लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

 

ಶ್ರೀ ವಿದ್ಯಾ ಭಾರತಿ ವಿದ್ಯಾಸಂಸ್ಥೆ ( ರಿ) ಬಣಕಲ್.ಮೂಡಿಗೆರೆ ತಾಲ್ಲೂಕು ಇಲ್ಲಿ ದಿನಾಂಕ:29:11:2025 ಶನಿವಾರದಂದು 39ನೇ ಶಾಲಾ ವಾರ್ಷಿಕೋತ್ಸವದ ಅಂಗವಾಗಿ ನಡೆದ ಪೋಷಕರ ದಿನಾಚರಣೆಯಲ್ಲಿ ಶಾಲಾ ಪೋಷಕರು ತಮ್ಮ ಮಕ್ಕಳ ಎದುರಿನಲ್ಲಿ ಮಕ್ಕಳಂತೆ ವಿವಿಧ ಆಟೋಟ ಸ್ಪರ್ಧೆಯಲ್ಲಿ ಕುಣಿದು ಕುಪ್ಪಳಿಸಿದರು.
ಕಾರ್ಯಕ್ರಮದ ಮೊದಲಿಗೆ ಪೋಷಕರು ಮತ್ತು ಅತಿಥಿಗಳನ್ನು ಪೂರ್ಣಕುಂಭದೊಂದಿಗೆ ಪುಷ್ಪಾರ್ಚನೆ ಮೂಲಕ ಸ್ವಾಗತಿಸಲಾಯಿತು. ನಂತರ ಮಕ್ಕಳಲ್ಲಿ ವ್ಯಾಪಾರದ ಮನೋಭಾವನೆಯನ್ನು ಬೆಳೆಸುವ ಉದ್ದೇಶದಿಂದ ವಿವಿಧ ಸ್ಟಾಲ್ ಗಳ ಮೂಲಕ ಮಕ್ಕಳು ವ್ಯಾಪಾರದಲ್ಲಿ ತೊಡಗಿ ತಾವು ಮನೆಯಿಂದ ತಂದ ವಿವಿಧ ಬಗೆಯ ತಿಂಡಿ,ಪಾನಿಯಗಳು, ತರಕಾರಿಗಳನ್ನು ಮಾರಾಟ ಮಾಡಿ ವ್ಯಾಪಾರ ಅನುಭವವನ್ನು ಪಡೆದುಕೊಂಡರು.ಹಾಗೂ ಮಕ್ಕಳೇ ಸಂಗ್ರಹಿಸಿದ ಹಳೆಯ ಅಪರೂಪದ ಗೃಹೋಪಯೋಗಿ ವಸ್ತುಗಳು, ಕೃಷಿ ಉಪಕರಣಗಳ ಸಂಗ್ರಹಾಲಯ.ವಿವಿಧ ಗಿಡಮೂಲಿಕೆಗಳ ಸಂಗ್ರಹಾಲಯ, ಕ್ರಾಫ್ಟ್ ಮೇಳ, ವಿಜ್ಞಾನ ಮೇಳ, ಮತ್ತು ಮಕ್ಕಳು ತಯಾರಿಸಿದ ಮಣ್ಣಿನ ಮಾದರಿಗಳು ಪೋಷಕರು ಮತ್ತು ಅತಿಥಿಗಳನ್ನು ಆಕರ್ಷಿಸುವ ಜೊತೆಗೆ ಬೆರಗು ಮೂಡಿಸಿದವು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಬಿ.ಶಿವರಾಮ ಶೆಟ್ಟಿ ವಹಿಸಿದ್ದರು.ಮುಖ್ಯ ಅತಿಥಿಯಾಗಿ ಆಗಮಿಸಿದ ಸಮಾಜ ಸೇವಕರು, ದಾನಿಗಳು ಮತ್ತು ರೈತ ಮಹಿಳೆ ಶ್ರೀಮತಿ ಅಶ್ವಿನಿ ಸಂತೋಷ್ ಮಾತನಾಡಿ ವಿದ್ಯಾಭಾರತಿ ಶಿಕ್ಷಣ ಮತ್ತು ಶಿಕ್ಷಣಕ್ಕೆ ಪೂರಕವಾದ ವಿಭಿನ್ನವಾದ ಕಾರ್ಯಕ್ರಮಗಳನ್ನು ರೂಪಿಸಿ ಅದನ್ನು ಅನುಷ್ಠಾನಕ್ಕೆ ತರುವಲ್ಲಿ ಯಶಸ್ವಿಯಾಗಿದೆ. ಮುಂದೆಯು ಈ ಸಂಸ್ಥೆಯ ಕಾರ್ಯಚಟುವಟಿಕೆಗಳು ಮತ್ತಷ್ಟು ವಿದ್ಯಾರ್ಥಿಗಳ ಬದುಕಿಗೆ ದಾರಿದೀಪವಾಗಲಿ ಹಾಗೂ ವಿದ್ಯಾ ಸಂಸ್ಥೆ ಇನ್ನಷ್ಟು ಅಭಿವೃದ್ಧಿಯ ಪಥದಲ್ಲಿ ಸಾಗಲಿ ಎಂದರು.
