लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಲಿಖಿತ ಸಂವಿಧಾನ ಮೌನವಾಗಿದೆ, ಅಲಿಖಿತ ಸಂವಿಧಾನ ಮಾತನಾಡುತ್ತಿದೆ”…

1 min read

” ಲಿಖಿತ ಸಂವಿಧಾನ ಮೌನವಾಗಿದೆ, ಅಲಿಖಿತ ಸಂವಿಧಾನ ಮಾತನಾಡುತ್ತಿದೆ”
🤫🤫🤫 😬😬😬

ಭಾರತದಲ್ಲಿರುವ ಪ್ರತಿಯೊಂದು ಗಿಡ, ಮರ, ಮಣ್ಣು, ನದಿ, ತೊರೆ, ಬೆಟ್ಟಗುಡ್ಡಗಳು, ಖನಿಜ ಸಂಪನ್ಮೂಲಗಳು, ಪ್ರಾಣಿ, ಪಕ್ಷಿಗಳು, ಅಷ್ಟೇ ಅಲ್ಲದೆ ನಾಡು, ನುಡಿ, ಸಂಸ್ಕೃತಿ ಆಚಾರ ವಿಚಾರಗಳನ್ನು ರಕ್ಷಿಸುವ ಏಕೈಕ ಲಿಖಿತ ರೂಪದ ಬರಹವೇ ಭಾರತದ ಸಂವಿಧಾನ.

ಸುಮಾರು 02 ಶತಮಾನಗಳ ಕಾಲ ಆಂಗ್ಲರು ಭಾರತದಲ್ಲಿ ವಸಾಹತುಶಾಹಿ ಆಳ್ವಿಕೆಯನ್ನು ನಡೆಸಿ, ದ್ವಿತೀಯ ಮಹಾಯುದ್ಧದ ನಂತರ ಇಂಗ್ಲೆಂಡ್ ದೇಶ ಆರ್ಥಿಕವಾಗಿ ದಿವಾಳಿಯಾಯಿತು. ನಂತರ ತನ್ನ ದೇಶದಲ್ಲೇ ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ಸಲುವಾಗಿ ಆಗಸ್ಟ್ ತಿಂಗಳ 15 1947 ದಿನದಂದು ಭಾರತಕ್ಕೆ ಅಧಿಕಾರ ಹಸ್ತಾಂತರಿಸಿದರು.

ಭಾರತಕ್ಕೆನೋ ಅಧಿಕಾರ ಬ್ರಿಟೀಷರಿಂದ ಅಧಿಕಾರ ಹಸ್ತಾಂತರವಾಯಿತು. ಆದರೆ ಅಧಿಕಾರ ನಡೆಸುವುದು ಹೇಗೆ? ಎಂತು? ಎಂದು ಭಾರತೀಯರಿಗೆ ದಿಕ್ಕೇ ತೋಚಲಿಲ್ಲ.
ಉದಾ: ಕಷ್ಟಪಟ್ಟು ಒಂದು ಪೆನ್ನನ್ನು ತೆಗೆದುಕೊಂಡಿದ್ದೇವೆ ಆದರೆ ಅದನ್ನು ಬಳಸುವುದು ಹೇಗೆ? ಏನನ್ನು? ಬರೆಯಬೇಕು. ಯಾವ ರೀತಿ ಬರೆದರೆ ತೊಂದರೆಯಾಗುತ್ತದೆ? ಯಾವ ರೀತಿ ಬರೆದರೆ ತೊಂದರೆ ಆಗುವುದಿಲ್ಲ? ಎಂಬಾ ಗೊಂದಲ ಇರುವಾಗ, ಹೇಗೆ ಬರೆಯಬೇಕು, ಏನನ್ನು ಬರೆಯಬೇಕು, ಎಂಬುದನ್ನು ಹೇಳಿಕೊಟ್ಟ ಏಕೈಕ ಲಿಖಿತ ರೂಪದ ಬರಹದ ಪೆನ್ನೇ ಭಾರತದ ಸಂವಿಧಾನ.

ಬಹು ಸಂಖ್ಯಾತ ಭಾರತೀಯರ ನ್ನೋಳಗೊಂಡ ದೇಶದಲ್ಲಿ ವಿವಿಧ ಜಾತಿ, ಧರ್ಮ, ಭಾಷೆ, ಸಂಸ್ಕೃತಿ ಇರುವ ದೇಶದಲ್ಲಿ ಎಲ್ಲರನ್ನೂ ಒಳಗೊಳ್ಳುವಂತಹ ಸಂವಿಧಾನವನ್ನು ಬರೆಯುವುದು ಅಂದಿನ ಕಾಲಕ್ಕೆ ಸವಾಲಿನ ಕೆಲಸವೇ ಆಗಿತ್ತು. ಕೋಟ್ಯಾಂತರ ಭಾರತೀಯರಿರುವ ಬೃಹತ್ ದೇಶದಲ್ಲಿ ಸಂವಿಧಾನ ರಚಿಸುವ ಜವಾಬ್ದಾರಿಯನ್ನು ಹೊತ್ತು ಕೊಂಡವರು ನಿಜವಾದ ಭಾರತೀಯ, ನಿಜವಾದ ದೇಶ ಪ್ರೇಮಿ, ನಿಜವಾದ ಜಾತ್ಯಾತೀತ ನಾಯಕ ವಿಶ್ವಜ್ಞಾನಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು. 02 ವರ್ಷ 11 ತಿಂಗಳು 18 ದಿನಗಳ ಕಾಲ ವಿಶ್ವದ ಅನೇಕ ದೇಶಗಳ ಸಂವಿಧಾನಗಳನ್ನು ಅಧ್ಯಯನ ಮಾಡಿ ಪ್ರಮುಖವಾಗಿ 60 ದೇಶಗಳ ಸಂವಿಧಾನದ ಕೆಲವೊಂದು ಅಂಶಗಳನ್ನು ಭಾರತೀಯ ಭೌಗೋಳಿಕ ಸ್ಥಿತಿಗತಿಗಳಿಗೆ ಅನ್ವಯಿಸುವಂತೆ ಎರವಲು ಪಡೆದುಕೊಂಡು ಭಾರತಕ್ಕೆ ಬೃಹತ್ ಸಂವಿಧಾನವನ್ನು 26 ನೇ ನವಂಬರ್ 1949ನೇ ದಿನದಂದು ಅರ್ಪಿಸಿದರು. 02 ವರ್ಷ 11 ತಿಂಗಳು 18 ದಿನಗಳ ಕಾಲ ಅವರ ಶ್ರಮವನ್ನು ಊಹಿಸಲು ಸಾಧ್ಯವಿಲ್ಲ. ಅದು ಭಾರತೀಯನ ನಿಜವಾದ ದೇಶ ಪ್ರೇಮ.

ಪೂರ್ಣ ಸ್ವರಾಜ್ ನೆನಪಿಗಾಗಿ ಜನವರಿ 26 ನೇ 1950 ರಂದು ಮೂಲ ಸಂವಿಧಾನ ಜಾರಿಗೆ ಬಂದಿತು ನಿಜ. ಆದರೆ ಯಾರಿಗೆ? ಎಲ್ಲಿಗೆ?ಎಂಬುದೇ ಮೂಲ ಪ್ರಶ್ನೆ.?

