….ನಿಧನ….
1 min read
ಅವಿನ್ ಟಿವಿ ಸುದ್ದಿಜಾಲ ಡಿ.14✒️.
ನಿಧನ ವಾರ್ತೆ:
ದಿಣ್ಣೇಕೆರೆ ಗ್ರಾಮದ ಡಿ. ಆರ್. ವೇಣುಗೋಪಾಲ್ ಅವರ ಅತ್ತೆ “ಶ್ರೀಮತಿ ಜಯಮ್ಮ” ನಿಧನ
—————————————–
“ನಾಳೆಯ ಆಸೆಯಲ್ಲಿ ಈ ಕ್ಷಣವನ್ನು ಕಳೆಯುತ್ತಿರುವ ಮನುಷ್ಯನ ಬದುಕು ಕನ್ನಡಿಯ ಮೇಲಿನ ಬಿಸಿ ಹಬೆ ಇದ್ದಂತೆ…..”
ಆಲ್ದೂರು ಸಮೀಪದ ದಿಣ್ಣೇಕೆರೆ ಗ್ರಾಮದ ಶ್ರೀ ಪ್ರಸನ್ನ ಮಹಾಗಣಪತಿ
ಶ್ರೀ ವೀರಾಂಜನೇಯಸ್ವಾಮಿ ದೇವಸ್ಥಾನದ ಅರ್ಚಕರಾದ
ಡಿ.ಆರ್.ವೇಣುಗೋಪಾಲ್ ಅವರ ಅತ್ತೆ ಶ್ರೀಮತಿ ಜಯಮ್ಮ ನವರು ಕಳೆದ ಒಂದು ದಿನದ ಹಿಂದೆ, ದಿಣ್ಣೇಕೆರೆ ಗ್ರಾಮದ ಬಸ್ ನಿಲ್ದಾಣದ ಮುಂದೆ, ಕೆ ಎಸ್ ಆರ್ ಟಿ ಸಿ ಬಸ್ ನಿಂದ ಇಳಿಯುವಾಗ ಆಯತಪ್ಪಿ ಕೆಳಗೆ ಬಿದ್ದ ಕಾರಣ ತಲೆಗೆ ಪೆಟ್ಟಾಗಿ ಚಿಕ್ಕಮಗಳೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು,
ಪರಿಸ್ಥಿತಿ ಗಂಭೀರವಾದ ಕಾರಣ ತದನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು,
ತಲೆಗೆ ತೀವ್ರ ಸ್ವರೂಪದ ಪೆಟ್ಟು ಬಿದ್ದ ಕಾರಣ ಚಿಕಿತ್ಸೆ ಫಲಕಾರಿಯಾಗದೆ, ಇಂದು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಈ ಸಂಬಂಧ ಅಲ್ದೂರು ಆರಕ್ಷಕ ಠಾಣೆಯಲ್ಲಿ ದೂರು ದಾಖಲಾಗಿದೆ.
55ರ ವಯೋಮಾನದ ಮೃತ ಜಯಮ್ಮನವರು,ಪತಿ ರಾಜು ಸೇರಿದಂತೆ ಓರ್ವ ಮಗಳು, ಓರ್ವ ಮಗ,ಅಳಿಯ ಮೊಮ್ಮಕ್ಕಳು ಸೇರಿದಂತೆ ದೊಡ್ಡ ಕುಟುಂಬ ವರ್ಗವನ್ನು ಬಿಟ್ಟು ಅಗಲಿದ್ದಾರೆ.
ಮೃತರ ಪಾರ್ಥಿವ ಶರೀರವನ್ನು ನಾಳೆ 15 ಡಿಸೇಂಬರ್ 2025ರ ಸೋಮವಾರ ಬೆಳಿಗ್ಗೆ ಬೆಂಗಳೂರಿನಿಂದ ದಿಣ್ಣೇಕೆರೆ ಗ್ರಾಮಕ್ಕೆ ತಂದು, ಅಂತಿಮ ನಮನ ಸಲ್ಲಿಸಿ, ನಂತರ ಸಂಜೆ ಚಿಕ್ಕಮಗಳೂರಿನ ಚಿತಗಾರದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಶವ ಸಂಸ್ಕಾರ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಮೃತರ ಅಗಲಿಕೆಯ ನೋವನ್ನು ತಡೆದುಕೊಳ್ಳುವ ಶಕ್ತಿ ಕುಟುಂಬ ವರ್ಗಕ್ಕೆ ಒದಗಿ ಬರಲಿ ಎಂದು ಪ್ರಾರ್ಥಿಸುತ್ತಾ, ದಿಣ್ಣೇಕೆರೆ ಕಾಫಿ ಕ್ಲಬ್ ಪರವಾಗಿ ಭಾವಪೂರ್ಣ ಸಂತಾಪಗಳನ್ನು ಸಲ್ಲಿಸಲಾಗಿದೆ.
••••••••••••••••••
ಡಿ.ಎಂ. ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ… ✒️
ಚಿಕ್ಕಮಗಳೂರು

