಮಾ ಗಂಡನಿಗೆ ಕಾಣದಂತೆ ಧರ್ಮಸ್ಥಳದ ಸ್ವಸಹಾಯ ಗುಂಪಿನ ಸಾಲದ ಕಂತಿಗಾಗಿ 1,300 ರುಪಾಯಿ ತೆಗೆದಿಟ್ಟಿರುತ್ತಾಳೆ.
ಅದರಲ್ಲಿ 200 ರುಪಾಯಿನ ಆಕೆಯ ಗಂಡ ಚಂದ್ರಶೇಖರ್ ತನ್ನ ಸ್ವಂತ ಖರ್ಚಿಗಾಗಿ ಖರ್ಚು ಮಾಡಿರುತ್ತಾನೆ.
ಸಾಲದ ಕಂತಿನಿಂದ 200 ರುಪಾಯಿ ಕಡಿಮೆಯಾಗಿರುವುದು ಆಕೆಯನ್ನು ಕಂಗಾಲು ಮಾಡುತ್ತದೆ. ಆ ಕಂತಿನಲ್ಲಿ ವಾಪಸು ಇಡಲು ಆಕೆಯ ಬಳಿ 200 ರುಪಾಯಿ ಇಲ್ಲ.
ಗಂಡನೊಂದಿಗೆ ಜಗಳವಾಗುತ್ತದೆ. ನೊಂದುಕೊಳ್ಳುತ್ತಾಳೆ.

ಬಡತನ ಯಾವ ಮಟ್ಟದ್ದೆಂದರೆ ಉದ್ವೇಗ, ನಿರಾಸೆಗೊಳಗಾದ ಮನಸ್ಸು ಒಂದು ಕ್ಷಣ ವಿವೇಕಶೂನ್ಯರನ್ನಾಗಿ ಮಾಡುತ್ತದೆ.
ಸಾಲ ತೀರಿಸಲು ಇಟ್ಟ ಹಣ 200 ರುಪಾಯಿಯನ್ನು ಕೇಳುತ್ತದೆ.
ಎರಡು ಮಕ್ಕಳ ತಾಯಿ ಅನ್ಯಾಯವಾಗಿ ನೇಣಿಗೆ ಕೊರಳೊಡ್ಡುವಂತೆ ಮಾಡುತ್ತದೆ.

ನಮ್ಮಂಥವರು 200 ರುಪಾಯಿಗೆ ಆತ್ಮಹತ್ಯೆ ಮಾಡಿಕೊಂಡ್ಳಾ ? ಎಂದು ಹುಬ್ಬೇರಿಸುತ್ತೇವೆ. ಆಶ್ಚರ್ಯಪಡುತ್ತೇವೆ.

ಮಹಿಳೆಯರು ಸಾಮಾನ್ಯವಾಗಿ ಸಾಲದ ವಿಚಾರದಲ್ಲಿ ತುಂಬಾ ಸೂಕ್ಷ್ಮ. ಸಾಲದ ಹಣವನ್ನು ಬೇಗ ತೀರಿಸಬೇಕೆನ್ನುವ ಆತಂಕ ಮಹಿಳೆಯರಿಗೆ ಜಾಸ್ತಿ. ಸ್ವಸಹಾಯ ಗುಂಪುಗಳು ಬಡವರ ಕಷ್ಟದ ಕಾಲಕ್ಕೆ ಕೊಡುವ ಸಾಲದ ಹಣದ ಮೇಲೆ ಮಹಿಳೆಯರು ಕೃತಜ್ಞತಾಭಾವದ ಜೊತೆಗೆ ಕಷ್ಟದ ಸಮಯದಲ್ಲಿ ಸಹಾಯಕ್ಕೆ ಬರುವ ಅವಕಾಶಗಳನ್ನು ಕಳೆದುಕೊಳ್ಳಲು ತಯಾರಿರುವುದಿಲ್ಲ.