1950 ರಿಂದ ಇಲ್ಲಿಯವರೆಗೆ ಸುಮಾರು 106 ಬಾರಿ ಅಭಿವೃದ್ಧಿಯ ನೆಪ ಹೇಳಿಕೊಂಡು ಕಾಲಕಾಲಕ್ಕೆ ಸಂವಿಧಾನವನ್ನು ತನ್ನ ಇಚ್ಛೆಗನುಸಾರವಾಗಿ ತಿದ್ದುಪಡಿ ಮಾಡಿಕೊಂಡೆ ಬರಲಾಗುತ್ತಿದೆ.
ಅಧಿಕಾರದ ಉಳಿವಿಗಾಗಿ ಭಾರತದ ಸಂವಿಧಾನವನ್ನೇ ದುರುಪಯೋಗ ಪಡಿಸಿಕೊಂಡವರೇ ಹೆಚ್ಚು. ಬಹುಮುಖ್ಯವಾಗಿ ರಾಜೀವ್ ಗಾಂಧಿಯವರು 1989 ರಲ್ಲಿ ಸಂವಿಧಾನಕ್ಕೆ 61ನೇ ತಿದ್ದುಪಡಿಯನ್ನು ಮಾಡಿ ಮತದಾನದ ವಯಸ್ಸನ್ನು 21ರಿಂದ 18 ವರ್ಷಕ್ಕೆ ಇಳಿಸಿದರು. ಇದು ಭಾರತದ ಚುನಾವಣಾ ವ್ಯವಸ್ಥೆಗೆ ದೊಡ್ಡ ಹಿನ್ನಡೆ. ಏಕೆಂದರೆ, ಪೂರ್ವೋತ್ತ ದೇಶವಾದ ಭಾರತೀಯರಲ್ಲಿ ಭೌತಿಕತೆ ಬೆಳವಣಿಗೆಯಾಗಲು ಕನಿಷ್ಠ 21 ವರ್ಷ ವಯಸ್ಸಾಗಬೇಕೆಂದು ಡಾ. ಬಿ ಆರ್ ಅಂಬೇಡ್ಕರ್ ರವರು ಮನಗೊಂಡು ಮೂಲ ಸಂವಿಧಾನದಲ್ಲಿ ಮತದಾನದ ಹಕ್ಕನ್ನು 21 ವರ್ಷಕ್ಕೆ ಸೀಮಿತಗೊಳಿಸಿದರು. ಆದರೆ ರಾಜೀವ್ ಗಾಂಧಿಯವರು 18 ವರ್ಷಕ್ಕೆ ಮತದಾನದ ವಯಸ್ಸನ್ನು ಇಳಿಸಿದ್ದು ಭಾರತೀಯರ ಪ್ರಸ್ತುತ ರಾಜಕೀಯ ವಿದ್ಯಾಮಾನಕ್ಕೆ ಪ್ರಮುಖ ಕಾರಣವಾಗಿದೆ. ಹಾಗೆಯೇ ಅತಿ ಪ್ರಮುಖವಾಗಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಕನಸಾಗಿದ್ದ ಭೂಮಿಯ ಒಡೆತನವನ್ನು ಎಲ್ಲಾ ಭಾರತೀಯರು ಹೊಂದಬೇಕೆಂದು ಭೂಮಿಯನ್ನು ರಾಷ್ಟ್ರೀಯ ಕರಣಗೊಳಿಸಿ ಆಸ್ತಿಯ ಹಕ್ಕನ್ನು ಮೂಲ ಸಂವಿಧಾನದಲ್ಲಿಮೂಲಭೂತ ಹಕ್ಕುಗಳ ಪಟ್ಟಿಗೆ ಸೇರಿಸಲಾಗಿತ್ತು. ಆದರೆ 1978 ರಲ್ಲಿ ಮೊರಾರ್ಜಿ ದೇಸಾಯಿ ಯವರು 44ನೇ ತಿದ್ದುಪಡಿಯಲ್ಲಿ ಆಸ್ತಿಯ ಹಕ್ಕನ್ನು ಮೂಲಭೂತ ಪಟ್ಟಿಯಿಂದ ತೆಗೆದು 300(A) ನಲ್ಲಿ ಕಾನೂನು ಹಕ್ಕಾನ್ನಾಗಿಸಿದ್ದರು. ಇದು ಮತ್ತೊಂದು ದುರಂತ. ಹೀಗೆ ಪಟ್ಟಿಯನ್ನು ಹೇಳುತ್ತಾ ಹೋದರೆ ಮೂಲ ಸಂವಿಧಾನ ತನ್ನ ಮೂಲ ಉದ್ದೇಶವನ್ನು ಕಳೆದುಕೊಂಡಂತಾಗಿದೆ.

ಬಡವರ ಪಾಲಿಗೆ ಕಾನೂನು ಎಂಬುದು ಪ್ರಸ್ತುತ ಸಂದರ್ಭದಲ್ಲಿ ಕತ್ತೆಯಂತಿದೆ, ಮುಂದೆ ಹೋದರೆ ತಿವಿಯುತ್ತದೆ, ಹಿಂದೆ ಬಂದರೆ ಒದೆಯುತ್ತಿದೆ. ಇದನ್ನು ನಿಮ್ಮ ಜ್ಞಾನ ಶಾಖೆಗೆ ವಿಸ್ತಾರಿಸಿಕೊಳ್ಳಿ.

