ವಿಶ್ವ ಭ್ರಾತೃತ್ವ ಮೂಡಿಸುವಲ್ಲಿ ಸ್ಕೌಟಿಂಗ್ ಚಳುವಳಿಯ ಮಹತ್ವದ ಪಾತ್ರ…..
1 min read
ವಿಶ್ವ ಭ್ರಾತೃತ್ವ ಮೂಡಿಸುವಲ್ಲಿ ಸ್ಕೌಟಿಂಗ್ ಚಳುವಳಿಯ ಮಹತ್ವದ ಪಾತ್ರ
ಚಿಕ್ಕಮಗಳೂರು: ಸರ್ವಜನಾಂಗದ ಶಾಂತಿಯ ತೋಟ ಎಂದು ಸಾರುವ ರಾಷ್ಟ್ರಕವಿ ಕುವೆಂಪುರವರ ಭಾವನೆಯಂತೆ ಜಾಗತಿಕ ಸ್ವಾರ್ಥ ಮತ್ತು ದೇಶಗಳಿಂದ ತಮ್ಮದೇ ದೇಶದಲ್ಲಿ ನಿರಾಶ್ರಿತರಾದ ಪರ್ಶಿಯಾದ ಪಾರ್ಸಿಗಳು, ಜರ್ಮನಿಯ, ಯಹೂದಿಗಳು, ಟಿಬೆಟ್ಟಿನ ಮೂಲ ನಿವಾಸಿಗಳೆಲ್ಲರಿಗೂ ಆಶ್ರಯ ನೀಡಿ ಸಹೋದರರಂತೆ ಸ್ವೀಕರಿಸಿದ ಉದಾತ್ತಗುಣ ಭಾರತೀಯರದ್ದು ಎಂದು ಜಿಲ್ಲಾ ಸೈಟ್ ಮತ್ತು ಗೈಡ್ಸ್ ಸಂಸ್ಥೆಯ ಪ್ರಧಾನ ಆಯುಕ್ತ ಎಂ.ಎನ್.ಷಡಕ್ಷರಿ ನುಡಿ ದರು.
ಅವರು ನಗರದ ಹೊಸ ಮನೆ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಿರುವ ಭವ್ಯ ಪ್ರೀಡಮ್ ಪಾರ್ಕ್ನಲ್ಲಿ ಆಯೋಜಿಸಲಾಗಿದ್ದ ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಯ ರಾಜ್ಯ ಪುರಸ್ಕಾರ ಸೌಟ್ಸ್ ಮತ್ತು ಗೈಡ್ಸ್ನ ಪರಿಕ್ಷಾ ಶಿಭಿರದ ಅಂಗವಾಗಿ ಇಂದು ಮುಂಜಾನೆ ಹಮ್ಮಿ ಕೊಳ್ಳಲಾಗಿದ್ದ ಸರ್ವಧರ್ಮ ಪ್ರಾರ್ಥನೆಯ ಸುಮಾರು 400 ಮಕ್ಕಳನ್ನುದ್ದೇಶಿಸಿ ಮಾತನಾಡಿದರು.
