ಚಳಿ ಚಳಿ ತಾಳೆನು ಈ ಚಳಿಯ…!!!!!!….??
1 min read
ಚಳಿ ಚಳಿ ತಾಳೆನು ಈ ಚಳಿಯ…!!!!!!….??
ಇದೇನು ಅಂಬರೀಶ್ ಅಭಿನಯದ ಚಕ್ರವ್ಯೂಹ ಸಿನಿಮಾ ಹಾಡು ಅನ್ಕೊಂಡ್ರಾ…… ಇದು ಮಲೆನಾಡಿನಲ್ಲಿ ಕಳೆದ 15ದಿನಗಳಿಂದ ಆರ್ಭಟಿಸುತ್ತಿರುವ ಚಳಿಯ ರೌದ್ರ ನರ್ತನ ದ ಒಂದು ತುಣುಕು.
ಹೌದು, ಮಲೆನಾಡಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಋತುಮಾನಗಳ ಸ್ಥಾನ ಪಲ್ಲಟವಾಗುತ್ತಿರುವುದು ಇದು ಮಳೆಯೋ, ಚಳಿಯ, ಬಿಸಿಲೋ ಒಂದು ಗೊತ್ತಾಗದಂಥ ವಾತಾವರಣ ನಿರ್ಮಾಣವಾಗಿರುವುದು ಒಂದು ಸೋಜಿಗ, ಹೌದಲ್ಲವಾ ಗೆಳೆಯರೆ, ಸ್ವಲ್ಪ ವರ್ಷಗಳ ಹಿಂದೆ ಹೋದರೆ 4ತಿಂಗಳು ಮಳೆಗಾಲ, 4ತಿಂಗಳು ಚಳಿಗಾಲ, 4ತಿಂಗಳು ಬೇಸಿಗೆ ಕಾಲ ಅಂದುಕೊಂಡು ಆಯಾಯ ಸಮಯಕ್ಕೆ ಕೆಲಸ ಕಾರ್ಯಗಳಿಗೆ ಸಿದ್ಧರಾಗುತ್ತಿದ್ದರು ನಮ್ಮ ಜನ. ಆದರೆ ಇತ್ತೀಚಿನ ವರ್ಷಗಳಲ್ಲಿ ಯಾವ ಕಾಲದಲ್ಲಿ ನಾವಿದ್ದೇವೆ ಇವಾಗ ಏನ್ ಕೆಲ್ಸ ಮಾಡಬೇಕು ಅನ್ನೋದೆ ಗೊತ್ತಾಗ್ತಿಲ್ಲ, ಇದು ಒಂದು ಕಡೆ ಇರಲಿ ನಾನು ಹೇಳಲು ಹೊರಟ ವಿಷ್ಯ ಈ ದಿನ ನನ್ನೂರಿನ (ಬಕ್ಕಿ ) ಜನರೊಂದಿಗೆ ತ್ರಿಪುರ ಗ್ರಾಮಕ್ಕೆ ಸೊಸೈಟಿ ಗೆ ರೇಷನ್ ತರಲು ಹೋಗಿದ್ದೆ ಹೋಗುವ ಮುನ್ನವೇ ಸಾಮಾನ್ಯವಾಗಿ ಯಾವಾಗಲೂ ಎಲ್ಲರಿಗು ನನ್ನ ಕಾರ್ಡ್ (ಅವರವರ) ನ್ನೇ ಹೇಗಾದ್ರೂ ಮಾಡಿ ಮೇಲೆ ಇಟ್ಟು ಬೇಗ ತಗೊಳಬೇಕು ಅನ್ನೋದೇ ಚಿಂತೆ ಹಾಗಾಗಿ ಎಲ್ಲರ ಕಣ್ಣು ಕಾರ್ಡ್ ಮೇಲೆ ಸ್ವಲ್ಪ ಕೈ ಬದಲಾಯಿಸಿದರು ಸಾಕು ಹೇ..! ನೋಡ್ದ ಅಷ್ಟು ಬೇಗ ಕಾರ್ಡ್ ನೇ ಮೇಲೆ ಕೆಳಗೆ ಚೇಂಜ್ ಮಾಡೋಕೆ ನೋಡ್ತಿದಾನೆ ಅಂತ ಕ್ಯಾತೆ ಶುರು ಆಗೋದು ಇನ್ನೇನು ಹೋಗಿ ಆಟೋ ಇಲ್ಕೊಂಡರೆ ಸಾಕು ಸೊಸೈಟಿ ಡೋರ್ ಹತ್ತಿರ ನಿಂತು ಕಾರ್ಡ್ ನ್ನೇ ವಾಚ್ ಮಾಡೋಕೆ ಶುರು ಆಗಿತ್ತು.
ಈ ದಿನ ಯಾಕೋ ಆಟೋ ಎಂದಿನಂತೆ ಸೊಸೈಟಿ ಮುಂಬಾಗ ಹೋಗಿ ನಿಲ್ತು ನಾ ಇಳಿದು ನೋಡಿದ್ರೆ ಜನಕ್ಕೆ ತಮ್ಮ ಕಾರ್ಡ್ ಚೇಂಜ್ ಗಿಂಜ್ , ಮ್ಯಾಲೆ ಕೆಳಕ್ಕೆ ಎಂತ ಮಾತು ಇಲ್ಲ ಯಾವಾಗದ್ರು ನಮ್ ಕಾರ್ಡ್ ಬರ್ಲಿ, ”ಸ್ವಲ್ಪ ಸೈಡ್ ಬುಡ್ರಾಲ ಅಂತ “ಎಲ್ರೂನು ದೂಡಿ ಕುಂತಿದ್ದು ನೋಡಿದ್ರೆ ನನಗೆ ಆಶ್ಚರ್ಯ ಆಯ್ತು. ಯಾಕಂದ್ರೆ ಹಳ್ಳಿ ಜನಕ್ಕೆ ಈ ಚಳಿ ಈ ರೀತಿ ಭಯ ಹುಟ್ಟಿಸಿದೆ ಅಂದ್ರೆ ಬೇರೆವ್ರ ಕಥೆ ಹೇಗೆ ಅಂತ.
ಇದು ಕೇವಲ ನಮ್ಮೂರ್ ಕಥೆ ಅಲ್ಲ ಇಡೀ ಮಲೆನಾಡ ಭಾಗದಲ್ಲಿ ಈ ಚಳಿಯ ಅಬ್ಬರ ಆ ರೀತಿ ಇದೆ.
ಈ ಅತಿಯಾದ ಚಳಿಯಲ್ಲಿ ಯಾವುದೇ ಜನರ ಆರೋಗ್ಯದ ಮೇಲೆ ಪರಿಣಾಮ ಬೀರದಿರಲಿ ಅನ್ನೋದೇ ನನ್ನ ಯೋಚನೆ, ದಯಮಾಡಿ ಮನೆಯಲ್ಲಿ ವಯಸ್ಸಿನ ಅಥವಾ ಅನಾರೋಗ್ಯ ಪೀಡಿತವರಿದ್ದರೆ ಸ್ವಲ್ಪ ನಿಗಾ ವಹಿಸಿ ಅನ್ನುವ ಸಲಹೆಯೊಂದಿಗೆ ಮುಗಿಸುತ್ತಿದ್ದೇನೆ.

ವರದಿ…..
ಬಕ್ಕಿ ಮಂಜುನಾಥ್.