ಕುರಿ ಕಾಣೆಯಾಗಿದೆ ಎಂದು ನ್ಯಾಯಾಲಯಕ್ಕೆ ಹೋದರೆ ಸಾಕಿದ ಆನೆಯನ್ನೇ ಮಾರಬೇಕಾದ ಪರಿಸ್ಥಿತಿ ಪ್ರಸ್ತುತ ಭಾರತೀಯರದಾಗಿದೆ. ನ್ಯಾಯಾಲಯದ ಮೇಲೂ ನಂಬಿಕೆ ಕಳೆದುಕೊಳ್ಳುವಂತ ಪರಿಸ್ಥಿತಿ ಸೃಷ್ಟಿಯಾಗಿದೆ.1991 ರ ಜಾಗತೀಕರಣ, ಉದಾರೀಕರಣ, ಖಾಸಗೀಕರಣ ನಂತರ ಭಾರತದ ಸಂವಿಧಾನದ ಮೂಲ ಆಶಯವೇ ನಾಶವಾಯಿತು. ಹಣವೇ ಪ್ರಧಾನವಾಗಿ ಕಾರ್ಯನಿರ್ವಯಿಸಲು ಪ್ರಾರಂಭಿಸಲಾಯಿತು. ಸಂವಿಧಾನದ 14 ನೇ ವಿಧಿ ಸಮಾನತೆ ಬಗ್ಗೆ ವಿವರಿಸಿದೆ ಆದರೇ ಸಮಾನತೆ ಎಂಬುದು ಮರಿಚಿಕೆ ಆಗಿದೆ ಎಲ್ಲಾ
ಕ್ಷೇತ್ರದಲ್ಲಿಯೂ ಹಣವೇ ಪ್ರಧಾನವಾಗಿದೆ. ದುರ್ಬಲರು ಸಾಯುತ್ತಿದ್ದಾರೆ, ಪ್ರಬಲರು ಬದುಕುತ್ತಿದ್ದಾರೆ.ಸಮಾನತೆಗೆ ಜಾಗವೇ ಇಲ್ಲದಂತಾಗಿದೆ.

ಸಂವಿಧಾನದಲ್ಲಿ ಸ್ಪಷ್ಟವಾಗಿ 17ನೇ ವಿಧಿಯಲ್ಲಿ ಅಸ್ಪೃಶ್ಯತೆಯ ನಿವಾರಣೆಯ ಬಗ್ಗೆ ವಿವರಿಸಿದೆ ಆದರೆ ಇಂದು ಜಾತಿ ವ್ಯವಸ್ಥೆ ಎಲ್ಲಾ ಕ್ಷೇತ್ರದಲ್ಲೂ ಗಟ್ಟಿಯಾಗಿರುವುದನ್ನು ಗಮನಿಸಿದಾಗ ಲಿಖಿತ ಸಂವಿಧಾನ ಮೌನವಾಗಿದೆ ಅಲಿಖಿತ ಸಂವಿಧಾನ ಮಾತನಾಡುತ್ತಿದೆ. ಎಂಬುದು ಸ್ಪಷ್ಟವಾಗಿ ಅರ್ಥವಾಗುತ್ತದೆ.
ಈ ಹೊತ್ತಿನಲ್ಲಿ ಸಂವಿಧಾನದ ಮೇಲೆ ಆಗಿರುವ ದಾಳಿಯನ್ನು ಅವಲೋಕನ ಮಾಡಿ ಸಂವಿಧಾನದ ಉಳಿವಿಗಾಗಿ ನಾವು ನೀವು ಒಗ್ಗಟ್ಟಿನಿಂದ ಪ್ರತಿಜ್ಞೆಯನ್ನು ಮಾಡುವುದರ ಜೊತೆಗೆ ಮೂಲ ಸಂವಿಧಾನದ ಆಶಯಗಳಿಗಾಗಿ ಒತ್ತಾಯಿಸುತ್ತಾ, ಮೂಲ ಸಂವಿಧಾನವನ್ನೇ ಜಾರಿ ಮಾಡಬೇಕು ಎಂದು ಒತ್ತಾಯಿಸಬೇಕಾಗಿದೆ. ಇಲ್ಲದಿದ್ದರೆ ಭಾರತವು ಉಳಿಯಲು ಸಾಧ್ಯವೇ ಇಲ್ಲ. ಪಾಶ್ಚಾತ್ಯ ದೇಶಗಳಿಗೆ ಹೋಲಿಸಿದರೆ ಭಾರತ ಬಹಳ ಹಿಂದಿರುವುದನ್ನು ಗಮನಿಸಿದ್ದ ಅಂಬೇಡ್ಕರ್ ಅವರು ಬಹಳ ಮುಂದಾಲೋಚನೆಯಿಂದಲೇ, ಭಾರತದ ಭೌಗೋಳಿಕ ಸ್ಥಿತಿಗತಿಗಳನ್ನು ಹಾಗೂ ಭಾರತೀಯರ ಭೌತಿಕ, ಮಾನಸಿಕ ಅಂಶಗಳನ್ನು ಗಮನಿಸಿ ಅಳಿಸಲಾರದಂತಹ ಲಿಖಿತ ಸಂವಿಧಾನವನ್ನು ಬರೆದು ಕೊಟ್ಟಿದ್ದಾರೆ. ಅದನ್ನು ಅಧ್ಯಯನ ಮಾಡದ ನಾವು ಕೇವಾಲ ಕಾರ್ಯಕ್ರಮಕ್ಕೆ ಸೀಮಿತ ಮಾಡಿ, ವಿಜೃಂಭಣೆಯಿಂದ ಆಚರಿಸುತ್ತಿದ್ದೇವೆ. ಇದು ಸರಿಯಾದ ಕ್ರಮವಲ್ಲ. ಕಾರ್ಯಕ್ರಮ ಬದಲು ಸಂವಿಧಾನದ ಜಾಗೃತ ವಿಚಾರ ಸಂಕೀರ್ಣ ಏರ್ಪಡಿಸಿ ಪ್ರಜ್ಞಾವಂತರಾದ ನಾವು ಮೂಲ ಸಂವಿಧಾನದ ಆಶಯಗಳನ್ನು ಯಥಾವತ್ತಾಗಿ ಜಾರಿ ಮಾಡಲು ಇಂದು ನಾವೆಲ್ಲ ಒತ್ತಾಯಿಸಲೇಬೇಕಾಗಿದೆ. ಪ್ರಮುಖವಾಗಿ ಚುನಾವಣೆಯಲ್ಲಿ ಸ್ಪರ್ಧಿಸಲು ಹೇಗೆ 21 ವಯಸ್ಸನ್ನು ಕಡ್ಡಾಯಗೊಳಿಸಲಾಗಿದೆಯೋ ಹಾಗೆಯೇ ಮತದಾನದ ವಯಸ್ಸನ್ನು 21 ವರ್ಷಕ್ಕೆ ಸೀಮಿತಗೊಳಿಸಬೇಕಾಗಿದೆ. ಆಗ ಮಾತ್ರ ಭಾರತೀಯ ಪ್ರಜಾಪ್ರಭುತ್ವದಲ್ಲಿ ಯೋಗ್ಯರು ಆಡಳಿತ ನಡೆಸಲು ಒಂದಿಷ್ಟು ಸಾಧ್ಯವಾಗುತ್ತದೆ. ಯುವ ಪೀಳಿಗೆಯಲ್ಲಿ ಕೋಮುವಾದದ ದ್ವೇಷ ತುಂಬಿ ದೇಶ ಆಳುವುದು ತಪ್ಪುತ್ತದೆ.

