लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ವಚನಗಳು ಸಕಲ ಜೀವಿಗಳ ಹಿತವನ್ನು ಬಯಸಿದ ಜೀವ ಜಲವಾಗಿದೆ:ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು….

1 min read

ಅವಿನ್ ಟಿವಿ ಸುದ್ದಿಜಾಲ ✒️: ವಚನಗಳು ಸಕಲ ಜೀವಿಗಳ ಹಿತವನ್ನು ಬಯಸಿದ ಜೀವ ಜಲವಾಗಿದೆ:ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು.

ಶ್ರೀ ಸಿರೆಗೆರೆ ತರಳಬಾಳು ಜಗದ್ಗುರು ಸಂಸ್ಥಾನದ ಮೂಲಮಠವಾದ ಯಲಹಂಕದಲ್ಲಿ ಸರ್ವ ಶರಣರ ಸಮ್ಮೇಳನ.
••••••••••••••••••
ಹತ್ತಾರು ಧರ್ಮಗಳು, ನೂರಾರು ಪಂಗಡಗಳು, ಸಾವಿರಾರು ಭಾಷೆಗಳು, ಅಸಂಖ್ಯ ಜಾತಿಗಳನ್ನು ಹುಟ್ಟು ಹಾಕಿದ ದೇಶ ನಮ್ಮದು, ಯಾವುದಕ್ಕೆ ಹೆಮ್ಮೆಪಡಬೇಕು ? ಯಾವುದಕ್ಕೆ ಹೆಮ್ಮೆ ಪಡಬಾರದು ? ಧರ್ಮ ಭಾಷೆ ಜಾತಿಗಳಲ್ಲಿ ಸಮಾನತೆ ಸಹಜವಾಗಿದ್ದರೆ ಹೆಮ್ಮೆ ಪಡಬಹುದಾಗಿತ್ತಲ್ಲವೇ ! ಎಂಬ ಒಂದು ಅವಲೋಕನದೊಂದಿಗೆ ವಚನ ಸಾಹಿತ್ಯಗಳ ಅಮೂಲ್ಯ ವಿಚಾರಗಳು ಮತ್ತು ಇಂದಿನ ಸಾಮಾಜಿಕ ಪರಿಸ್ಥಿತಿಯನ್ನು ಗಂಭೀರವಾಗಿ ಮುನ್ನೆಲೆಗೆ ತಂದು 12ನೇ ಶತಮಾನದ ಶಿವಶರಣರ ದರ್ಶನ ಮಾಡಿಸಿದ ಯಲಹಂಕದ ಸರ್ವ ಶರಣರ ಸಮ್ಮೇಳನವು ನೆರೆದಿದ್ದ ಸಭಿಕರನ್ನು ಒಂದು ದೊಡ್ಡ ಚಿಂತನೆಗೆ ತಳ್ಳಲ್ಪಟ್ಟಿತು.

ಬೇಲೂರು ಸಮೀಪವಿರುವ ಯಲಹಂಕದ ಶ್ರೀ ತರಳಬಾಳು ಜಗದ್ಗುರು ಸಂಸ್ಥಾನ ಮಠದ ಆವರಣದಲ್ಲಿ ಇತ್ತೀಚೆಗೆ ಸರ್ವ ಶರಣರ ಸಮ್ಮೇಳನವನ್ನು ಸಿರಿಗೆರೆ ಬೃಹನ್ಮಠದ ಜಗದ್ಗುರುಗಳಾದ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ಸರ್ವ ಶರಣರ ಸಮ್ಮೇಳನ ಜರುಗಿತು.

