लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕಾಫಿ ನಾಡು ಸಮಾಜ ಸೇವಾ ಸಂಘ ಮೂಡಿಗೆರೆ ಇವರ ವತಿಯಿಂದ ವಿದ್ಯಾರ್ಥಿಗಳಿಗೆ ಸಾಮಾಜಿಕ ಅರಿವು ಎಂಬ ಕಾರ್ಯಕ್ರಮ……

1 min read

ಕಾಫಿ ನಾಡು ಸಮಾಜ ಸೇವಾ ಸಂಘ ಮೂಡಿಗೆರೆ ಇವರ ವತಿಯಿಂದ ವಿದ್ಯಾರ್ಥಿಗಳಿಗೆ ಸಾಮಾಜಿಕ ಅರಿವು ಎಂಬ ಕಾರ್ಯಕ್ರಮ.

 ಮೂಡಿಗೆರೆಯ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಇಂದು ಸಂಜೆ ಏರ್ಪಡಿಸಿದ್ದ ಅರಿವು ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಉದ್ಘಾಟನೆಯನ್ನು ಆರಕ್ಷಕ ಸಿಬ್ಬಂದಿ ಎ ಎಸ್ ಐ ತಿಮ್ಮಪ್ಪರವರು ನೆರವೇರಿಸಿದರು. ಕಾಫಿ ನಾಡು ಸಮಾಜ  ಸೇವಾ ಸಂಘದ  ಅಧ್ಯಕ್ಷರಾದ ಶ್ರೀ ಅಸೈನಾರ್ ಬಿಳಗುಳ ಇವರು ಅಧ್ಯಕ್ಷತೆ ವಹಿಸಿದ್ದರು . ಸ್ವಾಗತ ಮತ್ತು ಪ್ರಾಸ್ತಾವಿಕ ನುಡಿಯನ್ನು ಬಕ್ಕಿ ಮಂಜುನಾಥ್ ಅವರು ಕಾಫಿ ನಾಡು ಸಮಾಜ ಸೇವಾ ಸಂಘವು ಹಲವಾರು ವರ್ಷಗಳಿಂದ ಸಮಾಜಮುಖಿ ಕಾರ್ಯಗಳನ್ನು ನಡೆಸಿಕೊಂಡು ಬಂದಿದ್ದು ನೂರಾರು ಅನಾಥರನ್ನು ಮೈ ತೊಳೆದು ಆಹಾರ ಮತ್ತು ಬಟ್ಟೆಯನ್ನು ನೀಡಿ ಸತ್ಕರಿಸಿ ಅನಾಥ ನಿಲಯಗಳಿಗೆ ಅವರದೇ ಖರ್ಚಿನಲ್ಲಿ ಕರೆದುಕೊಂಡು ಹೋಗಿ ಸೇರ್ಪಡೆಸಿ ನೂರಾರು ಅನಾಥರಿಗೆ ದಾರಿದೀಪವಾಗಿದ್ದರೆ..

ಹಾಗೂ ಇನ್ನೂ ಹತ್ತಾರು ಸಮಾಜಮುಖಿ ಕಾರ್ಯಗಳು ಹಸೈನಾರ್ ಇವರು ಮಾಡಿದ್ದು ಅದರಲ್ಲಿ ಅನೇಕ ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡುವುದು ಕಷ್ಟದಲ್ಲಿರುವ ರೋಗಿಗಳಿಗೆ ಧನಸಹಾಯ ಮಾಡುವುದು ಕೋವಿಡ್ ಸಮಯದಲ್ಲಿ ಹಲವಾರು ಸಮಾಜಮುಖಿ ಕೆಲಸಗಳನ್ನು ಮಾಡಿದ್ದು ರಾಜ್ಯ ಮತ್ತು ವಿವಿಧ ಜಿಲ್ಲೆಗಳಲ್ಲಿ ಅನೇಕ ಪ್ರಶಸ್ತಿಗಳಿಗೆ ಬಾಜನರಾಗಿದ್ದಾರೆ.. ಇವರ ಈ ಸಮಾಜ ಸೇವೆ ನಿರಂತರವಾಗಿ ಸಾಗಲಿ ಎಂದು ನುಡಿದರು,ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ

ಎ ಎಸ್ ಐ ತಿಮ್ಮಪ್ಪ ರವರು ವಿದ್ಯಾರ್ಥಿಗಳನ್ನು ಕುರಿತು ಮೊಬೈಲ್ ಮತ್ತು ದುಶ್ಚಟಗಳಿಂದ ದೂರವಿರುವಂತೆ ಮತ್ತು ಸಮಾಜದ ಮೇಲೆ ಕಾನೂನಿನ ಮೇಲೆ ಗೌರವವನ್ನು ಇಡಬೇಕು ಹಾಗೂ ಪ್ರತಿಯೊಬ್ಬ ವಿದ್ಯಾರ್ಥಿಯು ಯಾವುದೇ ದುಶ್ಚಟಕ್ಕೆ ಬಲಿಯಾಗದೆ ವಿದ್ಯಾಭ್ಯಾಸದಲ್ಲಿ ಉನ್ನತ ಮಟ್ಟಕ್ಕೆ ಏರಿ ತಮ್ಮ ಭವ್ಯ ಭವಿಷ್ಯವನ್ನು ನಿರ್ಮಿಸಿಕೊಳ್ಳಬೇಕು ಕಾನೂನು ಸದಾ ತಮ್ಮೆಲ್ಲರ ಪರವಾಗಿ ಇರುವುದು ಎಂದು ಕಾನೂನ ಬಗ್ಗೆ ಅರಿವು ಮೂಡಿಸುವ ಹಿತನುಡಿಗಳನ್ನು ನುಡಿದರು.

