ಸರ್ಕಾರಿ ಶಾಲೆಗಳಿಗೆಬೀಗಮುದ್ರೆ…
1 min read
ಸರ್ಕಾರಿ ಶಾಲೆಗಳಿಗೆಬೀಗಮುದ್ರೆ
ಬಂಧುಗಳೇ ಸರ್ಕಾರ kps ಮ್ಯಾಗ್ನೆಟ್ ಶಾಲೆ ತೆರೆಯಲು ನಿರ್ಣಯಿಸಿದೆ ಅಂದರೆ ಗ್ರಾಮಪಂಚಾಯಿತಿ ಗೆ ಒಂದು ಶಾಲೆ. ಆ ಶಾಲೆಗೆ ಆ ಗ್ರಾಮಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳ ಮಕ್ಕಳನ್ನು ಒಂದೆಡೆ ಸೇರಿಸುವುದು, ಇದರಿಂದ ಏನೂ ಪ್ರಾಬ್ಲಮ್ ಆಗುತ್ತದೆ. ಸಮಸ್ಯೆ ಇದೆ ಇದರ ಬಗ್ಗೆ ಗಂಭೀರವಾದ ಚರ್ಚೆ ಆಗಲೇಬೇಕು, ಸರ್ಕಾರ ಗ್ರಾಮಪಂಚಾಯಿತಿ ಗೆ ಒಂದರಂತೆ ಶಾಲೆ ಆರಂಭಿಸಿ ಹಳ್ಳಿಯಲ್ಲಿರುವ ಶಾಲೆಗಳನ್ನು ಮುಚ್ಚಲು ಮಾಡಿರುವ ಹುನ್ನಾರ ಇರಬಹುದಾ. ಇದರಿಂದ ಮಧ್ಯಮ ವರ್ಗದ ಬಡವರ ಮಕ್ಕಳು ಶಿಕ್ಷಣದಿಂದ ವಂಚಿತರಗುವ ಸಾಧ್ಯತೆ ಹೆಚ್ಚಿದೆ, ಅನಕ್ಷರತೆ ಹೆಚ್ಚಾಗಬಹುದು, ಜೀತಾ ಪದ್ಧತಿ ಆರಂಭ ಆಗಬಹುದು ಹಾಗೂ ಸಾಮಾಜಿಕ ದೌರ್ಜನ್ಯ ಗಳು ಹೆಚ್ಚಾಗಬಹುದು ಹೆಚ್ಚರ ಬಂಧುಗಳೇ, ಸಚಿವರೆ ಶಾಸಕರುಗಳೇ, ಮುಖ್ಯ ಮಂತ್ರಿಗಳೇ ನಿಮಗೆ ಸರ್ಕಾರಿ ಶಾಲೆ ಗಳ ಬಗ್ಗೆ ಉತ್ಸಹ ಇದ್ದಾರೆ ಇರೋ ಶಾಲೆಗಳನ್ನ ಉನ್ನತಿಕರಿಸಿ. ಅವುಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಿ, ಇರೋ ಶಾಲೆಯಲ್ಲಿ ಇಂಗ್ಲಿಷ್ ಮಾಧ್ಯಮ ಪ್ರಾರಂಭಿಸಿ, ಹೊಸ ಶಾಲೆಗೆ ಹಾಕೋ ಹಣವನ್ನೇ ಇರೋ ಶಾಲೆಗಳಿಗೆ ವಿನಿಯೋಗಿಸಿ ಖಾಸಗಿ ಶಾಲೆಗಳಿಗಿಂತ ಹೆಚ್ಚಿನ ಸೌಲಭ್ಯ ಕಲ್ಪಿಸಿ ಕೊಡಿ, ನೀವು 6000ಶಾಲೆ ತೆರೆದು ಸುಮಾರು 30000 ಕ್ಕೂ ಹೆಚ್ಚಿನ ಶಾಲೆಗಳನ್ನು ಮುಚ್ಚುಹುದು ಬೇಡ, ಇದರಿಂದ ಶಿಕ್ಷಕರು ತಮ್ಮ ಕೆಲಸ ಕಳೆದು ಕೊಳ್ಳುವ ಸಂದರ್ಭ ಎದುರಾಗಬಹುದು, ಒಬ್ಬ ಖಾಸಗಿ ಶಾಲೆಯ ಮಾಲೀಕ ತನ್ನ ಶಾಲೆಯನ್ನು ಅಭಿವೃದ್ಧಿಗೊಳಿಸಿ ಶಾಲೆಯನ್ನು ಮೇಲ್ದರ್ಜೆಗೆ ಸಾಗಿಸಿದರೆ. ನಾವುಗಳು ವೋಟ್ ಮಾಡಿ ಗೆಲ್ಲಿಸಿದ ಇವರುಗಳು ಸರ್ಕಾರಿ ಶಾಲೆಗಳನ್ನು ಮುಚ್ಚಲು ನೋಡುತ್ತಾರೆ. ದುಡ್ಡಿದೆ ಅಧಿಕಾರ ಇದೆ ಎಲ್ಲ ಸೌಲಭ್ಯ ಇದೆ ಆದರೂ ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳಂತೆ ಅಭಿರುದ್ದಿ ಗೊಳಿಸಲು ಆಗುತ್ತಿಲ್ಲ, ಅನವಶ್ಯಕವಾಗಿ ಬೇಡದ ಯೋಜನೆಗೆ ವ್ಯರ್ಥ ಮಾಡುವ ಹಣವನ್ನು. ಶಿಕ್ಷಣ ಆರೋಗ್ಯ ಕ್ಷೇತ್ರಕ್ಕೆ ವಿನಿಯೋಗಿಸಿ ಅಭಿವೃದ್ಧಿ ಪಡಿಸಿ, ಇಂತಹ ವಿಷಯದ ಬಗ್ಗೆ ಯುವ ಸಮೂಹ ಮಾತನಾಡಬೇಕು,ಚರ್ಚೆ ಮಾಡಬೇಕು ತಮ್ಮ ತಮ್ಮ ಬೆಂಬಲಿತ ಸರ್ಕಾರವನ್ನು ಮತ್ತು ನಾಯಕರನ್ನು ಮೆರೆಸುಹುದು ಬಿಟ್ಟು,ಅಭಿವೃದ್ಧಿ ಕಡೆ ಹೆಚ್ಚು ಒತ್ತು ನೀಡಬೇಕು, ತಪ್ಪಿರುವುದನ್ನು ಪ್ರಶ್ನೆ ಮಾಡಬೇಕಿದೆ, ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳಬೇಕಿದೆ, ಲಕ್ಷಗಟ್ಟಲೆ ಹಣ ಕಟ್ಟಿ ಖಾಸಗಿ ಶಾಲೆಯಲ್ಲಿ ವಿದ್ಯಾಭ್ಯಾಸ ಕೊಡಿಸಲು ಕೂಲಿ ಕಾರ್ಮಿಕರಿಗೆ ಸಾಧ್ಯವಾಗುವುದಿಲ್ಲ, ಬಹುತೇಕ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವವರು ಕೂಲಿ ಕಾರ್ಮಿಕರ ಮಕ್ಕಳು, ಅವರ ಮಕ್ಕಳು ಶಿಕ್ಷಣದಿಂದ ವಂಚಿತಾರಾಗಬಾರದು. ಸರ್ಕಾರಿ ಶಾಲೆಗಳನ್ನು ಉನ್ನತಿ ಕರಿಸಿ ಅಭಿವೃದ್ಧಿ ಗೊಳಿಸಿ ಉಳಿಸಿಕೊಳ್ಳಬೇಕಿದೆ ಸರ್ಕಾರ
✍️ನವೀನ್ ಕಣಚೂರು

