ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆಯ ಸಚಿವರಾದ ಸನ್ಮಾನ್ಯ ಶ್ರೀ ಎಚ್ ಡಿ ಕುಮಾರಸ್ವಾಮಿ ರವರನ್ನು ಭೇಟಿ….
1 min read
ಕೇಂದ್ರೀಯ ಕಾಫಿ ಸಂಶೋಧನಾ ಸಂಸ್ಥೆಯ ಶತಮಾನೋತ್ಸವದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷರಾದ ಶ್ರೀ ಹಳಸೆ ಶಿವಣ್ಣ, ಹಾಗೂ ತಂಡ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆಯ ಸಚಿವರಾದ ಸನ್ಮಾನ್ಯ ಶ್ರೀ ಎಚ್ ಡಿ ಕುಮಾರಸ್ವಾಮಿ ರವರನ್ನು ಭೇಟಿ


ಮಾಡಿ
ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳ ಕಾಫಿ ಕೃಷಿ ಭೂಮಿಗಳನ್ನು SARFAESI ಕಾಯ್ದೆಯಿಂದ
ಹೊರಗಿಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿ ಬೆಳೆಗಾರರಿಗೆ ಅನುಕೂಲ ಮಾಡಿಕೊಡುವಲ್ಲಿ ಸಹಕರಿಸುವಂತೆ
ಮಲೆನಾಡಿನ ಕಾಫಿ ಬೆಳೆಯುವ ಪ್ರದೇಶಗಳಲ್ಲಿ ಕಾಡಾನೆ ಮತ್ತು ಇತರೆ ಕಾಡುಪ್ರಾಣಿಗಳ ಹಾವಳಿ ದಿನದಿಂದ ದಿನಕ್ಕೆ ಅಧಿಕವಾಗುತ್ತಿದ್ದು,
ಇಲ್ಲಿನ ಜನಸಾಮಾನ್ಯರ ಬದುಕು ಚಿಂತಾಜನಕವಾಗಿದೆ. ಕಾಡಾನೆಗಳ ದಾಂದಲೆಯಿoದ ಮಾನವ ಪ್ರಾಣಹಾನಿ ಜೊತೆಗೆ ಅಪಾರ ಪ್ರಮಾಣದಲ್ಲಿ
ಬೆಳೆನಷ್ಟವುಂಟಾಗುತ್ತಿದೆ. ಕಾಡಾನೆ ದಾಳಿಯಿಂದ ಉಂಟಾಗುತ್ತಿರುವ ಬೆಳೆನಷ್ಟಕ್ಕೆ ಅರಣ್ಯ ಇಲಾಖೆಯಿಂದ ಸೂಕ್ತ ಪರಿಹಾರವೂ ಕೂಡಾ
ಸಕಾಲದಲ್ಲಿ ಲಭ್ಯವಾಗುತ್ತಿಲ್ಲ. ಜೊತೆಗೆ ಕಾಡಾನೆಗಳು ಎಲ್ಲೆಲ್ಲಿ ಸಂಚರಿಸುತ್ತಿವೆಯೆoದು ನಿಖರವಾದ ಮಾಹಿತಿ ಲಭ್ಯವಾಗುತ್ತಿಲ್ಲ. ಒಟ್ಟಿನಲ್ಲಿ
ಮಲೆನಾಡಿನ ಕಾಫಿ ಬೆಳೆಯುವ ಪ್ರದೇಶಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಸಂಪೂರ್ಣವಾಗಿ ಹಿಡಿದು ಸ್ಥಳಾಂತರಿಸಿ ಕಾಡಾನೆ ಸಮಸ್ಯೆಗೆ
ಅತೀ ಶೀಘ್ರವಾಗಿ ಪರಿಹಾರ ದೊರಕಿಸಿಕೊಡಬೇಕೆಂದು ಮನವಿ ಮಾಡಲಾಯಿತು.
ಕರ್ನಾಟಕ ರಾಜ್ಯ ಸರ್ಕಾರ ಪ್ಲಾಂಟೇಶನ್ ಬೆಳೆಗಾರರ ಅನಧಿಕೃತ ಸಾಗುವಳಿಗಳನ್ನು ದೀರ್ಘಾವಧಿ ಲೀಸ್‌ಗೆ ನೀಡಲು ನಿಯಮಗಳನ್ನು
ರೂಪಿಸಿದ್ದು ಸದರಿ ಲೀಸ್ ಕುರಿತಾಗಿ ಬೆಳೆಗಾರರಿಂದ ಪ್ರಾಥಮಿಕ ಹಂತದ ಅರ್ಜಿಗಳನ್ನು ಕಂದಾಯ ಇಲಾಖೆ ವತಿಯಿಂದ ಸ್ವೀಕರಿಸಿರುತ್ತಾರೆ.
