लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ವಸ್ತುನಿಷ್ಠ ವರದಿಗಾರ ಅನಂತ್ ನಾಡಿಗ್ ರಂತವರಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಲಭಿಸಿರುವುದರಿಂದ, ಪ್ರಶಸ್ತಿಗೆ ತನ್ನ ಘನತೆ ಹೆಚ್ಚಾಗಿದೆ….

1 min read

ಅವಿನ್ ಟಿವಿ ಸುದ್ದಿಜಾಲ ✒️: *ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕಾರಕ್ಕೆ ಆಯ್ಕೆಯಾಗಿರುವ ಜಿಲ್ಲೆಯ ಹಿರಿಯ ಪತ್ರಕರ್ತರಾದ ಅನಂತ ನಾಡಿಗ್ ರವರಿಗೆ ತರೀಕೆರೆ ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ಮಹಿಳಾ ವೇದಿಕೆ ವತಿಯಿಂದ ಅಭಿನಂದನೆ.*

*ವಸ್ತುನಿಷ್ಠ ವರದಿಗಾರ ಅನಂತ್ ನಾಡಿಗ್ ರಂತವರಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಲಭಿಸಿರುವುದರಿಂದ, ಪ್ರಶಸ್ತಿಗೆ ತನ್ನ ಘನತೆ ಹೆಚ್ಚಾಗಿದೆ ~ ಜಿಲ್ಲೆಯ ಅನೇಕರ ಅಬಿಮತ.*

ತರೀಕೆರೆ ಜ 10: ಕರ್ನಾಟಕ ಸರ್ಕಾರದ 2025ನೇ ಸಾಲಿನ ರಾಜ್ಯ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕಾರಕ್ಕೆ ಆಯ್ಕೆಯಾಗಿರುವ ಹಿರಿಯ ಪತ್ರಕರ್ತರಾದ ಅನಂತ ನಾಡಿಗ್ ರವರಿಗೆ ಅವರ ಮನೆಯ ಆವರಣದಲ್ಲಿ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಇಂದು ಅಭಿನಂದನಾ ಸಮಾರಂಭ ನಡೆಯಿತು.

ರಾಜ್ಯ ಕಾಯ೯ನಿರತ ಪತ್ರಕತ೯ರ ಸಂಘದ ಮಾಜಿ ಅಧ್ಯಕ್ಷರು ಹಾಗೂ ನ್ಯೂಸ್ ಕಿಂಗ್ ಸಂಸ್ಥಾಪಕ ಸಂಪಾದಕರಾದ ಎನ್. ರಾಜು ರವರು ಮಾತನಾಡಿ ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಅನಂತನಾಡಿಗ್ ಭಾಜನರಾಗಿರುವುದು ಮಾಧ್ಯಮ ಕ್ಷೇತ್ರಕ್ಕೆ ಸಂಧ ಗೌರವವಾಗಿದೆ. ತಮ್ಮ ವೃತ್ತಿ ಪಾವಿತ್ರ್ಯತೆಯನ್ನು ಅನಂತ ನಾಡಿಗ್ ರವರು ಕಾಪಾಡಿಕೊಂಡು ಬಂದಿದ್ದಾರೆ. ಅವರ ಕಾಯ೯ಕ್ಷಮತೆ ಉಳಿದವರಿಗೆ ಮಾದರಿಯಾಗಲಿ ಎಂದು ಹೇಳಿದರು

ಟಿ.ಎ. ಪಿ.ಸಿ ಎಂ. ಎಸ್. ಅಧ್ಯಕ್ಷ ಎಂ. ನರೇಂದ್ರ ಮಾತನಾಡಿ ಇಂದು ಮಾಧ್ಯಮ ಕ್ಷೇತ್ರ ಕಲುಷಿತ ವಾಗಿರುವ ಸಂದರ್ಭದಲ್ಲಿ ಅನಂತನಾಡಿಗ್ ರಂತಹ ಪತ್ರಕತ೯ರು ವಿರಳರಾಗಿದ್ದಾರೆ. ಅನಂತ್ ನಾಡಿಗ್ ರವರಿಗೆ ಪ್ರಶಸ್ತಿ ಲಭಿಸಿರುವುದು ಪ್ರಶಸ್ತಿಯ ಘನತೆಯನ್ನು ಹೆಚ್ಚಿಸಿದೆ ಎಂದು ಹೇಳಿದರು.

