लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
16/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎ಅಸ್ಪುರ್ಷನೊಬ್ಬ ಅದ್ಯಕ್ಷ….  ಕೃಷಿ ಪತ್ತಿನ ಸಹಕಾರ ಸಂಘ ದಾರದಹಳ್ಳಿಯಲ್ಲಿ ಹೊಸ ಅದ್ಯಾಯ ಬರೆದ ಕೆಸವಳಲು ಸಿದ್ದೇಶ್….

1 min read

‎ಅಸ್ಪುರ್ಷನೊಬ್ಬ ಅದ್ಯಕ್ಷ….

  •  ಕೃಷಿ ಪತ್ತಿನ ಸಹಕಾರ ಸಂಘ ದಾರದಹಳ್ಳಿಯಲ್ಲಿ ಹೊಸ ಅದ್ಯಾಯ ಬರೆದ ಕೆಸವಳಲು ಸಿದ್ದೇಶ್

ಮೂಡಿಗೆರೆ ತಾಲೂಕಿನಲ್ಲಿ ಸುಮಾರು 16.ಕೃಷಿಪತ್ತಿನ ಸಹಕಾರ ಸಂಘಗಳಿದ್ದು,ಸ್ವತಂತ್ರ್ಯ ಬಂದು ಪ್ರಜಾಪ್ರಭುತ್ವ ನೆಲೆಗೊಂಡು ಸಂವಿಧಾನದ ನೆರವಿನಿಂದ ಸಹಕಾರ ಕಾಯ್ದೆ 1959/60.ಕಾನೂನು ಪ್ರಕಾರ ಸಹಕಾರ ಸಂಘಗಳು ಸ್ಥಾಪನೆಯಾದವು.

‎ ನಿಮಗೆ ಗೊತ್ತೇ ಇದೆ ತಾಲೂಕಿನಲ್ಲಿ ಭೂ ಮಾಲೀಕರುಗಳು. ಒಕ್ಕಲಿಗರು. ಲಿಂಗಾಯಿತರು ಹೆಚ್ಚು ಅಧ್ಯಕ್ಷ.ಉಪಾಧ್ಯಕ್ಷ ಸ್ಥಾನ ಅನುಭವಿಸಿದ್ದಾರೆ ಮತ್ತು ಹಿಂದುಳಿದವರಾದ ಬಿಲ್ಲವ,ವಿಶ್ವಕರ್ಮ, ಕುಂಬಾರಶೆಟ್ರು ಸಮುದಾಯದವರು ಅಧಿಕಾರ ಸಿಕ್ಕಿರಬಹುದು ಮತ್ತು ಕ್ರಿಶ್ಚಿಯನ್, ಮುಸ್ಲಿಂ ಸಮುದಾಯದವರಿಗೆ ಬೆರಳೆಣಿಕೆಯಷ್ಟು ಅಧ್ಯಕ್ಷ ಸ್ಥಾನ ಸಿಕ್ಕಿರ ಬಹುದು.

‎ ಆದರೆ ಇತ್ತೀಚೆಗೆ ವಿಧಾನ ಸಭೆಯಲ್ಲಿ sc /st ಸಮುದಾಯದವರಿಗೆ ಸಹಕಾರ ಸಂಘಗಳಲ್ಲಿ ಮೀಸಲಾತಿ ಕೊಡಬೇಕು ಅಂತ ಚರ್ಚೆ ಆಗಿ ವಿಧಾನ ಪರಿಷತಲ್ಲಿ ಬಿದ್ದು ಹೋಗಿರುವ ವಿಷಯ ಕಣ್ಣು ಮುಂದೆ ಇದೆ.ಆದರೆ ಸಾಮಾಜಿಕ ನ್ಯಾಯ ಸಮಾನತೆ ಮಾತನಾಡುವ ಜನ ಇದುವರೆಗೂ ತಳಸಮುದಾಯದ sc /st ಸಮುದಾಯ ಇದುವರೆಗೂ ರಾಜ್ಯ/ಜಿಲ್ಲೆ /ತಾಲೂಕಿನಲ್ಲಿ ಅಸ್ಪುರ್ಷ ಸಮುದಾಯದವರಿಗೆ ಅಧ್ಯಕ್ಷತೆ ಕೊಟ್ಟ ಉದಾಹರಣೆ ಇಲ್ಲ.

sc/st ಸಮುದಾಯದವರು ವಿದ್ಯೆ ಇಲ್ಲ,ಬುದ್ದಿ ಇಲ್ಲ,ನೆಟ್ಟಗೆ ಮನೆನೇ ಇಲ್ಲ ಅವರ ಕೈಗೆ ಹಣಕಾಸಿನ ವ್ಯವಹಾರ ಕೊಟ್ರೆ ದಿವಾಳಿ ಮಾಡುತಾರೆ ಎಂಬ ಅಪನಂಬಿಕೆ ಇ ಸಮಾಜದಲ್ಲಿ ಹಲವಾರು ವರ್ಷಗಳಿಂದ ಬಂದಿದೆ ಆದರೆ ನಮ್ಮಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೋಕಿನ ದಾರದಹಳ್ಳಿಕೃಷಿ ಪತ್ತಿನ ಸಹಕಾರ ಸಂಘದ ಎಲ್ಲ ನಿರ್ದೇಶಕರು ಹೊಸ ಅದ್ಯಾಯ ಬರೆದಿದ್ದಾರೆ ದಾರದಹಳ್ಳಿ ಇ ಹಿಂದೇನೆ ರಾಜ್ಯ ರಾಷ್ಟ ಗಮನ ಸೆಳೆದ ಗ್ರಾಮ. ಇ ಊರಿನ ಡಿ .ಬಿ. ಚಂದ್ರೆಗೌಡ ವಿಧಾನ ಸಭೆಯ ಸ್ವೀಕರ್ ಆದವರು ಮತ್ತೆ ಡಿ ಕೆ ತಾರಾದೇವಿ ಕೇಂದ್ರ ಮಂತ್ರಿ ಯಾದವರು ಹೀಗೆ ಹಲವಾರು ವಿಶೇಷತೆ ಕಂಡ ದಾರದಹಳ್ಳಿ ಈಗ ಒಬ್ಬ ಅಸ್ಪುರ್ಷ ಸಮುದಾಯದ ಕೆಸವಳಲು ಸಿದ್ದೇಶ್ ರವರನ್ನು ಅಧ್ಯಕ್ಷರಾಗಿ ಮಾಡಿ ಇಡೀ ರಾಜ್ಯದ ಗಮನ ಸೆಳೆದಿದೆ ಹಾಗಾಗಿ ಅತ್ಯ್ಯಂತ ತಳ ಸಮುದಾಯದ ಒಬ್ಬ ಸಹಕಾರ ದುರಿಣರಾದವರನ್ನು ಅಧ್ಯಕ್ಷ ರನ್ನಾಗಿ ಮಾಡಿದ ಎಲ್ಲ ನಿರ್ದೇಶಕರಿಗೂ ಹಾಗು ಆ ಗ್ರಾಮದ ಎಲ್ಲ ರಾಜಕೀಯ ನಾಯಕರಿಗೂ ತುಂಬು ಹೃದಯದ ಅಭಿನಂದನೆಗಳು….

ಬರಹ:

ಪಿ.ಕೆ.ಮಂಜುನಾಥ. ಪಲ್ಗುಣಿ…

About Author

Leave a Reply

Your email address will not be published. Required fields are marked *

You may have missed