‎ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದ ಸ್ಕೌಟ್ ಅಂಡ್ ಗೈಡ್ಸ್ ಕಾರ್ಯದರ್ಶಿ , ರಕ್ಷಿತ್ ಬಾಳೂರು ಇವರು ಮಾತನಾಡಿ ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಮೊಬೈಲ್ ಬಳಕೆ ಮಾಡುವಾಗ ಸಾಮಾಜಿಕ ಜಾಲತಾಣಗಳಲ್ಲಿ ಜಾಗೃತ ವಹಿಸಬೇಕು ಹಾಗೂ ಹಲವಾರು ನವೀಕರಣಗೊಂಡ ಆಪ್ ಗಳು ಮೊಬೈಲ್ ಗಳಲ್ಲಿ ಹರಿದಾಡುತ್ತಿದ್ದು ಆಪ್ ಗಳನ್ನು ವಿದ್ಯಾರ್ಥಿಗಳು ಬಳಸುವುದರಿಂದ ನಿಮ್ಮ ಜೀವನದಲ್ಲಿ ಸೈಬರ್ ಕ್ರೈಮ್ ಅಂತ ಅಪರಾಧಗಳ ಒಳಗೆ ಸಿಲುಕುವಂತೆ ಆಗುತ್ತದೆ.

‎ ಆದ್ದರಿಂದ ಮೊಬೈಲ್ ಬಿಡಿ. ಪುಸ್ತಕ ಇಡಿ ಎಂದು ನುಡಿದರು ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಅವಿನ್ ಟಿವಿಯ ಸ್ಥಾನಿಕ ಸಂಪಾದಕರು ಆದ ಶ್ರೀ ಮಗ್ಗಲಮಕ್ಕಿ ಗಣೇಶ್ ಅವರು ವಿದ್ಯಾರ್ಥಿಗಳನ್ನು ಕುರಿತು ತಂದೆ ತಾಯಿ ಶಿಕ್ಷಕರು ವಿದ್ಯಾರ್ಥಿ ನಿಲಯದ ಮೇಲ್ವಿಚಾರಕರು ತಮಗೆ ಬುದ್ಧಿ ಹೇಳುವ ಮಾತನ್ನು ತಿಳುವಳಿಕೆಯ ಮಾತಾಗಿ ತಾವೆಲ್ಲ ವಿದ್ಯಾರ್ಥಿಗಳು ಸ್ವೀಕರಿಸುವುದರಿಂದ ನಿಮ್ಮ ವಿದ್ಯಾರ್ಥಿ ಬದುಕಲ್ಲಿ ಸಣ್ಣ ತಪ್ಪುಗಳು ಆಗದಂತೆ ನಿಮಗೆ ನೀವೇ ಪರಿವರ್ತನೆ ಹೊಂದುತ್ತೀರಿ ಎಂಬ ಸಂದೇಶದ ನುಡಿಯನ್ನು ನುಡಿದರು.

ಈ ಸಾಮಾಜಿಕ ಅರಿವು ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಕಾಫಿನಾಡು ಸಂಘದ ಅಧ್ಯಕ್ಷರಾದ ಹಸೈನಾರ್ ಮಾತನಾಡಿ ಸಮಾಜ ಸೇವೆ ತೊಡಗುವುದರಲ್ಲಿ ನನಗೆ ಆತ್ಮ ತೃಪ್ತಿ ಇದೆ ನನ್ನ ದುಡಿಮೆಯ ಒಂದಿಷ್ಟು ಭಾಗವನ್ನು ಸಮಾಜ ಸೇವೆಗೆಂದು ಮುಡುಪುಟ್ಟಿದ್ದೇನೆ ಇನ್ನು ಮುಂದೆಯೂ ಇದೇಸೇವೆಯಲ್ಲಿ ತೊಡಗುತ್ತೇನೆ ಎಂದು ನೋಡಿದರು ಈ ಸಾಮಾಜಿಕ ಅರಿವು ಕಾರ್ಯಕ್ರಮದಲ್ಲಿ ಆರಕ್ಷಕ ಸಿಬ್ಬಂದಿ ಮೇಘರಾಜ್ ಬಾಲಕಿಯರ ವಿದ್ಯಾರ್ಥಿ ನಿಲಯದ ಮೇಲ್ವಿಚಾರಕರಾದ, ಆರತಿ,,,,,, ಹಾಗೂ ಕನ್ನಡ ಸಾಹಿತ್ಯ ಪರಿಷತ್ ಯುವ ಘಟಕದ ಅಧ್ಯಕ್ಷರಾದ ಚಂದ್ರು ಒಡೆಯರ್. ವಿದ್ಯಾರ್ಥಿ ನಿಲಯದ ಶಿಕ್ಷಕರು ಸಿಬ್ಬಂದಿ ವರ್ಗ ಅಡುಗೆ ಸಹಾಯಕರುಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಕಾರ್ಯಕ್ರಮದ ನಿರೂಪಣೆಯನ್ನು ವಸಂತ್ ಹಾರ್ಗೋಡು ಇವರು ನೆರವೇರಿಸಿಕೊಟ್ಟರು

About Author

Leave a Reply

Your email address will not be published. Required fields are marked *

You may have missed