ಇವರೊಂದಿಗೆ ಕರ್ನಾಟಕ ಬ್ಯಾಂಕ್ ಬಣಕಲ್ ಶಾಖೆಯ ವ್ಯವಸ್ಥಾಪಕರಾದ ಮಂಜುನಾಥ್.ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷ ಬಿ.ಇ.ಸುಬ್ರಾಯಗೌಡ. ಕಾರ್ಯದರ್ಶಿ ಡಿ.ಪಿ. ಲಿಂಗಪ್ಪ. ಕೋಶಾಧಿಕಾರಿ ಯು.ಪಿ.ರಾಮಚಂದ್ರ ಹೊಳ್ಳ.ಪ್ರೌಢಶಾಲಾ ಮುಖ್ಯ ಶಿಕ್ಷಕಿ ಟಿ.ಆರ್.ಮಾಲತಿ. ಪ್ರಾಥಮಿಕ ಶಾಲಾ ಮಾಖ್ಯ ಶಿಕ್ಷಕ ಸಿ. ನಾಗರಾಜು.ಅತಿಥಿ ಪೋಷಕರಾದ ಶಂಕರ್ ಮತ್ತು ಪ್ರಮೀಳಾ ಡಿಸೋಜ ಉಪಸ್ಥಿತರಿದ್ದರು.
ಈ ದಿನ ವೇದಿಕೆಯಲ್ಲಿ ಶಾಲಾ ವಾರ್ಷಿಕೋತ್ಸವದ ಅಂಗವಾಗಿ ವಾಲಾ ವಿದ್ಯಾರ್ಥಿಗಳಿಗೆ ನಡೆಸಲಾದ ಪಠ್ಯೇತರ ಚಟುವಟಿಕೆ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನಡೆಯಿತು.ನಂತರ ಶಾಲಾ ಪೋಷಕರಿಗೆ ವಿವಿಧ ರೀತಿಯ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಪೋಷಕರು ಬಹಳ ಆಸಕ್ತಿ ಮತ್ತು ಉತ್ಸಾಹದಿಂದ ಭಾಗವಹಿಸಿದ್ದರು.ಇದರಲ್ಲಿ ವಿಜೇತರಾದ ಪೋಷಕರಿಗೆ ಬಹುಮಾನಗಳನ್ನು ಡಿಸೆಂಬರ್ 27ರಂದು ನಡೆಯುವ 39ನೇ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ನೀಡಲಾಗುವುದು.
ಇಡೀ ದಿನ ನಡೆದ ಯಶಸ್ವಿ ಕಾರ್ಯಕ್ರಮದಲ್ಲಿ ಪ್ರೌಢಶಾಲಾ ವಿಭಾಗದ ಉಪ ಮುಖ್ಯಶಿಕ್ಷಕ ವಸಂತ್ ಹಾರ್ಗೋಡು.ಶಿಕ್ಷಕರಾದ ಭಕ್ತೇಶ್.ಶೇಖರಪ್ಪ.ವಿಜಯೇಂದ್ರ.ಅಶ್ವತ್.ಲೋಕೇಶ್.ಲಿಂಗರಾಜು.ಪ್ರತಾಪ್.ನೃತ್ಯ ಶಿಕ್ಷಕ ಕಿಶೋರ್.ಲೀಲಾಮಣಿ.ಗೀತಾ.ಕಮಲಮ್ಮ.ಪದ್ಮಶ್ರೀ.ಶ್ವೇತಾ.ಅಶ್ವಿತಾ.ಆಶಾ.ಪೂಜಾ.ಅನುಷ.ಕನ್ನಿಕಾ.ಸಂಗೀತ.ಪ್ರೀತಿ.ಚಂದನ.ಆರೋಗ್ಯವಾಣಿ.ಸುಶ್ಮಿತಾ.ಕುಸುಮ ಶೆಟ್ಟಿ.ಸಿಬ್ಬಂದಿವರ್ಗ.ಅಡುಗೆಸಿಬ್ಬಂದಿ.ವಿದ್ಯಾರ್ಥಿಗಳು.ಮತ್ತು ಪೋಷಕರು ಭಾಗವಹಿಸಿದ್ದರು.

About Author

Leave a Reply

Your email address will not be published. Required fields are marked *

You may have missed