ಅವರು ಮುಂದು ವರೆದು ವಿದೇಶಗಳಲ್ಲಿ ನೆಲೆಸಿ ಅವರವರ ಬದುಕು ಕಂಡು ಕೊಂಡಿರುವ ಅಸಂಖ್ಯಾತ ಭಾರತೀಯರು ಆಯಾ ಆಯಾ ದೇಶಗಳ ಆಚಾರ ವಿಚಾರಗಳನ್ನು ತಮ್ಮದಾಗಿಸಿ ಕೊಂಡು, ಆನೆಲವನ್ನು ಪ್ರೀತಿಸಿ, ವಿವಿಧ ರಂಗಗಳಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿರುವುದನ್ನು ಕಂಡಿದ್ದೇವೆ
ಭಾರತೀಯರೆಂದೂ ಆ ದೇಶಗಳಲ್ಲಿ ತಮ್ಮ ಜೀವನ ಕ್ರಮಗಳನ್ನು ಹೇರಲು ಪ್ರಯತ್ನಿಸಿಲ್ಲ. ಜಗತ್ತಿನಾದ್ಯಂತ 55 ಮಿಲಿಯನ್ ಸದಸ್ಯರನ್ನೊಳಗೊಂಡ ನಮ್ಮ ಸೈಟ್ ಚಳುವಳಿಯ ಸದಸ್ಯರಾದ ನೀವುಗಳು ಅದರ ಮುಖ್ಯ ಧೈಯವಾದ, “ಇಡೀ ಜಗತ್ತಿನ ವಾಸಿಗಳೆಲ್ಲರೂ ನಮ್ಮ ಸಹೋದರ, ಸಹೋದರಿಯರು,” ಎನ್ನುವ ದಿಸೆಯಲ್ಲಿ ಆಲೋಚಿಸಿ ಅದರಂತೆ ಕಾರ್ಯ ಪ್ರವೃತ್ತರಾಗಬೇಕೆಂದು ಕರೆಯಿತ್ತರು.
ಸುಂದರ ಫ್ರೀಡಮ್ ಪಾರ್ಕ್ ನಿರ್ಮಾಣಮಾಡಿ ಕೊಟ್ಟಿರುವ ದಾನಿಗಳಾದ ಜಯಶಂಕರ್ ಮತ್ತು ಗುರುಮೂರ್ತಿ ಸಹೋದರರು ಬ್ರಿಗೃಡ್ ಗ್ರೂಪ್ ವತಿಯಿಂದ ನಗರದ ಜನತೆಗೆ ಅರ್ಪಿಸಿರುವ ವಿಶಾಲ ಹೃದಯಿಗಳು, ಇದು ಅವರು ತಮ್ಮ ಹುಟ್ಟೂರಿಗೆ ಸಲ್ಲಿಸಿರುವ ಒಂದು ಅದ್ಭುತ ಕೊಡುಗೆ ಎಂದು ತ್ಯಾಗಿಸಿದರು .
ಫ್ರೀಡಂ ಪಾರ್ಕ್ ನಿರ್ವಾಹಕರಾದ ಜಯಶ್ರೀ ಸಂತೋಷ್ ರವರು ಮಾತನಾಡಿ ಶಿಸ್ತಿನಿಂದ ಕೂಡಿದ ಈ ಎಳೆಯರ ಸಮೂಹದ ಅರ್ಥಪೂರ್ಣ ಸರ್ವಧರ್ಮ ಪ್ರಾಥನೆಯು ಈಸ್ಮಾರಕದ ಉದ್ದೇಶ್ಯವನ್ನು ಸಾರ್ಥಕೊಳಿಸಿದೆ ಎಂದರು.
ಪಾರ್ಥನೆಯ ನೇತೃತ್ವವನ್ನು ನಾಯಕರಾಗಿ ಆಗಮಿಸಿದ್ದ ಹಾಸನದ ಕಾತ್ಯಾಯಿನಿ ಹಾಗೂ ತುಮಕೂರಿನ ಗಂಗಾಧರ್ ರವರು ವಹಿಸಿದ್ದರು. ಜಿಲ್ಲಾ ಸಂಸ್ಥೆಯ ಪದಾಧಿಕಾರಿಗಳು, ರಾಜ್ಯ ಸಂಸ್ಥೆಯ ಪ್ರತಿನಿಧಿಗಳಾಗಿ ಆಗಮಿಸಿದ್ದ ತರಬೇತುದಾರರು ಮತ್ತು ಎರಡೂ ಜಿಲ್ಲೆಗಳ ದಳ ನಾಯಕರುಗಳು ಭಾಗವಹಿಸಿದರು.
ವರದಿ….
ರಕ್ಷಿತ್ ಬಾಳೂರು.