ಸಂವಿಧಾನ ಎಂದರೆ ಸಮ ವಿಧಾನ ಎಂದರ್ಥ, ಇಂತಹ ಸಂವಿಧಾನವನ್ನು ನಮಗೆ ನಾವೇ ಅರ್ಪಿಸಿಕೊಂಡು 75 ವರ್ಷಗಳು ತುಂಬಿ, ಅದರ ಅಮೃತ ಮಹೋತ್ಸವದ ಸಡಗರದಲ್ಲಿದ್ದಾಗಲೂ ಕೂಡ ಇಡೀ ಭಾರತೀಯರೆಲ್ಲರೂ ಸಮಾನರು ಎಂಬುದು ಕೇವಲ ಸಂವಿಧಾನದ ಪುಟಗಳಲ್ಲಿ ಉಳಿದ ಸಂಗತಿ ಆಗಿದೆಯೇ ಹೊರತು ನಿಜ ಜೀವನದಲ್ಲಿ, ನಾವು ಜೀವಿಸುವ ಪರಿಸರದಲ್ಲಿ ಸಮಾನತೆಯನ್ನು ಕಾಣುವುದು, ಕಂಡು
ಅನುಭವಿಸುವುದು ಬಿಸಿಲುಗುದುರೆಯೇ ಆಗಿದೆ, 21ನೇ ಶತಮಾನದ ವೈಜ್ಞಾನಿಕ ಸಂಶೋಧನೆಗಳು ಮನುಷ್ಯ ಲೋಕದ ಭ್ರಮೆಗಳನ್ನು ಕಳಚುತ್ತ ಭೂಮಂಡಲವನ್ನೇ ಜಾಗತಿಕ ಗ್ರಾಮದ ಸಂಕ್ಷಿಪ್ತತೆಗೆ ಕಿರುದುಗೊಳಿಸಿದಾಗಲೂ ನಮ್ಮ ನಮ್ಮ ಮನದಲ್ಲಿರುವ ಜಾತಿ ಮತಗಳ ಜಾಡ್ಯ ದಿನದಿಂದ ದಿನಕ್ಕೆ ಮತ್ತಷ್ಟು ಗಂಭೀರವಾಗುತ್ತ ಸಾಗುತ್ತಿರುವುದು ವಿಷಾದವಾಗಿದೆ. ಜಾತಿ ಮತ ಧರ್ಮಗಳ ಹೆಸರಿನಲ್ಲಿ ಅನೇಕ ಸಂಘರ್ಷ ಹುಟ್ಟು ಹಾಕಿ ಅದಕ್ಕೆ ಅಮಾಯಕ ಯುವ ಜನತೆ ವಿನಾಕಾರಣ ಬಲಿಯಾಗುತ್ತಿರುವುದು ಈ ವರ್ತಮಾನದ ದಳ್ಳೂರಿಯಾಗಿದೆ. ಇಂತಹ ವಿವೇಕವಲ್ಲದ ಸಂಘರ್ಷಗಳಿಂದ ಹೊರಬಂದು ಬಸವಾದಿ ಶರಣರು ಹುಟ್ಟು ಹಾಕಿ ಸಮಾಜಕ್ಕೆ ಹೊಸ ಕಣ್ಣೋಟ ಕೊಟ್ಟ ಕಲ್ಯಾಣದಂತಹ ಸತ್ಕ್ರಾಂತಿಗಳನ್ನು, ಅ ಸತ್ಕ್ರಾಂತಿಯ ಒಳಗೆ ಅಡಗಿದ್ದ ಮಾನವೀಯತೆಯನ್ನು ಕಂಡುಕೊಳ್ಳುವುದು ಅನಿವಾರ್ಯವಾಗಿದೆ.

ಈ ವರ್ತಮಾನದ ದಿನಮಾನದಲ್ಲಿ ನಮ್ಮ ನಮ್ಮ ಮನಸ್ಸು ಆಧುನಿಕತೆ ಹೆಸರಿನಲ್ಲಿ ಒಂದು ನಾಗಾಲೋಟದಿಂದ ಮುಂದೆ ಮುಂದೆ ನೆಗೆನೆಗೆದು ಸಾಗುತ್ತಿದೆ, ಹೀಗೆ ನಾಗ ಲೋಟದಿಂದ ಸಾಗುತ್ತಿರುವ ಎಲ್ಲ ಮನಸ್ಸುಗಳು ಮತ್ತೆ ಮತ್ತೆ 12ನೇ ಶತಮಾನಕ್ಕೆ ಹಿಂತಿರುಗಿ ಕಲ್ಯಾಣದ ದಿನಗಳನ್ನು ನೆನಪಿಸಿಕೊಳ್ಳಬೇಕಾಗಿದೆ.