ಬ್ರಾಹ್ಮಣವಾದ ಮತ್ತು ಪ್ಯಾಸಿಸ್ಟ್ ಶಕ್ತಿಗಳು ಮೇಲುಗೈ ಸಾಧಿಸಿರುವ ಸಂದರ್ಭದಲ್ಲಿ ಮೂಲ ಸಂವಿಧಾನ ಬುಡಮೇಲಾಗಿದೆ.ಇಂತಹ ಭೌತಿಕ ಅಂಶಗಳನ್ನು ಅಧ್ಯಯನ ಮಾಡಿ ಸಂವಿಧಾನದ ಉಳಿವಿಗಾಗಿ ಒಂದಾಗಬೇಕಿದೆ.

ಸಮಕಾಲೀನ ಸಂದರ್ಭದಲ್ಲಿ “ಲಿಖಿತ ಸಂವಿಧಾನ ಮೌನವಾಗಿ, ಅಲಿಖಿತ ಸಂವಿಧಾನ ಈ ದೇಶವನ್ನು ಆಳುತ್ತಿದೆ” ಇದಕ್ಕೆ ಈ ಹೊತ್ತಿನ ಭಾರತದ ಪರಿಸ್ಥಿತಿಯನ್ನು ಗಮನಿಸಿದಾಗ ಸ್ಪಷ್ಟವಾಗಿ ಅರ್ಥವಾಗುತ್ತದೆ. ಪ್ರಜ್ಞಾವಂತರಾದ ನಾವೆಲ್ಲಾ ಇಂದು ಮೂಲ ಸಂವಿಧಾನದ ಜಾರಿಗಾಗಿ ಒತ್ತಾಯಿಸಲೇಬೇಕಾಗಿದೆ.
✊✊✊✊✊✊✊✊

ಜೈ ಭೀಮ್,
ಜೈ ಭಾರತ್,
ಜೈ ಸಂವಿಧಾನ.

ಸಂವಿಧಾನದ ಉಳಿವಿಗಾಗಿ ನಾವು ನೀವು……. ಮುಂದಾಗೋಣ……

ಬರಹ: ಡಾ. ಹರೀಶ್ ನಲ್ಕೆ
ಸಂಶೋಧನಾ ಬರಹಗಾರರು…

About Author

Leave a Reply

Your email address will not be published. Required fields are marked *

You may have missed