ಪುರಸಭೆ ಮಾಜಿ ಅಧ್ಯಕ್ಷ ಪ್ರಕಾಶ್ ವಮಾ೯ ಮಾತನಾಡಿ ಸಮಾಜದ ತಪ್ಪನ್ನು ತಿದ್ದುವ ಕೆಲಸ ಹಾಗೂ ಸಮಾಜಕ್ಕೆ ಉಪಯೋಗವಾಗುವ ಬರಹಗಳ ಮೂಲಕ ಅನಂತ ನಾಡಿಗ್ ರವರು ಸೇವೆ ಸಲ್ಲಿಸಿದ್ದಾರೆ ಎಂದು ಹೇಳಿದರು.

ಪುರಸಭೆ ಮಾಜಿ ಅಧ್ಯಕ್ಷ ಟಿ. ಎಸ್. ಧಮ೯ರಾಜು ಮಾತನಾಡಿ ಅನಂತ ನಾಡಿಗ್ ಅವರ ಸೇವೆಯನ್ನು ಗೌರವಿಸಿ ರಾಜ್ಯೋತ್ಸವ ಪ್ರಶಸ್ತಿಯನ್ನು ಸರ್ಕಾರ ನೀಡಬೇಕು ಎಂದು ಸಭೆಯಲ್ಲಿ ಆಗ್ರಹಿಸಿದರು.

ಪುರಸಭೆ ಸದಸ್ಯ ಟಿ. ಎಂ. ಭೋಜರಾಜ್ ಮಾತನಾಡಿ ಕತ೯ವ್ಯ ಪ್ರಜ್ಙೆಗೆ ಹೆಸರಾಗಿರುವ ಅನಂತ ನಾಡಿಗ್ ರವರು ತಾಲ್ಲೂಕಿನ ಇತಿಹಾಸವನ್ನು ತಿಳಿದವರು ಆಗಿದ್ದಾರೆ. ಅವರ ಮಾಧ್ಯಮ ಸೇವೆ ಸಾಥ೯ಕವಾಗಿದೆ ಎಂದರು.

ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಟಿ.ದಾದಾಪೀರ್ ಸೇರಿದಂತೆ ವಿವಿಧ ಕ್ಷೇತ್ರಗಳ ಮುಖಂಡರಾದ ಟಿ.ಆರ್.ಶ್ರೀಧರ್ , ಮನಸುಳಿ ಮೋಹನ್ ಕುಮಾರ್, ಇಮ್ರಾನ್ ಅಹ್ಮದ್ ಬೇಗ್, ಹಷಿ೯ಣಿ. ಟಿ.ವಿ.ಶ್ರೀನಿವಾಸ್, ಆದಿಲ್ ಪಾಷಾ, ಅಬ್ಬಾಸ್, ಇಷಾ೯ದ್ , ಶರಣ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾದ. ಟಿ.ಜಿ.ಸದಾನಂದ, ಚೇತನ್ ಕುಮಾರ್, ಟಿ.ಎಸ್.ನಾಗರಾಜು. ಸತೀಶ್, ರಾಜು, ಮುಹೀಬ್ ಇತರರು ಮಾತನಾಡಿ ಅಭಿನಂದನೆ ಸಲ್ಲಿಸಿದರು.
•••••••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ… ✒️
ಚಿಕ್ಕಮಗಳೂರು

About Author

Leave a Reply

Your email address will not be published. Required fields are marked *

You may have missed