ಕಲ್ಯಾಣದ ದಿನಕ್ಕೆ ನಾವೆಲ್ಲ ಹಿಂದೆ ಹೋಗಿ, 12ನೇ ಶತಮಾನದ ವಚನಕಾರರು ಎದುರಿಸಿದ ಕಷ್ಟ, ಸ್ವೀಕರಿಸಿದ ಸವಾಲು, ಬದಲಾಯಿಸಿದ ಮಾರ್ಗ, ಜನತೆಯಿಂದ ಪಡೆದ ಸಹಾಯ, ಎಲ್ಲ ಹೋರಾಟಗಳಿಂದ ಪಡೆದ ಫಲಿತಾಂಶಗಳನ್ನು ಮತ್ತೊಮ್ಮೆ ಮನಗಾಣಬೇಕಿದೆ.

ಬೆನ್ನ ಹಿಂದೆ ಭಯವಿದ್ದರೂ ಕೂಡ ಕಣ್ಣ ಮುಂದೆ ಗುರಿ ಇಟ್ಟುಕೊಂಡು ಜೀವಕ್ಕೆ ಅಂಜದೆ ಕಲ್ಯಾಣದ ಶಿವಶರಣರು ಸಾಗಿದ ದಾರಿಯ ಹೆಜ್ಜೆ ಗುರುತುಗಳು ಮಾಸಿಹೋಗದಂತೆ ಜತನದಿಂದ ಕಾಪಾಡಿಕೊಳ್ಳುವ ಜವಾಬ್ದಾರಿ ಸರ್ವ ಶರಣರ ಮೇಲಿದೆ.

ವಚನದ ದಾರಿ ಎಂದರೆ ಕೇವಲ ಒಂದು ಧರ್ಮದ ದಾರಿಯಲ್ಲ, ಅದು ಇಡೀ ಮಾನವ ಕುಲದ ಬೆಳಕಿನ ದಾರಿಯೇ ಆಗಿದೆ, ಇಂತಹ ಮಾನವ ಕಲ್ಯಾಣದ ಬೆಳಕಿನ ಹೆದ್ದಾರಿಗೆ ಬುನಾದಿ ಹಾಕಿದ 12ನೇ ಶತಮಾನದ ಎಲ್ಲ ಶಿವಶರಣರ ನಿಜ ಆಶಯಗಳನ್ನು ಎದೆಯ ಗೂಡಿಗೆ ಇಳಿಸಿಕೊಳ್ಳದೆ ಹೋದರೆ ಒಂದು ಶ್ರೇಷ್ಠ ಸಮಾಜವನ್ನು ಕಾಣುವುದು ಅಸಾಧ್ಯವಾಗುತ್ತದೆ.

ಇಂತಹ ಹತ್ತಾರು ಸಂಗತಿಗಳ ಮೇಲೆ ಯಲಹಂಕದ ಸರ್ವಶರಣರ ಸಮ್ಮೇಳನದಲ್ಲಿ ಸಿರಿಗೆರೆಯ ಬೃಹನ್ಮಠದ ಜಗದ್ಗುರುಗಳಾದ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ದಿವ್ಯ ಸಾನಿಧ್ಯವನ್ನು ವಹಿಸಿ ಪರಿಣಾಮಕಾರಿಯಾದ ಸಂದೇಶವನ್ನು ಸಮಾಜಕ್ಕೆ ರವಾನಿಸಿದರು.

ಸಭೆಯ ಅಧ್ಯಕ್ಷತೆಯನ್ನು ಬೇಲೂರು ವಿಧಾನಸಭಾ ಕ್ಷೇತ್ರದ ಶಾಸಕ ಹೆಚ್. ಕೆ.ಸುರೇಶ್ ವಹಿಸಿದ್ದರು.

ನ್ಯೂಸ್ ಕಿಂಗ್ ವರದಿಗಾರ
ಡಿ. ಎಂ
ಮಂಜುನಾಥಸ್ವಾಮಿ ಮಾನವೀಯ ಸಮಾಜದ ನಿರ್ಮಾಣಕ್ಕಾಗಿ ಗತಿಸಿಹೋದ ಕಲ್ಯಾಣದ ಸತ್ಕ್ರಾಂತಿಯನ್ನು ಕುರಿತು ಉಪನ್ಯಾಸ ನೀಡಿದರು.

ವೇದಿಕೆಯಲ್ಲಿ ವಿವಿಧ ಸಮಾಜದ ಅನೇಕ ಮುಖಂಡರು ಉಪಸ್ಥಿತರಿದ್ದರು.
•••••••••••••••••
ಡಿ. ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ ✒️
ಚಿಕ್ಕಮಗಳೂರು

About Author

Leave a Reply

Your email address will not be published. Required fields are marked *

You may have missed