ಸಾಲಗಾರರ ಹೆಸರುಗಳನ್ನು ಗೋಡೆಗೆ ಅಂಟಾಕಿ ರೈತರ ಆತ್ನಹತ್ಯೆಗೆ ಕಾರಣವಾದ ನಿದರ್ಶನಗಳು ಬೇಕಾದಷ್ಟು ಇರುವ ಕಾರಣ ಕೂಡ.

ಭಾಗ್ಯಲಕ್ಮೀ ಯೋಜನೆಯ ಹಣ ಬಂದಿಲ್ಲ ಎಂದು ನೋವಿನಿಂದ ಹೇಳಿಕೊಳ್ಳುವ ತಾಯಂದಿರ ಕಣ್ಣಲ್ಲಿ ನೀರು, ಮುಖದಲ್ಲಿ ಆತಂಕ ಮನೆ ಮಾಡಿರುವುದನ್ನು ಆಗಾಗ ಗಮನಿಸುತ್ತೇವೆ.

ದಿನಗೂಲಿ ಮಾಡುವವರಿಗೆ ಆಯಾ ದಿನದ ಕೂಲಿ ಹಣ ಅಲ್ಲಲ್ಲಿಗೆ ಆಗಿಬಿಡುತ್ತದೆ. ಹಣ ಉಳಿತಾಯಕ್ಕೆ ಅವಕಾಶವಿಲ್ಲ.
ಎರಡು ಹೊತ್ತಿನ ಊಟ/ ಗಂಜಿಯೋ ಬಡವನಿಗೆ ಇಷ್ಟೇ ದಕ್ಕುತ್ತದೆ. ಬೆಂಗಳೂರಿನ ರಸ್ತೆಬದಿಯಲ್ಲಿ ಮಧ್ಯಾಹ್ನ ಸಿಗುವ ಬಡವನ ಊಟಕ್ಕೆ ಏನಿಲ್ಲವೆಂದರೂ 50 ರಿಂದ 60 ರೂ. ಆಗುತ್ತದೆ.
ಈ ಊಟಕ್ಕಾಗಿ ಬಡ ಜನ ಕಾದಿರುತ್ತಾರೆ. ಸ್ವಲ್ಪ ಸೂಕ್ಶ್ಮವಾಗಿ ಗಮನ ಹರಿಸಿದರೆ ತಟ್ಟೆಯಲ್ಲಿ ಅನ್ನದ ಜೊತೆಗೆ ತಿಳಿಸಾರಿರುತ್ತದೆ. ಬಡವನಿಗೆ ಕಡಿಮೆ ದರದಲ್ಲಿ ಊಟ ಕೊಡುವವನು ಕೂಡ ದಿನಗೂಲಿಗಿಂತ ಒಂಚೂರು ಅನುಕೂಲಸ್ಥ ಅಷ್ಟೇ.

ಬಡ ಕೂಲಿ ಕಾರ್ಮಿಕರಿಗೆ ತಿಂಡಿ ತಿನಿಸು ದೂರದ ಮಾತು. ಕೊಂಡುಕೊಳ್ಳುವ ಸಾಮರ್ಥ್ಯ ಈ ವರ್ಗಕ್ಕಿರದ ಕಾರಣ ಸಂಬಂಧ ಪಡುವುದಿಲ್ಲ.
ಗಂಡ ಹೆಂಡತಿ ಮಧ್ಯೆ ಜಗಳ , ಮಾನಸಿಕ ಒತ್ತಡ ಇವು ಏನೇ ಇದ್ದರೂ ಬಡ ವರ್ಗದಲ್ಲಿ ಮಹಿಳೆಯರು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಬಡತನವೇ ಪ್ರಮುಖ ಕಾರಣವಾಗಿರುತ್ತದೆ.
ಅವರ ಪಾಲಿಗೆ 200 ರುಪಾಯಿ ಎಂಬುದು ತುಂಬಾ ದೊಡ್ಡದು. ಅನೇಕರಿಗೆ ಅರ್ಥವಾಗದು.
••••••••••••••••••••ಸಂಗ್ರಹ
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ… ✒️
ಚಿಕ್ಕಮಗಳೂರು

About Author

Leave a Reply

Your email address will not be published. Required fields are marked *

You may have missed