ಆದರೆ ಯಾವುದೇ ನಿರ್ದಿಷ್ಟ ಕಾರಣಗಳನ್ನು ನೀಡದೇ ಈವರೆವಿಗೂ ಲೀಸ್ ಪ್ರಕ್ರಿಯೆ ಚಾಲನೆ ದೊರಕಿರುವುದಿಲ್ಲ. ತಾವು ರಾಜ್ಯ ಸರ್ಕಾರದ
ಜೊತೆ ಈ ವಿಚಾರ ಚರ್ಚಿಸಿ ಈ ಕೂಡಲೇ ದೀರ್ಘಾವಧಿ ಲೀಸ್ ಪ್ರಕ್ರಿಯೆಗೆ ಚಾಲನೆ ನೀಡುವಂತೆ ರಾಜ್ಯ ಸರ್ಕಾರದ ಮಾನ್ಯ
ಮುಖ್ಯಮಂತ್ರಿಯವರಿಗೆ ಹಾಗೂ ಸಂಬoಧಪಟ್ಟ ಸಚಿವರುಗಳಿಗೆ ತಿಳಿಸಿ ಬೆಳೆಗಾರರ ಸಮುದಾಯಕ್ಕೆ ಅನುಕೂಲ ಮಾಡಿಕೊಡಬೇಕೆಂದು
ಕೇಳಿಕೊಳ್ಳಲಾಯಿತು.
ಅರಣ್ಯ ಭೂಮಿಗೆ ಸಂಬoಧಪಟ್ಟ0ತೆ ಸೆಕ್ಷನ್ ೪(೧) ಹಾಗೂ ಡೀಮ್ಡ್ ಅರಣ್ಯದ ಕುರಿತು ಹಾಲಿ ಇರುವ ಗೊಂದಲಗಳು
ಬಗೆಹರಿಯುವವರೆಗೂ ಅರಣ್ಯ ಇಲಾಖೆಯಿಂದ ರೈತಬೆಳೆಗಾರರಿಗೆ ನೋಟೀಸುಗಳನ್ನು ನೀಡದಂತೆ ಸಂಬoಧಪಟ್ಟ ಮಂತ್ರಿಗಳಿಗೆ ಹಾಗೂ
ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡಬೇಕಾಗಿಮನವಿ ಮಾಡಲಾಯಿತು.
ಈ ನಿಯೋಗದಲ್ಲಿ ಬೇಲೂರು ಕ್ಷೇತ್ರದ ಶಾಸಕರಾದ ಶ್ರೀ ಎಚ್ ಕೆ ಸುರೇಶ್ ರವರು, ಕರ್ನಾಟಕ ಬೆಳೆಗಾರರ ಒಕ್ಕೂಟದ ಉಪಾಧ್ಯಕ್ಷರುಗಳಾದ ಶ್ರೀ ಸಿ ಎಸ್ ಸುರೇಶ್ ,ಬಿ ಎಂ ನಾಗರಾಜು, ಮಾಜಿ ಅಧ್ಯಕ್ಷರುಗಳಾದ ಶ್ರೀ ಬಿಎಸ್ ಜಯರಾಮ್, ಡಾ. ಹೆಚ್ ಟಿ ಮೋಹನ್ ಕುಮಾರ್, ಸಂಘಟನಾ ಕಾರ್ಯದರ್ಶಿ ಶ್ರೀ ಅಶೋಕ್ ಸುರಪ್ಪನಹಳ್ಳಿ,ಚಿಕ್ಕಮಗಳೂರು ಜಿಲ್ಲಾ ಬೆಳೆಗಾರರ ಸಂಘದ ಅಧ್ಯಕ್ಷರಾದ ಶ್ರೀ ಕೆ ಯು ರತೀಶ್, ಮೂಡಿಗೆರೆ ತಾಲೂಕು ಬೆಳೆಗಾರರ ಸಂಘದ ಅಧ್ಯಕ್ಷರಾದ ಶ್ರೀ ಬಿ ಆರ್ ಬಾಲಕೃಷ್ಣ, ಕಾರ್ಯದರ್ಶಿ ಶ್ರೀ ಕೇ ಡಿ ಮನೋಹರ್, ಹಾಸನ ಜಿಲ್ಲಾ ಪ್ಲಾಂಟರ್ ಸಂಘದ ಗೌರವ ಕಾರ್ಯದರ್ಶಿ ಶ್ರೀ ಕೆ ಬಿ ಲೋಹಿತ್, ಕಾಂಡ್ಯಾ ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷರಾದ ಶ್ರೀ ಎಸ್ ವಿ ಶಂಕರ್, ಬೇಲೂರು ತಾಲೂಕು ಬೆಳೆಗಾರರ ಸಂಘದ ಅಧ್ಯಕ್ಷರಾದ ಶ್ರೀ ಅದ್ದೂರಿ ಎಂ ಕುಮಾರ್ ಹಾಗೂ ಇತರರು ಇದ್ದರು

