लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಅವಿನ್ ಟಿವಿ ಸುದ್ದಿಜಾಲ ✒️: ಯೋಗ್ಯತೆ ಇಲ್ಲದಿದ್ದರೂ ಅರ್ಹತೆ ಬಯಸುತ್ತೇವೆ, ಸಾಧನೆ ಇಲ್ಲದಿದ್ದರೂ ಸನ್ಮಾನಕ್ಕೆ ಕೊರಳೋಡ್ಡುಲು ಒಂದು ಹಪಾಹಪಿತನದೊಂದಿಗೆ ಹಂಬಲಿಸುತ್ತದೆ ಬಹುತೇಕ ಜನರ ಈ ಮನ,

ಪ್ರಚಾರ, ಪ್ರಶಸ್ತಿ, ಸನ್ಮಾನ,ಅಧಿಕಾರವನ್ನು ಬೆನ್ನತ್ತಿ ಹೊರಟಿರುವ ಎಲ್ಲ ಮನಸ್ಸುಗಳಿಗೂ ಇದೊಂದು ಚಾಟಿ ಏಟಿನ ಪ್ರಾಥಮಿಕ ಪಾಠ.

*ಇದು,*
*ರಾಜೇಶ್ವರಿ ತೇಜಸ್ವಿ ಅವರು ಬರೆದಿರುವ “ನನ್ನ ತೇಜಸ್ವಿ” ಪುಸ್ತಕದೊಳಗಿನ ಕೆಲವು ಸಾಲುಗಳನ್ನು ಅವಿನ್ ಟಿವಿ ಸುದ್ದಿಜಾಲ ತನ್ನ ಓದುಗರಿಗಾಗಿ ಈ ಮೂಲಕ ಕೊಡ ಮಾಡಿದೆ….*
••••••••••••••••••👇
“ಶಾಂತವೇರಿ ಗೋಪಾಲಗೌಡರು, ತೀರ್ಥಹಳ್ಳಿ ಕ್ಷೇತ್ರದಿಂದ ತೇಜಸ್ವಿಯವರನ್ನು ಸಮಾಜವಾದಿ ಯುವಜನ ಸಭಾದ ಅಭ್ಯರ್ಥಿಯಾಗಿ ಕಾಂಗ್ರೆಸ್ ವಿರುದ್ಧ (1970 ರ ದಶಕ) ಚುನಾವಣೆಗೆ ನಿಲ್ಲಲು ಕೇಳಿಕೊಂಡು ಒತ್ತಾಯ ಮಾಡಿದರು. ಇವರು ದೂರದಲ್ಲೇ ಉಳಿದರು.

ಚಿಕ್ಕಮಗಳೂರು ಕ್ಷೇತ್ರದಿಂದ ಪಾರ್ಲಿಮೆಂಟಿಗೆ ಚುನಾವಣೆಗೆ ನಿಲ್ಲಬೇಕೆಂದು ಕೇಳಿಕೊಂಡರು. ಆ ಬೇಡಿಕೆಗೆ ಉಹುಂ ಎಂದರು.

ನಮ್ಮ ರಾಜ್ಯಕ್ಕೆ ಜನತಾ ದಳದ ಜೆ.ಹೆಚ್. ಪಟೇಲರು ಮುಖ್ಯಮಂತ್ರಿಯಾಗಿದ್ದಾಗ, ದೇವೇಗೌಡರು ಪ್ರಧಾನಮಂತ್ರಿಯಾಗಿದ್ದ ಕಾಲದ ಮಾತು- ಇವರನ್ನು MLC ಆಗಲು ಆಹ್ವಾನಿಸಿದರು- ನಕಾರ.

ತುಮಕೂರಿನ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಗಾದಿಗೆ ಇವರನ್ನು ತುಂಬ ಒತ್ತಾಯ ಮಾಡಿ ಕೇಳಿಕೊಂಡಿದ್ದರು. ಒಂದು ಪ್ರೆಸ್ ಮೀಟ್ ಅಲ್ಲಿ ಹೇಳಿದ್ದು, ‘ನಾನು ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗದೇ ಸಾಯುವವನು’ ಎಂದರು.

ವಿವೇಕ ರೈರವರ ಕಾಲದಲ್ಲಿ ನಾಡೋಜ ಪ್ರಶಸ್ತಿ ನೀಡಲು ಎರಡೆರಡು ಸಲ ಒತ್ತಾಯ ಮಾಡಿದರು. ವಿವೇಕ್ ರೈಯವರು ಮನೆಗೇ ಬಂದು ಕೇಳಿಕೊಂಡರು. ಇವರು ಸ್ವೀಕರಿಸಲೊಪ್ಪಲಿಲ್ಲ.

ಮೈಸೂರು ವಿಶ್ವವಿದ್ಯಾಲಯ 2004 ಜನವರಿ 22 ರಂದು ನಡೆದ ಘಟಿಕೋತ್ಸವದಲ್ಲಿ ಆರ್.ಕೆ. ಲಕ್ಷ್ಮಣ್, ಎಚ್.ವೈ. ಶಾರದಾ ಪ್ರಸಾದ್, ಜಿ.ಎಸ್. ಶಿವರುದ್ರಪ್ಪ ಹಾಗೂ ತೇಜಸ್ವಿಗೂ ಗೌರವ ಡಾಕ್ಟರೇಟ್ ಕೊಡಲು ತೀರ್ಮಾನಿಸಿತ್ತು. ಆದರೆ ತೇಜಸ್ವಿ ಆ ಪದವಿಯನ್ನು ಸ್ವೀಕರಿಸಲು ನಿರಾಕರಿಸಿದರು.

2005 ರಲ್ಲಿ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದವರೂ ಗೌರವ ಡಾಕ್ಟರೇಟು ಪದವಿ ಕೊಡುತ್ತೇವೆಂದರು. ಇವರು ಒಪ್ಪಿಕೊಳ್ಳಲಿಲ್ಲ.

ಅಮೆರಿಕಾಗೆ ಬಂದು ಲೆಕ್ಚರ್ ಕೊಡುವಿರಾ ಎಂದು ರಾಜೀವ ತಾರನಾಥರು ಒತ್ತಾಯಿಸಿದರು, ಆಹ್ವಾನಿಸಿದರು. ಉಹುಂ.

2007 ರಲ್ಲಿ ತೇಜಸ್ವಿ ಆರೋಗ್ಯ ಪೂರ್ತಿ ಸುಧಾರಿಸಿದ ಸಂದರ್ಭ- ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಾದೇಶಿಕ ಸೆಕ್ರೆಟರಿ ಅಗ್ರಹಾರ ಕೃಷ್ಣಮೂರ್ತಿಯವರು ಇವರನ್ನು ಸಂಪರ್ಕಿಸಿ ಮೆಕ್ಸಿಕೋ, ಚೈನಾಕ್ಕೆ ಪತ್ನೀ ಸಮೇತರಾಗಿ ಹೋಗಿ ಬನ್ನಿರೆಂದು ಒತ್ತಾಯ ಮಾಡಿದ್ದರು. ಯಾವ ಊರಿಗೇ ಹೋಗುವುದಾದರೂ ನಮ್ಮ ಖರ್ಚಿನಲ್ಲಿ ನಾವು ಹೋಗಬೇಕು ಎಂದುಕೊಂಡರು. ಹೇಳುವುದಾದರೆ, ಪಟ್ಟಿ ದೊಡ್ಡದಿದೆ…”

ಕೃಪೆ: -‘ನನ್ನ ತೇಜಸ್ವಿ’ (ಪುಸ್ತಕ, ಪುಟ: 495-496, ಆರನೆಯ ಮುದ್ರಣ, 2021)
••••••••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ…. ✒️
ಚಿಕ್ಕಮಗಳೂರು

About Author

Leave a Reply

Your email address will not be published. Required fields are marked *

You may have missed